ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಗೋಳ ಅಧ್ಯಯನ: ಇಸ್ರೊದ ‘ಎಕ್ಸ್‌ಪೊಸ್ಯಾಟ್‌’ ಸಜ್ಜು

ಇಸ್ರೊ ಹಿರಿಮೆಗೆ ಮತ್ತೊಂದು ಗರಿ * ಸೂರ್ಯ ವೀಕ್ಷಣಾಲಯ ಯಶಸ್ವಿ ಉಡ್ಡಯನ
Published 2 ಸೆಪ್ಟೆಂಬರ್ 2023, 15:33 IST
Last Updated 2 ಸೆಪ್ಟೆಂಬರ್ 2023, 15:33 IST
ಅಕ್ಷರ ಗಾತ್ರ

ಬೆಂಗಳೂರು (ಪಿಟಿಐ): ಚಂದ್ರಯಾನ–3 ಮತ್ತು ‘ಆದಿತ್ಯ ಎಲ್‌1’ ಯಶಸ್ಸಿನ ಬಳಿಕ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೊ) ಈಗ ಖಗೋಳದ ಕೌತುಕಗಳ ಅಧ್ಯಯನದ ಕಾರ್ಯಯೋಜನೆಗೆ ಸಜ್ಜಾಗಿದೆ. 

ಪ್ರತಿಕೂಲ ಸಂದರ್ಭದಲ್ಲೂ ಖಗೋಳದಲ್ಲಿ ಹೊರಹೊಮ್ಮುವ ಶಕ್ತಿ ಎಕ್ಸ್‌–ರೇ ಮೂಲಗಳ ವಿವಿಧ ಆಯಾಮಗಳ ಅಧ್ಯಯನದ ಎಕ್ಸ್‌ಪೊಸ್ಯಾಟ್‌ (ಎಕ್ಸ್–ರೇ ಪೊಲಾರಿಮೀಟರ್‌ ಸ್ಯಾಟಲೈಟ್‌) ಉಡಾವಣೆಗೆ ಇಸ್ರೊ ಸಿದ್ಧತೆ ನಡೆಸಿದೆ.

ಭೂಮಿಯ ಕೆಳಮಟ್ಟದ ಕಕ್ಷೆಯಲ್ಲಿ ಪರಿಭ್ರಮಿಸಲಿರುವ ಈ ಉಪಗ್ರಹವು ಎರಡು ವೈಜ್ಞಾನಿಕ ಉಪಕರಣಗಳನ್ನು ಒಳಗೊಂಡಿರಲಿದೆ ಎಂದು ಇಸ್ರೊ ವಿವರಿಸಿದೆ.

ಪಾಲಿಕ್ಸ್‌ (ಪೊಲ್ಯಾರಿಮೀಟರ್ ಇನ್‌ಸ್ಟ್ರುಮೆಂಟ್‌ ಇನ್‌ ಎಕ್ಸ್‌ ರೇ) ಧ್ರುವಗಳ ಕೋನದ ಮಾನದಂಡಗಳ ಅಧ್ಯಯನ ಮಾಡಿದರೆ, ಎಕ್ಸ್‌ಪೆಕ್ಟ್‌ (ಎಕ್ಸ್‌ ರೇ ಸ್ಪೆಕ್ಟ್ರೊಸ್ಕೋಪಿ) ಉಪಕರಣ ಶಕ್ತಿಯ ವ್ಯಾಪ್ತಿಯನ್ನು ಅಂದಾಜಿಸಿ ಮಾಹಿತಿಯನ್ನು ರವಾನಿಸಲಿದೆ ಎಂದು ಇಸ್ರೊ ತಿಳಿಸಿದೆ. 

‘ಎಕ್ಸ್‌ಪೊಸ್ಯಾಟ್‌ ಉಡಾವಣೆಗೆ ಸಿದ್ಧವಾಗಿದೆ’ ಎಂದು ಇಸ್ರೊ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದರು. ಆದರೆ, ಉಡಾವಣೆಯ ಸಮಯ ಸೇರಿದಂತೆ ಹೆಚ್ಚಿನ ಮಾಹಿತಿಯನ್ನು ಅವರು ಬಹಿರಂಗಪಡಿಸಿಲ್ಲ.

‘ಆದಿತ್ಯ ಎಲ್‌1’ ಅಂತರಿಕ್ಷ ವೀಕ್ಷಣಾಲಯ ಹೊತ್ತಿದ್ದ ಪಿಎಸ್‌ಎಲ್‌ವಿ ವಾಹಕವು ಶನಿವಾರ ಶ್ರೀಹರಿಕೋಟದಲ್ಲಿರುವ ಸತೀಶ್‌ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆಗೊಂಡಿತು –ಪಿಟಿಐ ಚಿತ್ರ
‘ಆದಿತ್ಯ ಎಲ್‌1’ ಅಂತರಿಕ್ಷ ವೀಕ್ಷಣಾಲಯ ಹೊತ್ತಿದ್ದ ಪಿಎಸ್‌ಎಲ್‌ವಿ ವಾಹಕವು ಶನಿವಾರ ಶ್ರೀಹರಿಕೋಟದಲ್ಲಿರುವ ಸತೀಶ್‌ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆಗೊಂಡಿತು –ಪಿಟಿಐ ಚಿತ್ರ
‘ಆದಿತ್ಯ ಎಲ್1’ ಅಂತರಿಕ್ಷ ವೀಕ್ಷಣಾಲಯವಿದ್ದ ಪಿಎಸ್‌ಎಲ್‌ವಿ ಉಡ್ಡಯನ ಕಾರ್ಯಕ್ಕೆ ಸಾಕ್ಷಿಯಾಗಲು ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಬಳಿ ಸೇರಿದ್ದ ಸಮೂಹ –ಪಿಟಿಐ ಚಿತ್ರ
‘ಆದಿತ್ಯ ಎಲ್1’ ಅಂತರಿಕ್ಷ ವೀಕ್ಷಣಾಲಯವಿದ್ದ ಪಿಎಸ್‌ಎಲ್‌ವಿ ಉಡ್ಡಯನ ಕಾರ್ಯಕ್ಕೆ ಸಾಕ್ಷಿಯಾಗಲು ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಬಳಿ ಸೇರಿದ್ದ ಸಮೂಹ –ಪಿಟಿಐ ಚಿತ್ರ
ನಭದತ್ತ ಚಿಮ್ಮಿದ ಪಿಎಸ್‌ಎಲ್‌ವಿ ಸಿ57 ವಾಹಕವು ಶನಿವಾರ ರಾಷ್ಟ್ರಧ್ವಜದ ಹಿನ್ನೆಲೆಯಲ್ಲಿ ಕಂಡುಬಂದಿದ್ದು ಹೀಗೆ –ಪಿಟಿಐ ಚಿತ್ರ
ನಭದತ್ತ ಚಿಮ್ಮಿದ ಪಿಎಸ್‌ಎಲ್‌ವಿ ಸಿ57 ವಾಹಕವು ಶನಿವಾರ ರಾಷ್ಟ್ರಧ್ವಜದ ಹಿನ್ನೆಲೆಯಲ್ಲಿ ಕಂಡುಬಂದಿದ್ದು ಹೀಗೆ –ಪಿಟಿಐ ಚಿತ್ರ
ಚಂದ್ರಯಾನ–3ರ ರೋವರ್ ‘ಪ್ರಜ್ಞಾನ್‌’ ಚಂದಿರನ ಅಂಗಳದಲ್ಲಿ 100 ಮೀಟರ್‌ವರೆಗೂ ಕ್ರಮಿಸಿರುವ ಚಿತ್ರವನ್ನು ಇಸ್ರೊ ಬಿಡುಗಡೆ ಮಾಡಿದೆ –ಪಿಟಿಐ ಚಿತ್ರ
ಚಂದ್ರಯಾನ–3ರ ರೋವರ್ ‘ಪ್ರಜ್ಞಾನ್‌’ ಚಂದಿರನ ಅಂಗಳದಲ್ಲಿ 100 ಮೀಟರ್‌ವರೆಗೂ ಕ್ರಮಿಸಿರುವ ಚಿತ್ರವನ್ನು ಇಸ್ರೊ ಬಿಡುಗಡೆ ಮಾಡಿದೆ –ಪಿಟಿಐ ಚಿತ್ರ
‘ಆದಿತ್ಯ ಎಲ್‌1’ ಅಂತರಿಕ್ಷ ವೀಕ್ಷಣಾಲಯ ಹೊತ್ತಿದ್ದ ಪಿಎಸ್‌ಎಲ್‌ವಿ ವಾಹಕವು ಶನಿವಾರ ಶ್ರೀಹರಿಕೋಟದ ಉಡ್ಡಯನ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆಗೊಂಡಿತು –ಪಿಟಿಐ ಚಿತ್ರ
‘ಆದಿತ್ಯ ಎಲ್‌1’ ಅಂತರಿಕ್ಷ ವೀಕ್ಷಣಾಲಯ ಹೊತ್ತಿದ್ದ ಪಿಎಸ್‌ಎಲ್‌ವಿ ವಾಹಕವು ಶನಿವಾರ ಶ್ರೀಹರಿಕೋಟದ ಉಡ್ಡಯನ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆಗೊಂಡಿತು –ಪಿಟಿಐ ಚಿತ್ರ
ಆದಿತ್ಯ ಎಲ್‌1’ ಯಶಸ್ವಿ ಉಡ್ಡಯನಕ್ಕಾಗಿ ವಿಜ್ಞಾನಿಗಳಿಗೆ ಅಭಿನಂದನೆಗಳು. ಖಗೋಳವನ್ನು ಇನ್ನಷ್ಟು ವಿಸ್ತೃತವಾಗಿ ಅರ್ಥಮಾಡಿಕೊಳ್ಳಲು ಹಾಗೂ ಇಡೀ ಮನುಕುಲದ ಕಲ್ಯಾಣದ ಅಭಿವೃದ್ಧಿಗಾಗಿ ವಿಜ್ಞಾನ ಕ್ಷೇತ್ರದಲ್ಲಿ ನಮ್ಮ ಅವಿರತ ಪ್ರಯತ್ನ ಮುಂದುವರಿಯಲಿದೆ 
ನರೇಂದ್ರ ಮೋದಿ ಪ್ರಧಾನಮಂತ್ರಿ 
ಆದಿತ್ಯ ಎಲ್1 ಯಶಸ್ವಿ ಉಡ್ಡಯನವು ಭಾರತ ಮತ್ತು ಇಸ್ರೊದ ದೃಷ್ಟಿಯಿಂದ ಮತ್ತೊಂದು ಅದ್ವಿತೀಯ ಸಾಧನೆ. ಇಸ್ರೊಗೆ ಅಭಿನಂದಿಸುವ ಜೊತೆಗೆ ಅದರ ಯಶಸ್ಸಿನ ಪಯಣವನ್ನೂ ಮೆಲುಕು ಹಾಕುವುದು ಸ್ತುತ್ಯರ್ಹವಾದುದು.
ಜೈರಾಮ್ ರಮೇಶ್‌ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ

ಆದಿತ್ಯ ಎಲ್‌1’ ಯಶಸ್ವಿ ಉಡ್ಡಯನಕ್ಕೆ ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದ ತಜ್ಞರ ಶ್ಲಾಘನೆ

‘ಸೂರ್ಯಮಂಡಲದ ಒಳನೋಟಕ್ಕೆ ಕನ್ನಡಿ’ ನವದೆಹಲಿ (ಪಿಟಿಐ): ಬಹು ನಿರೀಕ್ಷಿತ ‘ಆದಿತ್ಯ ಎಲ್‌1’ ಅಂತರಿಕ್ಷ ವೀಕ್ಷಣಾಲಯ ಸೂರ್ಯನ ಚಟುವಟಿಕೆಗಳು ಮತ್ತು ಭೂಮಿಯ ಮೇಲೆ ಅದರ ಪರಿಣಾಮ ಅರಿಯಲು ಅಗತ್ಯ ಒಳನೋಟವನ್ನು ಒದಗಿಸಲಿದೆ ಎಂದು ತಜ್ಞರು ಹೇಳಿದ್ದಾರೆ. ಯಶಸ್ವಿ ಉಡ್ಡಯನಕ್ಕಾಗಿ ‘ಇಸ್ರೊ’ದ ಈ ಸಾಧನೆಗೆ ಬಾಹ್ಯಾಕಾಶ ಹಾಗೂ ವಿಜ್ಞಾನ ಕ್ಷೇತ್ರದ ತಜ್ಞರು ಶ್ಲಾಘಿಸಿದ್ದು ವಿಜ್ಞಾನ ಮತ್ತು ಮನುಕುಲದ ದೃಷ್ಟಿಯಿಂದ ಇದು ಮಹತ್ವದ ಯೋಜನೆಯಾಗಿದೆ ಎಂದಿದ್ದಾರೆ. ‘ಇದು ಸೂರ್ಯನ ವಾತಾವರಣ ಅಧ್ಯಯನದ ಭಾರತದ ಮೊದಲ ಯೋಜನೆ. ಇದು ಎಲ್‌1 ಪಾಯಿಂಟ್‌ಗೆ ತಲುಪಿದ್ದೇ ಆದರೆ ಇಸ್ರೊ ಈ ಸಾಧನೆಗೈದ ಮೂರನೇ ಬಾಹ್ಯಾಕಾಶ ಸಂಸ್ಥೆಯಾಗಲಿದೆ’ ಎಂದು ಕೋಲ್ಕತ್ತದ ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನೆ ಸಂಸ್ಥೆಯ ಬಾಹ್ಯಾಕಾಶ ವಿಜ್ಞಾನ ಉನ್ನತ ಅಧ್ಯಯನ ಕೇಂದ್ರದ ಮುಖ್ಯಸ್ಥ ದಿವ್ಯೇಂದು ನಂದಿ ಹೇಳಿದರು. ‘ಲಗ್ರಾಂಜಿಯನ್ ಬಿಂದುವಿನಲ್ಲಿ ಇರಿಸಲಾಗುವ ಯಾವುದೇ ಉಪಗ್ರಹ/ಉಪಕರಣಗಳು ಈ ಬಿಂದುವಿನ ಸುತ್ತ   ಕಕ್ಷೆಯಲ್ಲಿ ಪರಿಭ್ರಮಿಸಲಿವೆ. ಈ ಮೂಲಕ ಸೂರ್ಯನ ಚಟುವಟಿಕೆಗಳನ್ನು ಕುರಿತು ನಿರಂತರವಾದ ಮಾಹಿತಿ ಒದಗಿಸಲಿದೆ. ಇವುಗಳ ಕಾರ್ಯಕ್ಕೆ ಭೂಮಿ ಅಥವಾ ಚಂದ್ರ ಅಡ್ಡಿಯಾಗದು’ ಎಂದು ನಂದಿ ಅವರು ವಿವರಿಸಿದರು. ‘ಸೂರ್ಯನ ಮಂಡಲದಲ್ಲಿ ಕಂಡುಬರುವ ಯಾವುದೇ ಬದಲಾವಣೆಯು ಮೊದಲಿಗೆ ಎಲ್‌1 ನಿಲುಗಡೆ ತಾಣದಲ್ಲಿ ಕಾಣಿಸಲಿದ್ದು ಆ ನಂತರವೇ ಅದರ ಪರಿಣಾಮ ಭೂಮಿಯ ಮೇಲಾಗಲಿದೆ. ಹೀಗಾಗಿ ಒಟ್ಟು ಪರಿಣಾಮಗಳನ್ನು ಮುಂದಾಗಿ ಅಂದಾಜಿಸಲು ಇದು ಸಣ್ಣದಾದ ಆದರೆ ಮಹತ್ವದ ಕಿಂಡಿಯಾಗಿದೆ’ ಎಂದು ಅವರು ವಿಶ್ಲೇಷಿಸಿದರು.  ಅಶೋಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸೋಮಕ್‌ ರಾಯ್‌ಚೌಧರಿ ಅವರು ‘ಆದಿತ್ಯ ಎಲ್‌1’ ಯೋಜನೆಯು ವೈಜ್ಞಾನಿಕ ಕುತೂಹಲವನ್ನು ಮೀರಿದ ಉದ್ದೇಶವನ್ನು ಈಡೇರಿಸಲಿದೆ. ಏಕೆಂದರೆ ಉದ್ಯಮ ಮತ್ತು ಸಮಾಜದ ಮೇಲೆ ಆಗುವ ಪರಿಣಾಮಗಳನ್ನು ಇದರಿಂದ ಅಂದಾಜಿಸುವುದು ಸಾಧ್ಯವಾಗಲಿದೆ’ ಎಂದು ಹೇಳಿದರು.   ಕೋಲ್ಕತ್ತದ ಭಾರತೀಯ ಬಾಹ್ಯಾಂತರಿಕ್ಷ ಭೌತವಿಜ್ಞಾನ ಕೇಂದ್ರದ ನಿರ್ದೇಶಕ ಸಂದೀಪ್‌ ಚಕ್ರವರ್ತಿ ಅವರು ‘ಈ ಯೋಜನೆ ಕಾರ್ಯಸಾಧನೆ ಪರಿಣಾಮ ವರ್ಷಗಳ ಕಾಲ ಪ್ರತಿಬಿಂಬಿಸಲಿದೆ‘ ಎಂದು ಅಭಿಪ್ರಾಯಪಟ್ಟರು. ’15 ವರ್ಷದ ಹಿಂದೆಯೇ ‘ಆದಿತ್ಯ’ ಚಿಂತನೆಯು ಮೊಳಕೆಯೊಡೆದಿತ್ತು. ಮೊದಲಿಗೆ ಸೂರ್ಯನ ಮೇಲ್ಮೈ ವಾತಾವರಣ ಅಧ್ಯಯನ ಮಾಡುವ ಉದ್ದೇಶವಷ್ಟೇ ಇತ್ತು. ನಂತರ ಅದರ ಕಾರ್ಯವ್ಯಾಪ್ತಿ ವಿಸ್ತಾರಗೊಂಡಿತು’ ಎಂದು ಸ್ಮರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT