ಕೊಚ್ಚಿ: ಮಲಯಾಳ ಸಿನಿಮಾ ನಟ ಮೋಹನ್ ಲಾಲ್ ಅವರ ಬಳಿ ಇರುವ ಆನೆ ದಂತದಿಂದ ತಯಾರಿಸಿದ ವಸ್ತುಗಳಿಗೆ ಅರಣ್ಯ ಇಲಾಖೆ ನೀಡಿದ್ದ ಮಾಲೀಕತ್ವ ಪ್ರಮಾಣಪತ್ರಗಳು ಅಮಾನ್ಯ ಮತ್ತು ಅವುಗಳನ್ನು ಕಾನೂನುಬದ್ಧಗೊಳಿಸಲು ಸಾಧ್ಯವಿಲ್ಲ ಎಂದು ಕೇರಳ ಹೈಕೋರ್ಟ್ ಶುಕ್ರವಾರ ಹೇಳಿದೆ.

ಒಂದೊಮ್ಮೆ ದಂತದ ವಸ್ತುಗಳನ್ನು ಉಳಿಸಿಕೊಳ್ಳಲು ನಟನಿಗೆ ಅವಕಾಶ ಕಲ್ಪಿಸಲು ಸರ್ಕಾರ ಬಯಸಿದರೆ, ವನ್ಯಜೀವಿ (ರಕ್ಷಣೆ) ಕಾಯ್ದೆ 1972ರ ಸೆಕ್ಷನ್ 40(4)ರ ಅಡಿಯಲ್ಲಿ ಹೊಸ ಅಧಿಸೂಚನೆಯನ್ನು ಹೊರಡಿಸಬಹುದು ಎಂದು ನ್ಯಾ. ಎ.ಕೆ. ಜಯಶಂಕರನ್ ನಂಬಿಯಾರ್ ಮತ್ತು ನ್ಯಾ. ಜೋಬಿನ್ ಸೆಬಾಸ್ಟಿಯನ್ ಅವರಿದ್ದ ವಿಭಾಗಿಯ ಪೀಠ ಹೇಳಿದೆ.

ತಮ್ಮ ಬಳಿ ಇರುವ ಎರಡು ಆನೆ ದಂತಗಳು ಮತ್ತು ದಂತ ಬಳಸಿ ಸಿದ್ಧಪಡಿಸಿದ 13 ಕಲಾಕೃತಿಗಳನ್ನು ಸೆಕ್ಷನ್ 40(4)ರ ಅಡಿಯಲ್ಲಿ ಮುಖ್ಯ ವನ್ಯಜೀವಿ ವಾರ್ಡನ್ ಎದುರು ಹಾಜರುಪಡಿಸಿ ನಂತರ ಸೆಕ್ಷನ್ 42ರ ಅಡಿಯಲ್ಲಿ ಅದಕ್ಕೆ ಅನುಮತಿ ಪಡೆದಿರುವುದನ್ನು ಪ್ರಶ್ನಿಸಿ ಕೊಚ್ಚಿಯ ಎಲೂರಿನ ಕೆ.ಎ. ಪೌಲೋಸ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಈ ಪೀಠ ನಡೆಸಿತು.

ಪೆರುಂಬವೂರ್ನ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ದಂತಗಳಿಗೆ ಸಂಬಂಧಿಸಿದ ಪ್ರಕರಣ ತನಿಖೆ ಹಂತದಲ್ಲಿದ್ದರೂ, ಅರಣ್ಯ ಇಲಾಖೆ ನಟನಿಗೆ ಪ್ರಮಾಣಪತ್ರವನ್ನು ನೀಡಿದೆ ಎಂದು ಪೌಲೋಸ್ ಆರೋಪಿಸಿದ್ದರು.

ವಾದ ಹಾಗೂ ಪ್ರತಿವಾದವನ್ನು ಆಲಿಸಿದ ಪೀಠವು, ಮೋಹನ ಲಾಲ್ ಅವರು ತಮ್ಮ ಬಳಿ ಇರುವ ದಂತದ ವಸ್ತುಗಳನ್ನು ಘೋಷಿಸಿಕೊಳ್ಳುವಂತೆ ಸರ್ಕಾರ ಅಧಿಸೂಚನೆ ಹೊರಡಿಸಿದೆ. ನಟ ಅದನ್ನು ಪೂರ್ಣಗೊಳಿಸಿದ್ದಾರೆ. ಆದರೆ ಇಲ್ಲಿರುವ ಮೂಲ ಪ್ರಶ್ನೆ ಎಂದರೆ, ಅಧಿಸೂಚನೆಯು ಶಾಸನಬದ್ಧ ಅವಶ್ಯಕತೆಗಳನ್ನು ಪೂರೈಸುತ್ತವೆಯೇ ಎಂಬುದಾಗಿದೆ ಎಂದು ಪೀಠ ಅಭಿಪ್ರಾಯಪಟ್ಟಿತು.

ಮತ್ತೊಂದೆಡೆ ಅಧಿಸೂಚನೆಯನ್ನು ಅಧಿಕೃತ ಗೆಜೆಟ್ನಲ್ಲಿ ಪ್ರಕಟಿಸಲಾಗಿಲ್ಲ ಎಂದು ರಾಜ್ಯ ಸರ್ಕಾರ ಒಪ್ಪಿಕೊಂಡಿದೆ ಎಂಬ ಅಂಶವನ್ನೂ ಪೀಠ ದಾಖಲಿಸಿಕೊಂಡಿತು. ಆದರೆ ಇದು ಕಾಯ್ದೆಯ ಅಡಿಯಲ್ಲಿ ಕಡ್ಡಾಯವಾಗಿದೆ ಎಂಬುದನ್ನೂ ಪೀಠ ಹೇಳಿತು.

ಆದರೆ ಇತರ ಮಾಧ್ಯಮಗಳ ಮೂಲಕ ನೀಡಿದ ಜಾಹೀರಾತು ಸಾಕು ಎಂಬ ಸರ್ಕಾರದ ವಾದವನ್ನು ಪೀಠ ತಳ್ಳಿ ಹಾಕಿತು. ಜತೆಗೆ ಸರ್ಕಾರದ ಇಂಥ ವಾದ ‘ಆಘಾತಕಾರಿ’ ಎಂದೂ ಕಳವಳ ವ್ಯಕ್ತಪಡಿಸಿತು.

‘ಆದ್ದರಿಂದ 2015ರ ಡಿ. 16ರ ಮತ್ತು 2016ರ ಫೆ. 17ರ ಸರ್ಕಾರದ ಆದೇಶಗಳನ್ನು ಅಮಾನ್ಯ ಮಾಡಲಾಗಿದೆ ಮತ್ತು ಅವುಗಳನ್ನು ಕಾನೂನುಬದ್ಧವಾಗಿ ಜಾರಿಗೊಳಿಸಲು ಸಾಧ್ಯವಿಲ್ಲ’ ಎಂದು ನ್ಯಾಯಾಲಯ ಹೇಳಿದೆ.

‘ದಂತಗಳ ಮಾಲೀಕತ್ವ ಹೊಂದಲು ಸರ್ಕಾರ ಹೇಗೆ ಪ್ರಮಾಣಪತ್ರ ನೀಡಿತು’ ಎಂದು ಪ್ರಶ್ನಿಸಿದ ಪೀಠವು, ‘ಇಂಥ ಅಂಶಗಳು ಬಾಕಿ ಇರುವ ಇತರ ಕ್ರಿಮಿನಲ್ ಮೊಕದ್ದಮೆಗಳಲ್ಲಿ ನಟನಿಗೆ ಹಾನಿಯನ್ನುಂಟು ಮಾಡಬಹುದು’ ಎಂದೂ ಎಚ್ಚರಿಸಿತು.

ಕಾನೂನಿನ ಅಡಿಯಲ್ಲಿ ಅನುಮತಿಸಲಾದ ವಿನಾಯಿತಿ ನೀಡಲು ಸೆಕ್ಷನ್ 40(4)ರ ಅಡಿಯಲ್ಲಿ ಹೊಸ ಅಧಿಸೂಚನೆ ಹೊರಡಿಸಲು ರಾಜ್ಯ ಸರ್ಕಾರಕ್ಕೆ ಸ್ವಾತಂತ್ರ್ಯವಿದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.