ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಂದ್ರನಲ್ಲಿಗೆ ನಾಸಾ ನೌಕೆ

ಫಾಲೋ ಮಾಡಿ
Comments

ಕೇಪ್‌ ಕ್ಯಾನವೆರಾಲ್‌, ಅಮೆರಿಕ: ನಾಸಾವು ಚಂದ್ರಯಾನದ ಅಂಗವಾಗಿ ಹೋದ ವಾರ ಪರೀಕ್ಷಾರ್ಥವಾಗಿ ಉಡಾವಣೆ ಮಾಡಿದ್ದ ಬಾಹ್ಯಾಕಾಶ ನೌಕೆಯು ಸೋಮವಾರ ಚಂದ್ರನಲ್ಲಿಗೆ ತಲುಪಿದೆ.

ನಾಸಾವು 50 ವರ್ಷಗಳ ಹಿಂದೆ ಅಪೊಲೊ ಕಾರ್ಯಕ್ರಮದ ಭಾಗವಾಗಿ ತನ್ನ ನೌಕೆಯನ್ನು ಚಂದ್ರನಲ್ಲಿಗೆ ಕಳುಹಿಸಿತ್ತು. ಅದಾದ ಬಳಿಕ ನೌಕೆಯೊಂದು ಚಂದ್ರ ಗ್ರಹ ತಲುಪಿರುವುದು ಇದೇ ಮೊದಲು.

ನೌಕೆಯು ಸೋಮವಾರ ಬೆಳಿಗ್ಗೆ ರವಾನಿಸಿದ್ದ ವಿಡಿಯೊದಲ್ಲಿ ಚಂದ್ರನು ಹಿಂದೆಂದಿಗಿಂತಲೂ ಹೆಚ್ಚು ದೊಡ್ಡದಾಗಿ ಕಾಣುತ್ತಿದ್ದ. ನೌಕೆಯು ಚಂದ್ರನ ಹಿಂದಿನಿಂದ ಸಾಗುವಾಗ ನೌಕೆಯಲ್ಲಿನ ಕ್ಯಾಮೆರಾದಲ್ಲಿ ಭೂಮಿಯ ಚಿತ್ರ ಸೆರೆಯಾಗಿದೆ. ನೀಲಿ ಚುಕ್ಕೆಯ ಸುತ್ತಲೂ ಕಪ್ಪು ಬಣ್ಣ ಆವರಿಸಿರುವ ಚಿತ್ರ ಅದಾಗಿದೆ.

ನೌಕೆಯು ಚಂದ್ರನ ಕಕ್ಷೆಯ ಎಡಬದಿ ಪ‍್ರವೇಶಿಸಲು ಅಗತ್ಯವಿರುವ ವೇಗ ಪಡೆಯಬೇಕಾದರೆ ಚಂದ್ರನ ಸುತ್ತಲೂ ಜೋಲಿ ಹೊಡೆಯಬೇಕಾಗುತ್ತದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ನೌಕೆಯು ತಾನು ಹೊತ್ತೊಯ್ದಿರುವ ಮತ್ತೊಂದು ಎಂಜಿನ್‌ ಅನ್ನು ಶುಕ್ರವಾರ ಚಂದ್ರನ ಕಕ್ಷೆಗೆ ಸೇರಿಸಲಿದೆ. ಮುಂದಿನ ಸೋಮವಾರದ ವೇಳೆಗೆ ಈ ನೌಕೆಯು ಭೂಮಿಯಿಂದ ಗರಿಷ್ಠ 4 ಲಕ್ಷದ 33 ಸಾವಿರ ಕಿ.ಮೀ ದೂರ ಕ್ರಮಿಸಲಿದೆ.

ಚಂದ್ರನ ಕಕ್ಷೆಯಲ್ಲಿ ಸುಮಾರು ಒಂದು ವಾರ ಇರಲಿರುವ ನೌಕೆಯು ಡಿಸೆಂಬರ್‌ 11ರಂದು ಭೂ ಕಕ್ಷೆಗೆ ಮರಳುವ ನಿರೀಕ್ಷೆ ಇದೆ.

ಮುಂದಿನ ವರ್ಷ ನಾಸಾ, ನಾಲ್ವರು ಗಗನಯಾತ್ರಿಗಳನ್ನೊಳಗೊಂಡ ನೌಕೆಯನ್ನು ಚಂದ್ರನ ಕಕ್ಷೆಗೆ ಕಳುಹಿಸುವ ಗುರಿ ಹೊಂದಿದೆ. 2025ರ ವೇಳೆಗೆ ಮಾನವರನ್ನು ಚಂದ್ರನ ಮೇಲೆ ಕಳುಹಿಸುವ ಯೋಜನೆಯೂ ಅದರದ್ದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT