ಗುವಾಹಟಿ: ತನ್ವಿ ಶರ್ಮಾ, ತರುಣ್ ಮನ್ನೆಪಲ್ಲಿ ಸೇರಿ ಭಾರತದ ಶಟ್ಲರ್ಗಳು ಇಲ್ಲಿ ನಡೆಯುತ್ತಿರುವ ಗುವಾಹಟಿ ಮಾಸ್ಟರ್ಸ್ ಸೂಪರ್ 100 ಬ್ಯಾಡ್ಮಿಂಟನ್ ಟೂರ್ನಿಯ ಎರಡನೇ ದಿನವಾದ ಬುಧವಾರವೂ ಪಾರಮ್ಯ ಮುಂದುವರಿಸಿದರು.

ವಿಶ್ವ ಜೂನಿಯರ್ ಕಂಚು ವಿಜೇತೆ ತನ್ವಿ, 6–21, 21–11, 21–19ರಿಂದ ಇಂಡೊನೇಷ್ಯಾದ ದಲಿಯಾ ಅಘ್ನಿಯಾ ಪುತೆರಿ ವಿರುದ್ಧ ಗೆಲುವು ಸಾಧಿಸಿ ಪ್ರಿಕ್ವಾರ್ಟರ್ಫೈನಲ್ಗೆ ಮುನ್ನಡೆದರು.

ತಾನ್ಯಾ ಹೇಮಂತ್ ಅವರು 21–16, 21–12ರಿಂದ ಸ್ವದೇಶದ ಅದಿತಿ ಭಟ್ ವಿರುದ್ಧ ಹಾಗೂ ತಸ್ನೀಮ್ ಮೀರ್ ಅವರು 21–13, 23–21ರಿಂದ ಆಲಿಶಾ ನಾಯಕ್ ವಿರುದ್ಧ ಗೆಲುವು ಸಾಧಿಸಿದರು. ಸ್ಥಳೀಯ ಪ್ರತಿಭೆ ಅಸ್ಮಿತಾ ಚಾಲಿಹಾ ಅವರು 21–17, 21–23, 21–18ರಿಂದ ದೇವಿಕಾ ಸಿಂಗ್ ಅವರನ್ನು ಸೋಲಿಸಿದರು.

ಐದನೇ ಶ್ರೇಯಾಂಕದ ಆಟಗಾರ್ತಿ ಅನ್ಮೋಲ್ ಖರ್ಬ್ ಅವರು 21–18, 21–19ರಿಂದ ಸೂರ್ಯ ಚರಿಷ್ಮಾ ತಮಿರಿ ಎದುರು ಜಯ ಸಾಧಿಸಿದರು. ನಾಲ್ಕನೇ ಶ್ರೇಯಾಂಕದ ಅನುಪಮಾ ಉಪಾಧ್ಯಾಯ ಅವರು 21–15, 21–10ರಿಂದ ಮೇಘನಾ ರೆಡ್ಡಿ ಮರೆಡ್ಡಿ ಅವರನ್ನು ಹಿಮ್ಮೆಟ್ಟಿಸಿದರು.

ಪುರುಷರ ಸಿಂಗಲ್ಸ್ನಲ್ಲಿ ತರುಣ್ ಅವರು 21–13, 21–16ರಿಂದ ಇಂಡೊನೇಷ್ಯಾದ ರಿಚೀ ದುತಾ ರಿಚಾರ್ಡೊ ವಿರುದ್ಧ ಸುಲಭ ಜಯ ಸಾಧಿಸಿದರು. ಸಂಸ್ಕಾರ್ ಸಾರಸ್ವತ್ ಅವರು 21–18, 21–19ರಿಂದ ಸೈಯದ್ ಮೋದಿ ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿಯ ವಿಜೇತ ಜೇಸನ್ ಗುಣವನ್ ಅವರಿಗೆ ಆಘಾತ ನೀಡಿದರು.

ಕನ್ನಡಿಗ ಮಿಥುನ್ ಮಂಜುನಾಥ್ ಅವರು ಆರನೇ ಶ್ರೇಯಾಂಕದ ಆಟಗಾರ ಎಸ್.ಶಂಕರ್ ಮುತ್ತುಸ್ವಾಮಿ ವಿರುದ್ಧ ವಾಕ್ಓವರ್ ಪಡೆದರು. ಮೆಯಿರಾಬಾ ಲುವಾಂಗ್ ಮೈಸನಾಮ್, ಸಮರವೀರ್, ಮಾನವ್ ಚೌಧರಿ ಹಾಗೂ ಪ್ರಣಯ್ ಶೆಟ್ಟಿಗಾರ್ ಅವರು ತಮ್ಮ ತಮ್ಮ ಪಂದ್ಯಗಳಲ್ಲಿ ಗೆಲುವಿನೊಂದಿಗೆ 16ರ ಘಟ್ಟ ಪ್ರವೇಶಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.