ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭವಿಷ್ಯ ನಿಧಿ, ₹ 40 ಲಕ್ಷ ಗ್ರಾಚ್ಯುಟಿ ಬಡ ವಿದ್ಯಾರ್ಥಿಗಳಿಗೆ ನೀಡಿದ ಶಿಕ್ಷಕ

Last Updated 2 ಫೆಬ್ರುವರಿ 2022, 16:01 IST
ಅಕ್ಷರ ಗಾತ್ರ

ಪನ್ನಾ:ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರೊಬ್ಬರು ಮಧ್ಯಪ್ರದೇಶದ ಪಟ್ನಾ ಜಿಲ್ಲೆಯಲ್ಲಿ 39 ವರ್ಷಗಳ ಸೇವೆಯ ನಂತರ ನಿವೃತ್ತಿಯ ದಿನದಂದು ತಮ್ಮ ಪಿಎಫ್ ಮತ್ತು ₹ 40 ಲಕ್ಷ ಮೌಲ್ಯದ ಗ್ರಾಚ್ಯುಟಿಯಿಂದ ಎಲ್ಲಾ ಹಣವನ್ನು ಬಡ ವಿದ್ಯಾರ್ಥಿಗಳಿಗೆ ದಾನ ಮಾಡಿದ್ದಾರೆ.

ವಿಜಯ್ ಕುಮಾರ್ ಚನ್ಸೋರಿಯ ಅವರು ಸೋಮವಾರ ಖಾಂಡಿಯಾದ ಪ್ರಾಥಮಿಕ ಶಾಲೆಯಲ್ಲಿ ತಮ್ಮ ಕೆಲಸದ ಕೊನೆಯ ದಿನದಂದು ಅವರನ್ನು ಗೌರವಿಸಲು ಅವರ ಸಹೋದ್ಯೋಗಿಗಳು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಈ ವಿಚಾರವನ್ನು ಘೋಷಿಸಿದ್ದಾರೆ.

'ನನ್ನ ಹೆಂಡತಿ ಮತ್ತು ಮಕ್ಕಳ ಒಪ್ಪಿಗೆಯೊಂದಿಗೆ ನನ್ನೆಲ್ಲ ಭವಿಷ್ಯ ನಿಧಿ ಮತ್ತು ಗ್ರಾಚ್ಯುಟಿ ಹಣವನ್ನು ಬಡ ವಿದ್ಯಾರ್ಥಿಗಳ ಶಾಲೆಗೆ ನೀಡಲು ನಿರ್ಧರಿಸಿದೆ. ಜಗತ್ತಿನಲ್ಲಿ ದುಃಖವನ್ನು ಯಾರೂ ಕಡಿಮೆ ಮಾಡಲು ಸಾಧ್ಯವಿಲ್ಲ, ಆದರೆ, ನಾವು ನಮ್ಮಿಂದಾಗುವ ಒಳ್ಳೆಯದನ್ನು ಮಾಡಬೇಕು' ಎಂದು ಚಾನ್ಸೋರಿಯಾ ಈವೆಂಟ್‌ನಲ್ಲಿ ಹೇಳಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನಿವೃತ್ತ ಶಿಕ್ಷಕ, ನಾನು ಸಾಕಷ್ಟು ಕಷ್ಟ ಪಟ್ಟಿದ್ದೇನೆ. ನನ್ನ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಲು ನಾನು ರಿಕ್ಷಾವನ್ನು ಓಡಿಸುತ್ತಿದ್ದೆ ಮತ್ತು ಹಾಲು ಮಾರುತ್ತಿದ್ದೆ. ನಾನು 1983 ರಲ್ಲಿ ಶಿಕ್ಷಕನಾದೆ. ತನ್ನಿಬ್ಬರು ಪುತ್ರರು ಕೆಲಸ ಮಾಡುತ್ತಿದ್ದಾರೆ ಮತ್ತು ಮಗಳಿಗೆ ಮದುವೆಯಾಗಿದೆ ಎಂದು ಹೇಳಿದರು.

'ನಾನು ಕಷ್ಟದಲ್ಲಿ ಬದುಕುತ್ತಿದ್ದ ಬಡ ವಿದ್ಯಾರ್ಥಿಗಳನ್ನು ಕಂಡೆ ಮತ್ತು ಅವರಿಗಾಗಿ ದಾನ ಮಾಡಿದೆ. ನಾನು ಅವರಿಗೆ ಸಹಾಯ ಮಾಡಿದಾಗಲೆಲ್ಲ ಅವರಿಗಾಗುತ್ತಿದ್ದ ಸಂತೋಷವನ್ನು ನೋಡಿದೆ. ನನ್ನ ಮಕ್ಕಳು ಈಗಾಗಲೇ ಸೆಟಲ್ಡ್ ಆಗಿದ್ದಾರೆ ಮತ್ತು ನನ್ನ ಎಲ್ಲ ಭವಿಷ್ಯ ನಿಧಿ ಮತ್ತು ₹ 40 ಲಕ್ಷ ಮೌಲ್ಯದ ಗ್ರಾಚ್ಯುಟಿ ಹಣವನ್ನು ದೇಣಿಗೆ ನೀಡಲು ನಿರ್ಧರಿಸಿದೆ' ಎಂದು ಅವರು ಹೇಳಿದರು.

ಇಡೀ ಕುಟುಂಬ ಅವರ ನಿರ್ಧಾರವನ್ನು ಬೆಂಬಲಿಸಿದೆ ಎಂದು ಅವರ ಪತ್ನಿ ಹೇಮಲತಾ ಮತ್ತು ಪುತ್ರಿ ಮಹಿಮಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT