ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರ ವಿರೋಧಿ ಹಾಡು: ಮಹಾರಾಷ್ಟ್ರದಲ್ಲಿ ರ್‍ಯಾಪರ್ ಉಮೇಶ್‌ ವಿರುದ್ಧ ದೂರು ದಾಖಲು

Last Updated 9 ಏಪ್ರಿಲ್ 2023, 12:55 IST
ಅಕ್ಷರ ಗಾತ್ರ

ಮುಂಬೈ: ಸರ್ಕಾರ ಮತ್ತು ಆಡಳಿತ ವ್ಯವಸ್ಥೆಯ ವಿರುದ್ಧ ಹಾಡಿದ ಹಾಡನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ ಆರೋಪದ ಮೇಲೆ ರ್‍ಯಾಪರ್‌ ಉಮೇಶ್‌ ಖಾಡೆ ವಿರುದ್ಧ ಮುಂಬೈ ಪೊಲೀಸರು ದೂರು ದಾಖಲಿಸಿದ್ದಾರೆ ಎಂದು ಭಾನುವಾರ ಅಧಿಕಾರಿಗಳು ತಿಳಿಸಿದ್ದಾರೆ.

ವಾಡಲ ಪ್ರದೇಶದಲ್ಲಿ ವಾಸಿಸುವ ರ್‍ಯಾಪರ್‌ ಉಮೇಶ್‌ ಅವರ ‘ಭೋಂಗ್ಲಿ ಕೇಳಿ ಜನತಾ’ (ಜನರು ಎದುರಿಸುತ್ತಿರುವ ಸಮಸ್ಯೆಗಳ ಕುರಿತಂತೆ) ಹಾಡನ್ನು ತಮ್ಮ ಶಂಭೋ ಎಂಬ ಹೆಸರಿನ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ್ದು, ಅದು ಹೆಚ್ಚು ಜನಪ್ರಿಯವಾದ ಹಿನ್ನೆಲೆಯಲ್ಲಿ ಮುಂಬೈ ಪೊಲೀಸ್‌ನ ಅಪರಾಧ ಗುಪ್ತಚರ ಘಟಕದ ಅಧಿಕಾರಿಯೊಬ್ಬರು ಶುಕ್ರವಾರ ದೂರು ದಾಖಲಿಸಿದ್ದಾರೆ.

ಇದಕ್ಕೂ ಮುನ್ನ ಅಂದರೆ ಗುರುವಾರ ಉಮೇಶ್ ಅವರನ್ನು ಪೊಲೀಸರು ವಿಚಾರಣೆ ನಡೆಸಿದ್ದರು. ಎಫ್‌ಐಆರ್‌ ದಾಖಲಾದ ನಂತರ, ಉಮೇಶ್‌ಗೆ ನೋಟಿಸ್‌ ನೀಡಲಾಗಿದ್ದು, ಅಗತ್ಯವಿದ್ದಾಗಲೆಲ್ಲಾ ವಿಚಾರಣೆ ಹಾಜರಾಗುವಂತೆ ಸೂಚಿಸಲಾಗಿದೆ.

ಇದಕ್ಕೆ ಟ್ವೀಟ್‌ ಮೂಲಕ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ರಾಷ್ಟ್ರೀಯ ನಾಯಕ ಜಿತೇಂದ್ರ ಅಹ್ವಾದ್‌, ಉಮೇಶ್‌ ಅವರ ಹಾಡಿನಲ್ಲಿ ಯಾವುದೇ ದೋಷವಿಲ್ಲ ಎಂದಿದ್ದಾರೆ.

ಶಿವಸೇನಾ ಮತ್ತು ಬಿಜೆಪಿ ಸರ್ಕಾರವನ್ನು ಗುರಿಯಾಗಿಸಿಕೊಂಡು ಯಾರ ಹೆಸರನ್ನೂ ತೆಗೆದುಕೊಳ್ಳದೇ ಹಾಡು ಸಿದ್ಧಪಡಿಸಿದ್ದ ರ್‍ಯಾಪರ್ ರಾಜ್‌ ಮುಗ್ಸೆ ವಿರುದ್ಧ ಠಾಣೆ ಜಿಲ್ಲೆಯ ಅಂಬೆರ್ನಾಥ್‌ ಪೊಲೀಸರು ಬುಧವಾರ ದೂರು ದಾಖಲಿಸಿದ್ದಾರೆ. ಒಂದು ವಾರದಲ್ಲಿ ಇಬ್ಬರು ರ್‍ಯಾಪರ್‌ಗಳ ವಿರುದ್ಧ ಮಹಾರಾಷ್ಟ್ರ ಪೊಲೀಸರು ಪ್ರತ್ಯೇಕ ದೂರು ದಾಖಲಿಸಿದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT