ಇಂದೋರ್: ವೈದ್ಯಕೀಯ ಪದವಿ ಕೋರ್ಸ್ಗೆ ಪ್ರವೇಶ ಕಲ್ಪಿಸುವ ನೀಟ್–ಯುಜಿ ಫಲಿತಾಂಶವನ್ನು ಪ್ರಕಟಿಸದಂತೆ ಮಧ್ಯಪ್ರದೇಶ ಹೈಕೋರ್ಟ್ನ ಇಂದೋರ್ ಪೀಠ ಶುಕ್ರವಾರ ಮಧ್ಯಂತರ ತಡೆಯಾಜ್ಞೆ ನೀಡಿತು.

‘ಪರೀಕ್ಷಾ ಕೇಂದ್ರದಲ್ಲಿ ವಿದ್ಯುತ್ ವ್ಯತ್ಯಯವಾಗಿದ್ದ ಕಾರಣ ಪ್ರವೇಶ ಪರೀಕ್ಷೆಯಲ್ಲಿ ನನ್ನ ಸಾಧನೆಗೆ ತೊಡಕಾಗಿದೆ’ ಎಂದು ವಿದ್ಯಾರ್ಥಿನಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಿದ ಪೀಠವು ಈ ಆದೇಶ ನೀಡಿತು.

‘ಮತ್ತೊಮ್ಮೆ ಪರೀಕ್ಷೆಯನ್ನು ಎದುರಿಸಲು ನನಗೆ ಅವಕಾಶ ಕಲ್ಪಿಸಬೇಕು’ ಎಂದು ವಿದ್ಯಾರ್ಥಿನಿ ಮನವಿ ಮಾಡಿದ್ದಾರೆ. ಮಧ್ಯಂತರ ತಡೆಯಾಜ್ಞೆಯ ಪರಿಣಾಮವು ಈ ಫಲಿತಾಂಶದ ನಿರೀಕ್ಷೆಯಲ್ಲಿದ್ದ ಸುಮಾರು 21 ಲಕ್ಷ ವಿದ್ಯಾರ್ಥಿಗಳ ಮೇಲೆ ಉಂಟಾಗಲಿದೆ.

ನೀಟ್–ಯುಜಿ ಪರೀಕ್ಷೆಯು ಮೇ 4ರಂದು ನಡೆದಿತ್ತು. ಹವಾಮಾನ ವೈಪರೀತ್ಯದ ಪರಿಣಾಮ ಆ ದಿನ ಇಂದೋರ್ನ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಿತ್ತು.

ವಿದ್ಯುತ್ ವ್ಯತ್ಯಯದ ವ್ಯತಿರಿಕ್ತ ಪರಿಣಾಮವು ವಿದ್ಯಾರ್ಥಿನಿಯ ಪರೀಕ್ಷೆಯ ಉಂಟಾಗಿದೆ ಎಂದು ಹೇಳಿದ ನ್ಯಾಯಮೂರ್ತಿ ಸುಬೋಧ್ ಅಭ್ಯಂಕರ್ ಅವರು, ಮುಂದಿನ ವಿಚಾರಣೆವರೆಗೆ ಫಲಿತಾಂಶ ಪ್ರಕಟಿಸಬಾರದು ಎಂದು ಸೂಚಿಸಿದರು. ಜೂನ್ 30ಕ್ಕೆ ವಿಚಾರಣೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.