ಮುಂಬೈ: ಕೋವಿಡ್ ಲಸಿಕೆ ವಿತರಣೆಗೆ ವೇಗ ನೀಡಿರುವ ಮಹಾರಾಷ್ಟ್ರ ಸರ್ಕಾರ ಮುಂದಿನ 24 ಗಂಟೆಗಳಲ್ಲಿ ಮುಂಬೈನಲ್ಲಿ ಬೃಹತ್ ಲಸಿಕಾ ಕೇಂದ್ರಗಳನ್ನು ತೆರೆಯುವಂತೆ ಸ್ಥಳೀಯ ಆಡಳಿತಕ್ಕೆ ಸೂಚಿಸಿದೆ.

ಕ್ರೀಡಾಂಗಣಗಳು, ಬೃಹತ್ ವೈದಾನಗಳಲ್ಲಿ ಲಸಿಕಾ ಕೇಂದ್ರಗಳನ್ನು ತೆರೆಯಲು ಮುಂಬೈ ಮಹಾನಗರ ಪಾಲಿಕೆ ಈಗಾಗಲೇ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಅಂಧೇರಿ ಸ್ಪೋರ್ಟ್ಸ್ ಕ್ಲಬ್, ಕೂಪರೇಜ್ ಮೈದಾನ, ಶಿವಾಜಿ ಸ್ಟೇಡಿಯಂ, ಓವಲ್ ಮೈದಾನ, ಬ್ರಬೋರ್ನ್ ಸ್ಟೇಡಿಯಂ, ಎಂಐಜಿ ಮೈದಾನ, ಎಂಸಿಎ ಮೈದಾನ, ರಿಲಾಯನ್ಸ್ ಜಿಯೋ ಗಾರ್ಡನ್ ಹಾಗೂ ವಾಂಖೇಡೆ ಸ್ಟೇಡಿಯಂ ನಲ್ಲಿ ಬೃಹತ್ ಲಸಿಕೆ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ಬೃಹತ್ ಮೈದಾನಗಳಲ್ಲಿ ಲಸಿಕೆಗಾಗಿ ಬರುವ ಜನರು ಅಂತರ ಕಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಹಾಗೂ ಜನಜಂಗುಳಿಯ ಸಮಸ್ಯೆ ಇರುವುದಿಲ್ಲ. ಇದರಿಂದ ಸೋಂಕು ಪ್ರಸರಣವನ್ನು ತಡೆಯಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಕಳೆದವಾರ ದಾದರ್ ಮೈದಾನದಲ್ಲಿ ನಡೆದ ಇಂತಹ ಪ್ರಯೋಗ ಯಶಸ್ವಿಯಾಗಿದೆ. ಅಲ್ಲಿ ನಿತ್ಯ 5 ಸಾವಿರ ಜನರಿಗೆ ಲಸಿಕೆ ನೀಡಲಾಗುತ್ತಿದೆ. ಅಗತ್ಯ ವೈದ್ಯಕೀಯ ಸುರಕ್ಷತೆ ಮಾನದಂಡಗಳನ್ನು ಅಳವಡಿಸಿಕೊಂಡು ಲಸಿಕೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಲಸಿಕೆಗಳ ಕೊರತೆಯ ನಡುವೆ ಮಹಾರಾಷ್ಟ್ರ ಸರ್ಕಾರ ಬೃಹತ್ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದೆ. ದಿನದ 24 ಗಂಟೆಯು ಲಸಿಕೆ ನೀಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.