ನವದೆಹಲಿ: ‘ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಬರಹಗಳು ಕೇವಲ ಇತಿಹಾಸ ಮಾತ್ರವಲ್ಲ, ಅವು ವಿಕಸನಗೊಳ್ಳುತ್ತಿರುವ ಭಾರತದ ಆತ್ಮಸಾಕ್ಷಿಯ ದಾಖಲೆಗಳಾಗಿವೆ’ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದರು.

ಜವಹರಲಾಲ್ ನೆಹರೂ ಅವರ ಆಯ್ದ ಬರಹಗಳ ಡಿಜಿಟಲೀಕರಣ ಕಾರ್ಯ ಪೂರ್ಣಗೊಂಡ ಬೆನ್ನಲ್ಲೇ ರಾಹುಲ್ ಅವರ ಹೇಳಿಕೆ ಹೊರಬಿದ್ದಿದೆ.

‘ಭಾರತದ ಪ್ರಜಾಪ್ರಭುತ್ವದ ಪ್ರಯಾಣ, ಅದರ ಶಕ್ತಿ ಮತ್ತು ಕನಸುಗಳನ್ನು ಅರ್ಥ ಮಾಡಿಕೊಳ್ಳಲು ಬಯಸುವವರಿಗೆ ನೆಹರೂ ಅವರ ಬರಹಗಳು ಪ್ರಬಲ ದಿಕ್ಸೂಚಿಯಾಗಿವೆ’ ಎಂದು ಅವರು ಅಭಿಪ್ರಾಯಪಟ್ಟರು.

35 ಸಾವಿರ ದಾಖಲೆಗಳನ್ನು ಒಳಗೊಂಡಿರುವ ನೆಹರೂ ಅವರ ಆಯ್ದ ಬರಹಗಳ 100 ಸಂಪುಟಗಳು, 3 ಸಾವಿರ ಚಿತ್ರಗಳು ಆನ್ಲೈನ್ನಲ್ಲಿ ಲಭ್ಯವಿದ್ದು, ಆಸಕ್ತರು nehruarchive.inನಿಂದ ಇದನ್ನು ಉಚಿತವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.

‘ಭಾರತಕ್ಕೆ ನೆಹರೂ ಅವರ ಅಪಾರ ಕೊಡುಗೆಗಳ ಬಗ್ಗೆ ತಪ್ಪು ಮಾಹಿತಿ ಹರಡುತ್ತಿರುವ ಇಂದಿನ ಕಾಲಘಟ್ಟದಲ್ಲಿ, ಮುಂದಿನ ತಲೆಮಾರಿಗೆ ಸತ್ಯವನ್ನು ವರ್ಗಾಯಿಸುವ ಉದ್ದೇಶದಿಂದ ಅವರ ಬರಹಗಳ ಡಿಜಿಟಲೀಕರಣ ಕಾರ್ಯ ಅತ್ಯಂತ ಮಹತ್ವದ್ದು’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

‘ಸತ್ಯಗಳು ಸತ್ಯಗಳೇ, ಅವು ನಿಮ್ಮ ಇಷ್ಟಗಳ ಕಾರಣದಿಂದಾಗಿ ಕಣ್ಮರೆಯಾಗುವುದಿಲ್ಲ’ ಎಂಬ ಜವಾಹರಲಾಲ್ ನೆಹರೂ ಅವರ ಪ್ರಸಿದ್ಧ ಹೇಳಿಕೆಯನ್ನು ಉಲ್ಲೇಖಿಸಿ ಖರ್ಗೆ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.

ದೇಶದ ಪ್ರಜಾಪ್ರಭುತ್ವದ ಕನಸುಗಳೊಂದಿಗೆ ಬೆಸೆದುಕೊಂಡಿರುವ ನೆಹರೂ ಪರಂಪರೆ ಈಗ ಆನ್ಲೈನ್ ಗ್ರಂಥಾಲಯದ ರೂಪದಲ್ಲಿ ಸರ್ವರಿಗೂ ಮುಕ್ತವಾಗಿದೆ
ರಾಹುಲ್ ಗಾಂಧಿ ಕಾಂಗ್ರೆಸ್ ಮುಖಂಡ

‘ಜೆಎನ್ಎಂಎಫ್’ ಯೋಜನೆ

ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ಟ್ರಸ್ಟಿಯಾಗಿರುವ ‘ಜವಾಹರಲಾಲ್ ನೆಹರೂ ಮೆಮೊರಿಯಲ್ ಫಂಡ್’ (ಜೆಎನ್ಎಂಎಫ್) ಡಿಜಿಟಲೀಕರಣ ಕಾರ್ಯದ ಹಿಂದಿದೆ. ‘ಎರಡನೆಯ ಹಂತದಲ್ಲಿ ನೆಹರೂ ಅವರಿಗೆ ಗಾಂಧೀಜಿ ಸುಭಾಷ್ಚಂದ್ರ ಬೋಸ್ ಸೇರಿ ಪ್ರಮುಖರು ಬರೆದಿರುವ ಪತ್ರಗಳ ಡಿಜಿಟಲೀಕರಣ ಕಾರ್ಯ ನಡೆಯಲಿದೆ’ ಎಂದು ಜೈರಾಂ ರಮೇಶ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.