ಫತೇಹಾಬಾದ್: ರೈತರನ್ನು ಲೂಟಿ ಮಾಡಿದ ಶೆಹನ್ಶಾ (ಚಕ್ರವರ್ತಿ)ಯನ್ನೇ ಕೋರ್ಟ್ಗೆ ಎಳೆದ ನಂತರ ಅವರಿಗೆ ನಡುಕ ಹುಟ್ಟಿದೆ. ಅವರನ್ನು ಶೀಘ್ರದಲ್ಲಿಯೇ ಜೈಲಿಗಟ್ಟಲಾಗುವುದು ಎಂದು ಹೆಸರು ಉಲ್ಲೇಖಿಸದೆ ನರೇಂದ್ರ ಮೋದಿ ಪ್ರಿಯಾಂಕಾ ಗಾಂಧಿ ಅವರ ಪತಿ ರಾಬರ್ಟ್ ವಾದ್ರಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ರೈತರನ್ನು ಲೂಟಿ ಮಾಡಿದ ಶೆಹನ್ಶಾನನ್ನು ಈ ಚೌಕೀದಾರ್ ಕೋರ್ಟಿಗೆಳೆದಿದ್ದಾನೆ.ಜಾಮೀನು ಪಡೆಯುವುದಕ್ಕಾಗಿ ಆವರು ನಿರ್ದೇಶನಾಲಯ ಮತ್ತು ನ್ಯಾಯಾಲಯದ ಸುತ್ತ ಅಲೆಯುತ್ತಿದ್ದಾರೆ. ಅವರು ತನ್ನನ್ನು ತಾನು ಶೆಹೆನ್ಶಾ ಎಂದು ಅಂದುಕೊಂಡಿದ್ದರು. ಆದರೆ ಈಗ ಅವರಿಗೆ ನಡುಕ ಹುಟ್ಟಿದೆ. ನಾನು ಈಗಾಗಲೇ ಅವರನ್ನು ಜೈಲಿನ ಬಾಗಿಲುವರೆಗೆ ಕರೆದೊಯ್ದಿದ್ದೇನೆ.ಮುಂದಿನ 5 ವರ್ಷಗಳಲ್ಲಿ ಅವರನ್ನು ಜೈಲಿಗಟ್ಟಲು ನನಗೆ ಆಶೀರ್ವದಿಸಿ ಎಂದು ಹರ್ಯಾಣದ ಫತೇಹಾಬಾದ್ನಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ನರೇಂದ್ರ ಮೋದಿ ಹೇಳಿರುವುದಾಗಿ ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಭುಪಿಂದರ್ ಸಿಂಗ್ ಹೂಡಾ ಮುಖ್ಯಮಂತ್ರಿಯಾಗಿದ್ದಾಗ ಗುರುಗ್ರಾಮದಲ್ಲಿ ಭೂಹಗರಣ ಮಾಡಿದ್ದಾರೆ ಎಂಬ ಆರೋಪ ರಾಬರ್ಟ್ ವಾದ್ರಾ ಮೇಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.