ಚಂಡೀಗಢ: ‘ಜಾತಿ, ಮತ ಹಾಗೂ ಮತ ಬ್ಯಾಂಕ್ ರಾಜಕೀಯದ ಸುತ್ತಲೇ ಒಂದು ಕಾಲದಲ್ಲಿ ಗಿರಕಿ ಹೊಡೆಯುತ್ತಿದ್ದ ದೇಶದ ಚುನಾವಣಾ ಸಂಸ್ಕೃತಿಯನ್ನೇ ಪ್ರಧಾನಿ ನರೇಂದ್ರ ಮೋದಿ ಬದಲಿಸಿದ್ದಾರೆ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಶನಿವಾರ ಹೇಳಿದ್ದಾರೆ.

ಹರಿಯಾಣದ ಪಂಚಕುಲದಲ್ಲಿ ರೋಡ್ ಶೋ ನಡೆಸಿದ ನಂತರ ಮಾತನಾಡಿದ ಅವರು, ‘ಬರಲಿರುವ ಚುನಾವಣೆಯಲ್ಲಿ ರಾಜ್ಯದಲ್ಲಿರುವ 10 ಲೋಕಸಭಾ ಕ್ಷೇತ್ರಗಳಲ್ಲಿ ಎಲ್ಲವನ್ನೂ ಭಾರತೀಯ ಜನತಾ ಪಕ್ಷ ಗೆಲ್ಲಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ದೇಶದಲ್ಲಿ ಮೊದಲು ಜನರನ್ನು ಒಡೆದು ಆಳುವ ಚುನಾವಣೆಗಳು ಇದ್ದವು. ಅವುಗಳಲ್ಲಿ ಜಾತಿ, ಮತಗಳೇ ಪ್ರಮುಖ ವಿಷಯವಾಗಿದ್ದವು. ಆದರೆ ನರೇಂದ್ರ ಮೋದಿ ಅವರು ಎಲ್ಲರೊಂದಿಗೆ, ಎಲ್ಲರ ಏಳಿಗೆ, ಎಲ್ಲರ ವಿಶ್ವಾಸ ಮತ್ತು ಎಲ್ಲರ ಪ್ರಯತ್ನ ಎಂದು ಹೇಳುವ ಮೂಲಕ ಇಡೀ ದೇಶವನ್ನು ಒಂದುಗೂಡಿಸಿದ್ದಾರೆ. ದೇಶವು ಈ ಮಂತ್ರದೊಂದಿಗೆ ಮುಂದಕ್ಕೆ ಸಾಗುತ್ತಿದೆ’ ಎಂದರು.

‘ಮೋದಿ ಅವರು ಈಗ ದೇಶ ಹಾಗೂ ವಿಶ್ವದ ಅತ್ಯಂತ ಪ್ರಭಾವಿ ನಾಯಕ. ಇಂಥ ಮಹಾನ್ ನಾಯಕ ಬಿಜೆಪಿ ಪಕ್ಷದವರು ಎಂಬುದೇ ನಮ್ಮ ಹೆಮ್ಮೆ. ಚೀನಾದ ಮಾಧ್ಯಮಗಳೂ ನರೇಂದ್ರ ಮೋದಿ ನೇತೃತ್ವದ ಭಾರತದ ಬೆಳವಣಿಗೆಯನ್ನು ಮೆಚ್ಚಿ ಬರೆಯುತ್ತಿವೆ’ ಎಂದಿದ್ದಾರೆ.

ಹರಿಯಾಣದಲ್ಲಿ ಬಿಜೆಪಿಯು ಜನನಾಯಕ್ ಜನತಾ ಪಾರ್ಟಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.