ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನರ ಹೃದಯವನ್ನು ಕದ್ದಿದ್ದಾರೆ ಹೊರತು ಮತಗಳನ್ನಲ್ಲ ಎಂದು ವಿರೋಧ ಪಕ್ಷಗಳ ಮತ ಕಳ್ಳತನ ಆರೋಪಕ್ಕೆ ದೆಹಲಿ ಸಿಎಂ ರೇಖಾ ಗುಪ್ತಾ ತಿರುಗೇಟು ನೀಡಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ದೇಶದಲ್ಲಿ ಅಭಿವೃದ್ಧಿಯ ಹೊಸ ಅಲೆ ಇದೆ. ಅನೇಕ ರಾಷ್ಟ್ರಗಳು ಭಾರತವನ್ನು ಮೆಚ್ಚಿಕೊಂಡಿವೆ ಹಾಗೂ ಗೌರವ ನೀಡುತ್ತಿವೆ ಎಂದು ತಿಳಿಸಿದ್ದಾರೆ.
.PHOTOS | ಮಗನ ಹುಟ್ಟುಹಬ್ಬದ ಸಂಭ್ರಮದಲ್ಲಿ ಕಿರುತೆರೆ ನಟಿ ಶ್ವೇತಾ ಚೆಂಗಪ್ಪ.ಮಾಲೂರು ಶಾಸಕ ನಂಜೇಗೌಡ ಆಯ್ಕೆ ಅಸಿಂಧು: ಮರು ಮತ ಎಣಿಕೆಗೆ ಹೈಕೋರ್ಟ್ ಆದೇಶ.
ದೇಶ ಏಕೆ ಪ್ರಗತಿಪಥದತ್ತ ಸಾಗುತ್ತಿದೆ. ಬಡವರಿಗೆ ಏಕೆ ಅನುಕೂಲವಾಗುತ್ತಿದೆ ಹಾಗೂ ಅನೇಕ ದೇಶಗಳು ಭಾರತವನ್ನು ಗೌರವಿಸುತ್ತದೆ ಎಂದು ಚಿಂತೆಗೀಡಾಗಿರುವ ವಿರೋಧ ಪಕ್ಷಗಳು ಮೋದಿಯನ್ನು ನಿಂದಿಸುವಲ್ಲಿ ನಿರತವಾಗಿದೆ ಎಂದು ಗುಪ್ತಾ ಕಿಡಿಕಾರಿದ್ದಾರೆ.

'ಮಖಂಚೋರ್' (ಬಾಲ್ಯದಲ್ಲಿ ಬೆಣ್ಣೆಯನ್ನು ಕದಿಯುತ್ತಿದ್ದ ಶ್ರೀಕೃಷ್ಣನನ್ನು ಪ್ರೀತಿಯಿಂದ ಕರೆಯಲಾಗುತ್ತಿತ್ತು) ಹಾಗೆಯೇ ಮೋದಿ ಕೂಡ ’ಮನ್ ಕಾ ಚೋರ್’ ಏಕೆಂದರೆ, ದೇಶದ ಜನರ ಮನಸ್ಸನ್ನುಕದ್ದಿದ್ದಾರೆ ಎಂದು ಗುಪ್ತಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
.ಪ್ರಧಾನಿ ಮೋದಿ ಜನ್ಮದಿನ: ಹಾಡು ಬಿಡುಗಡೆ ಮಾಡಿದ ದೆಹಲಿ ಸಿಎಂ ರೇಖಾ ಗುಪ್ತಾ.ಉತ್ತಪ್ಪ, ಯುವರಾಜ್ ಸಿಂಗ್, ಸೋನು ಸೂದ್ಗೆ ಇ.ಡಿ ಸಮನ್ಸ್.
ಮೋದಿ ಅವರಿಗೆ ಮತ ಕದಿಯುವ ಅಗತ್ಯವಿಲ್ಲ ಎಂದು ಪ್ರತಿಪಾದಿಸಿದ ರೇಖಾ, ಅಧಿಕಾರ ಕಳೆದುಕೊಂಡು ಈಗ ಚುನಾವಣೆಗಳನ್ನು ಎದುರಿಸಲು ಹೆದರುತ್ತಿರುವ ಪಕ್ಷಗಳು ಮೋದಿ ವಿರುದ್ಧ ಆರೋಪವನ್ನು ಮಾಡುತ್ತಿವೆ ಎಂದು ರಾಹುಲ್ ಗಾಂಧಿ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬಿಹಾರ ವಿಧಾನಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ ಕಳ್ಳತನದಲ್ಲಿ ತೊಡಗಿದೆ ಎಂದು ಕಾಂಗ್ರೆಸ್ ಆರೋಪಿಸಿದ್ದು, ಚುನಾವಣಾ ಫಲಿತಾಂಶಗಳ ಮೇಲೆ ಪ್ರಭಾವ ಬೀರಲು ಚುನಾವಣಾ ಆಯೋಗ ಮತ್ತು ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರದ ನಡುವೆ ಒಪ್ಪಂದ ನಡೆದಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.
.ಕೊತ್ತಲವಾಡಿ: ನಟನೆಗೆ ಬಂದಿಲ್ಲ ಸಂಭಾವನೆ; ನಿರ್ಮಾಪಕಿ ಪುಷ್ಪ ವಿರುದ್ಧ ನಟ ಅಸಮಾಧಾನ.Bihar Election 2025: ಚುನಾವಣಾ ಸಮಿತಿ ರಚಿಸಿದ ಕಾಂಗ್ರೆಸ್ .ಮಹಿಳೆಯರ ಮೇಲಿನ ದೌರ್ಜನ್ಯ ಸಹಿಸುವುದಿಲ್ಲ: ಸಚಿವೆ ಲಕ್ಷ್ಮಿ ಹೆಬ್ಬಾಳಕರ ಎಚ್ಚರಿಕೆ.Wayanad Tragedy: ಸಂತ್ರಸ್ತರಿಗೆ ಕೇರಳ ಸರ್ಕಾರದಿಂದ ಹೊಸ ಮನೆಗಳ ಹಸ್ತಾಂತರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.