ತಿರುವನಂತಪುರ: ಮುತ್ತೂಟ್ ಫೈನಾನ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಜಾರ್ಜ್ ಅಲೆಕ್ಸಾಂಡರ್ ಕಾರಿನ ಮೇಲೆ ಕಲ್ಲು ತೂರಾಟ ನಡೆದಿದ್ದು, ಅವರ ತಲೆಗೆ ಗಾಯಗಳಾಗಿವೆ. ಕೊಚ್ಚಿಯ ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದ್ದು ಆರೋಗ್ಯ ಸ್ಥಿರವಾಗಿದೆ.

ಜಾರ್ಜ್ ಅವರು ಮುಖ್ಯ ಕಚೇರಿಯೊಳಗೆ ಪೊಲೀಸರ ಕಾವಲಿನಲ್ಲಿ ಹೋಗುತ್ತಿರುವ ಸಂದರ್ಭದಲ್ಲಿ ಒಬ್ಬರು ಜಾರ್ಜ್ ಕಾರಿನ ಮೇಲೆ ಕಲ್ಲು ತೂರಿದ್ದಾರೆ. ಅಹಿತಕರ ಘಟನೆ ನಡೆಯ
ಬಹುದು ಎಂಬ ಮುನ್ನೆಚ್ಚರಿಕೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು.

ಸಿಐಟಿಯು ಕಾರ್ಮಿಕ ಸಂಘಟನೆಯ ಗೂಂಡಾಗಳು ಈ ಕೃತ್ಯ ಎಸಗಿದ್ದಾರೆ ಎಂದು ಸಂಸ್ಥೆಯ ಆಡಳಿತ ಮಂಡಳಿ ಆರೋಪಿಸಿದೆ. ಆದರೆ, ಸಿಐಟಿಯು ಕಾರ್ಮಿಕ ಸಂಘಟನೆ ಈ ಆರೋಪವನ್ನು ತಳ್ಳಿಹಾಕಿದೆ.

ನೌಕರರ ಮುಷ್ಕರ: ಸಂಸ್ಥೆಯ ಹಲವು ನೌಕರರಿಗೆ ಕೆಲಸದಿಂದ ವಜಾ ಮಾಡುವ ನೋಟಿಸ್ ನೀಡಲಾಗಿತ್ತು. ಈ ಕುರಿತು ಕಳೆದ ಒಂದು ವಾರದಿಂದ ನೌಕರರು ಮುಷ್ಕರ ನಡೆಸುತ್ತಿದ್ದಾರೆ. ಈ ಮುಷ್ಕರಕ್ಕೆ ಸಿಐಟಿಯು ಕಾರ್ಮಿಕ ಸಂಘಟನೆ ಬೆಂಬಲ ನೀಡಿದೆ.

ಕಳೆದ ಅಕ್ಟೊಬರ್‌ನಲ್ಲೂ ಸಂಸ್ಥೆಯ ನೌಕರರು 52 ದಿನಗಳ ಮುಷ್ಕರ ಹೂಡಿ
ದ್ದರು. ಆಗ ಸರ್ಕಾರದ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನೌಕರರಿಗೆ ಹಲವು ಭರವಸೆಗಳನ್ನು ಸಂಸ್ಥೆ ನೀಡಿತ್ತು.

ಆಡಳಿತ ಮಂಡಳಿಯು ನೌಕರರನ್ನು ಪ್ರಚೋದಿಸುವ ಕೆಲಸ ಮಾಡುತ್ತಿದೆ. ನೌಕರರ ಜೆತೆ ಮಾತುಕತೆ ನಡೆಸುವ ಯೋಚನೆಯನ್ನೂ ಸಂಸ್ಥೆ ಮಾಡುತ್ತಿಲ್ಲ
–ಟಿ.ಪಿ. ರಾಮಕೃಷ್ಣನ್, ಕೇರಳದ ಕಾರ್ಮಿಕ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.