ನವದೆಹಲಿ: ಚುನಾವಣೆ ನಡೆಯಲಿರುವ ಪಂಜಾಬ್, ಉತ್ತರ ಪ್ರದೇಶ, ಗೋವಾ, ಉತ್ತರಾಖಂಡ ಹಾಗೂ ಮಣಿಪುರ ರಾಜ್ಯಗಳ ಶೇ 41.1ರಷ್ಟು ಮಂದಿ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಬಹಳ ತೃಪ್ತಿ ಇದೆ ಎಂದು ಅಭಿಪ್ರಾಯಪಟ್ಟಿರುವುದಾಗಿ ‘ಎಬಿಪಿ–ಸಿ–ವೋಟರ್–ಐಎಎನ್‌ಎಸ್’ ಸಮೀಕ್ಷಾ ವರದಿ ಹೇಳಿದೆ.

ಸಮೀಕ್ಷೆಯ ಪ್ರಕಾರ ಒಟ್ಟಾರೆ ಶೇ 26.9 ಮಂದಿ ಪ್ರಧಾನಿ ಬಗ್ಗೆ ಸ್ವಲ್ಪ ಮಟ್ಟಿಗೆ ತೃಪ್ತಿ ಇರುವುದಾಗಿಯೂ ಶೇ 29.1 ಮಂದಿ ತೃಪ್ತಿ ಇಲ್ಲವೆಂದೂ ಶೇ 2.6 ಮಂದಿ ಏನೂ ಹೇಳಲಾಗದು ಎಂದು ಪ್ರತಿಕ್ರಿಯಿಸಿದ್ದಾರೆ.

ಚುನಾವಣೆ ನಡೆಯಲಿರುವ ರಾಜ್ಯಗಳ 690 ಕ್ಷೇತ್ರಗಳ 1,07,193 ಮಂದಿಯನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು.

ಓದಿ:ಕಾಂಗ್ರೆಸ್ನ ರೋಗ್ರಗ್ರಸ್ಥ ಮನಸ್ಥಿತಿ: ಹಿಂದುತ್ವದ ಟೀಕೆಗೆ ಸಂಬಿತ್ ಪಾತ್ರಾ ಕಿಡಿ

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಬಗ್ಗೆ ಬಹಳ ತೃಪ್ತಿ ಇದೆ ಎಂದು ಶೇ 36.3 ಮಂದಿ ಹೇಳಿದ್ದಾರೆ. ಸ್ವಲ್ಪ ಮಟ್ಟಿಗೆ ತೃಪ್ತಿ ಇದೆ ಎಂದು ಶೇ 28.4 ಮಂದಿ ಪ್ರತಿಕ್ರಿಯಿಸಿದ್ದರೆ, ಶೇ 31.8ರಷ್ಟು ಜನ ತೃಪ್ತಿ ಇಲ್ಲ ಎಂದು ಹೇಳಿದ್ದಾರೆ. ಶೇ 3.5 ಮಂದಿ ಏನೂ ಹೇಳಲಾಗದು ಎಂದು ಪ್ರತಿಕ್ರಿಯಿಸಿದ್ದಾರೆ.

ಕೇಂದ್ರದ ಆಡಳಿತದ ಬಗ್ಗೆ ಬಹಳಷ್ಟು ತೃಪ್ತಿ ಹೊಂದಿರುವುದಾಗಿ ಹೇಳಿದವರಲ್ಲಿ ಶೇ 50.1ರಷ್ಟು ಜನ ಉತ್ತರ ಪ್ರದೇಶದವರು. ಉಳಿದಂತೆ ಶೇ 36.1 ಮಂದಿ ಉತ್ತರಾಖಂಡ, ಶೇ 35.4 ಜನ ಗೋವಾ, ಶೇ 19.2 ಮಂದಿ ಮಣಿಪುರ ಹಾಗೂ ಶೇ 14ರಷ್ಟು ಮಂದಿ ಪಂಜಾಬ್‌ನವರಾಗಿದ್ದಾರೆ.

ಓದಿ:ಸರ್ಕಾರಿ ಸಾಲಪತ್ರಗಳಲ್ಲಿ ನೇರ ಹೂಡಿಕೆಗೆ ಅವಕಾಶ

ಮಣಿಪುರದ ಶೇ 54.7 ಮಂದಿ ಮೋದಿ ಬಗ್ಗೆ ಸಾಕಷ್ಟು ತೃಪ್ತಿ ಇದೆ ಎಂದು ಹೇಳಿದ್ದಾರೆ. ಉತ್ತರ ಪ್ರದೇಶದ ಶೇ 53.6, ಉತ್ತರಾಖಂಡದ ಶೇ 48.1, ಗೋವಾದ ಶೇ 39.6 ಹಾಗೂ ಪಂಜಾಬ್‌ನ ಶೇ 15.4 ಮಂದಿ ಇದೇ (ಸಾಕಷ್ಟು ತೃಪ್ತಿ ಇದೆ) ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರ್ಕಾರದ ಬಗ್ಗೆ ಸ್ವಲ್ಪ ಮಟ್ಟಿಗೆ ತೃಪ್ತಿ ಇದೆ ಎಂದು ಹೇಳಿದವರಲ್ಲಿ ಶೇ 43.6 ಮಂದೊ ಗೋವಾ, ಶೇ 26.5 ಮಂದಿ ಉತ್ತರಾಖಂಡ, ಶೇ 25.1 ಮಂದಿ ಮಣಿಪುರ, ಶೇ 20.9 ಮಂದಿ ಉತ್ತರ ಪ್ರದೇಶ ಹಾಗೂ ಶೇ 19.3 ಮಂದಿ ಪಂಜಾಬ್‌ನವರು ಎಂದು ಸಮೀಕ್ಷೆ ತಿಳಿಸಿದೆ.

ಓದಿ:ಉತ್ತರ ಪ್ರದೇಶ: ಬಿಜೆಪಿಯ 108 ಸ್ಥಾನಗಳನ್ನು ಕಸಿಯಲಿದೆ ಎಸ್ಪಿ ಎಂದ ಸಮೀಕ್ಷಾ ವರದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.