ಕಳೆದ ಎರಡು ವರ್ಷಗಳಿಂದ ಅರಾಜಕತೆ ಸೃಷ್ಟಿಯಾಗಿದ್ದ ಬಾಂಗ್ಲಾದೇಶದಲ್ಲಿ ಹೊಸ ಭರವಸೆಯೊಂದು ಮೂಡಿದೆ. ಅಲ್ಲಿನ ಮತದಾರರು ನಿರಂತರ ಕ್ರಾಂತಿಯ ಬದಲು ರಾಜಕೀಯ ಸ್ಥಿರತೆಯನ್ನು ಆರಿಸಿಕೊಂಡಿದ್ದಾರೆ. ನಾಯಕತ್ವದಲ್ಲಿ ಪೀಳಿಗೆಯ ಬದಲಾವಣೆ ಎಂಬುದನ್ನು ಹೊರತುಪಡಿಸಿ, ಬಾಂಗ್ಲಾದೇಶದ ಜನರು ಹಳೆಯ ಪಕ್ಷವೊಂದನ್ನು ಬೆಂಬಲಿಸಿದ್ದಾರೆ.

ಬಾಂಗ್ಲಾದ ಜನರು ಸಾಂವಿಧಾನಿಕ ಸುಧಾರಣೆಗಳ ಕುರಿತಾದ ಜನಾಭಿಪ್ರಾಯ ಸಂಗ್ರಹಣೆಯಲ್ಲಿ ಹೌದು ಎಂಬ ದೃಢವಾದ ಸಂದೇಶ ರವಾನಿಸಿದ್ದಾರೆ. 2024 ರಲ್ಲಿ ನಡೆದ ಮಾನ್ಸೂನ್ ಕ್ರಾಂತಿಯು ಕೇವಲ ಒಂದು ಕ್ಷಣಿಕ ಘಟನೆಯಾಗಿ ಉಳಿಯದೆ, ಬಾಂಗ್ಲಾ ದೇಶದ ಬದಲಾವಣೆಗೆ ಮುನ್ನುಡಿ ಬರೆದಿದೆ.

ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷ (ಬಿಎನ್ಪಿ) ಭರ್ಜರಿ ಗೆಲುವು ದಾಖಲಿಸಿದೆ. ಅದರ ಸಂಸ್ಥಾಪಕ ಅಧ್ಯಕ್ಷ ಜಿಯಾವುರ್ ರೆಹಮಾನ್ ಮತ್ತು ಮಾಜಿ ಪ್ರಧಾನಿ ಖಲೀದಾ ಜಿಯಾ ಅವರ ಪುತ್ರ ತಾರಿಕ್ ರೆಹಮಾನ್ ಬಾಂಗ್ಲಾದೇಶದ ಮುಂದಿನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಇದು ಅವರಿಗೆ ಒಂದು ರೀತಿಯಲ್ಲಿ ವರದಾನವಾದರೆ, ಮತ್ತೊಂದು ರೀತಿಯಲ್ಲಿ ಶಾಪವೂ ಆಗಿ ಪರಿಣಮಿಸಿದೆ.

ತಾರಿಕ್ ರೆಹಮಾನ್ ಅವರ ಮೇಲೆ ತಕ್ಷಣಕ್ಕೆ ಆಡಳಿತ ಮತ್ತು ಸುವ್ಯವಸ್ಥೆಯನ್ನು ಪುನರ್ ಸ್ಥಾಪಿಸುವ ಹೊಣೆಗಾರಿಕೆ ಇದೆ. ಜೊತೆಗೆ ಪ್ರಧಾನಿ ಮತ್ತು ಚುನಾಯಿತ ಸರ್ಕಾರದ ಅಧಿಕಾರವನ್ನು ಕಡಿತಗೊಳಿಸುವುದು. ಕೆಲವು ಸಾಂವಿಧಾನಿಕ ಬದಲಾವಣೆಗಳನ್ನು ಜಾರಿಗೆ ಸವಾಲು ಇದೆ. ಇದರ ಜೊತೆಗೆ ಅಧ್ಯಕ್ಷರ ಕಚೇರಿಯನ್ನು ಬಲಪಡಿಸಲು ಕ್ರಮ ಕೈಗೊಳ್ಳುವ ನಿರೀಕ್ಷೆ ಇದೆ.

ಮಧ್ಯಂತರ ಸರ್ಕಾರ ಜಾರಿಗೆ ತಂದ ಸುಧಾರಣಾ ಕ್ರಮಗಳು ಆರಂಭದಲ್ಲಿ ಬಿಎನ್ಪಿಗೆ ಮನವರಿಕೆಯಾಗಲಿಲ್ಲವಾದರೂ, ಅನಿವಾರ್ಯವಾಗಿ ಅಳವಡಿಸಿಕೊಂಡಿತ್ತು. ಅವುಗಳನ್ನು ಮುಂದುವರೆಸುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಚುನಾವಣೆಗೂ ಮುನ್ನ ಜಮಾತ್-ಇ-ಇಸ್ಲಾಮಿ ಅದರ ಇಸ್ಲಾಮಿ ಮಿತ್ರಪಕ್ಷಗಳು ಮತ್ತು ಇತರೆ ಪಾಲುದಾರ ಪಕ್ಷಗಳು ಹಾಗೂ 2024ರಲ್ಲಿ ನಡೆದ ಬಾಂಗ್ಲಾ ದಂಗೆಯನ್ನು ಮುನ್ನಡೆಸಿದ್ದ ವಿದ್ಯಾರ್ಥಿಗಳಿಂದ ರೂಪುಗೊಂಡ ಹೊಸಬರ ರಾಷ್ಟ್ರೀಯ ನಾಗರಿಕರ ಪಕ್ಷ (NCP) ಸಂಸತ್ ಚುನಾವಣೆಯಲ್ಲಿ ದೊಡ್ಡ ಪರಿಣಾಮ ಸೃಷ್ಟಿಸುವ ಭರವಸೆ ಹೊಂದಿತ್ತು. ಜಮಾತ್, ಹಸೀನಾ ಅವರ ಪದಚ್ಯುತಿಯ ಬಳಿಕ ತನ್ನ ಪಕ್ಷವನ್ನು ಕೆಳಹಂತದವರೆಗೂ ಬಲಿಷ್ಠಗೊಳಿಸುವಲ್ಲಿ ಯಶಸ್ವಿಯಾಗಿದೆ.

ವಿಶ್ವವಿದ್ಯಾನಿಲಯಗಳಿಗೆ ನಡೆದ ಚುನಾವಣೆಯಲ್ಲಿ ದೊಡ್ಡ ಗೆಲುವು ಸಾಧಿಸಿದ್ದ ಜಮಾಅತ್, ಸಂಸತ್ ಚುನಾವಣೆಯಲ್ಲಿ ಬಿಎನ್ಪಿ ಗಿಂತಲೂ ಹೆಚ್ಚಿನ ಸ್ಥಾನ ಗಳಿಸುವ ವಿಶ್ವಾಸ ಹೊಂದಿತ್ತು. ಅದಕ್ಕಾಗಿ, ಮತದಾರರ ಮನವೊಲಿಸುವ ಉದ್ದೇಶದಿಂದ ವಿಮೋಚನಾ ಹೋರಾಟದ ಸಮಯದಲ್ಲಿ ಉಂಟಾದ ಸಮಸ್ಯೆಗಾಗಿ ದೇಶದ ಜನರ ಕ್ಷಮೆಯಾಚಿಸಿತ್ತು.

ಇದೆಲ್ಲದರ ಹೊರತಾಗಿಯೂ ಜಮಾತ್ 69 ಸ್ಥಾನಗಳನ್ನು ಪಡೆಯುವ ಮೂಲಕ ವಿರೋಧ ಪಕ್ಷವಾಗಿರಲಿದೆ ಮಾತ್ರವಲ್ಲ, ಮುಂದಿನ ದಿನಗಳಲ್ಲಿ, ಅದಕ್ಕೆ ತನ್ನ ಪಕ್ಷವನ್ನು ವಿಸ್ತರಿಸಿಕೊಳ್ಳುವ ಅವಕಾಶ ಕೂಡ ಇರಲಿದೆ. ಬಿಎನ್ಪಿ ಗೆಲುವಿನಲ್ಲಿ ಮಹಿಳಾ ಮತದಾರರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಜಮಾತ್ನ ಜೊತೆಗಿರುವ ಎನ್ಸಿಪಿಯು ಕೇವಲ 6 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ. ಆ ಮೂಲಕ ದಂಗೆಗೂ, ಚುನಾವಣಾ ರಾಜಕೀಯಕ್ಕೂ ಇರುವ ವ್ಯತ್ಯಾಸ ಏನು ಎಂಬುದನ್ನು ಈ ಚುನಾವಣೆ ಒತ್ತಿಹೇಳಿದೆ. ಆದರೂ, ಮಿತ್ರಪಕ್ಷಗಳ ಜೊತೆಗೆ 77 ಸ್ಥಾನಗಳ ಗುಂಪಾಗಿ ಪ್ರಬಲ ವಿರೋದ ಪಕ್ಷವಾಗಿ ಕೆಲಸ ನಿರ್ವಹಿಸಬಹುದಾಗಿದೆ.

ಅವಾಮಿ ಲೀಗ್ ನಿಷೇಧದ ನಂತರ, ಚುನಾವಣೆಯ ವಿಶ್ವಾಸಾರ್ಹತೆಯ ಬಗ್ಗೆ ಎದ್ದಿದ್ದ ಪ್ರಶ್ನೆಗಳಿಗೆ ಉತ್ತರ ದೊರಕಿದೆ. ಪಕ್ಷದ ಮತದಾರರ ನೆಲೆ ಇನ್ನೂ ಮಾಯವಾಗಿಲ್ಲ. 2008ರ ಚುನಾವಣೆಯನ್ನು ಬಾಂಗ್ಲಾದೇಶದ ಕೊನೆಯ ನ್ಯಾಯಯುತ ಚುನಾವಣೆ ಎಂದು ಪರಿಗಣಿಸಲಾಗಿತ್ತು. ಆ ಚುನಾವಣೆಯಲ್ಲಿ ಶೇ 87 ಮತದಾನವಾಗಿತ್ತು. ಅಂದು ಶೇಖ್ ಹಸೀನಾ ನೇತೃತ್ವದಲ್ಲಿ ಅವಾಮಿ ಲೀಗ್ ಪ್ರಚಂಡ ಗೆಲುವು ಸಾಧಿಸಿ ಅಧಿಕಾರ ಪಡೆದಿತ್ತು.

ಈ ವರ್ಷದ ಫೆಬ್ರುವರಿ 12ರಂದು ನಡೆದ ಮತದಾನದ ಪ್ರಮಾಣ ಶೇ 60ಕ್ಕಿಂತ ಕಡಿಮೆ ಇತ್ತು. ಅವಾಮಿ ಲೀಗ್ನ ಸಾಂಪ್ರದಾಯಿಕ ಮತದಾರರು ಎರಡೂ ಪಕ್ಷಗಳನ್ನು ಬೆಂಬಲಿಸದೆ, ಮತದಾನದಿಂದ ಹಿಂದೆ ಸರಿದಿರುವ ಸಾಧ್ಯತದೆ ಇದೆ. ಅವಾಮಿ ಲೀಗ್ ಹಾಗೂ ಬಿಎನ್ಪಿಯ ದ್ವೇಷದ ಆಧಾರದಲ್ಲಿ ಅವಾಮಿ ಲೀಗ್ ಮತದಾರರು ತಮ್ಮತ್ತ ವಾಲಬಹುದು ಎಂಬ ಜಮಾತ್ನ ನಿರೀಕ್ಷೆಗಳು ಹುಸಿಯಾಗಿವೆ.

ಭಾರತದ ಮೇಲೆ ಪರಿಣಾಮಗಳು

ಬಿಎನ್ಪಿ ಪಕ್ಷಕ್ಕೆ ನೆರೆಯ ರಾಷ್ಟ್ರವಾಗಿರುವ ಭಾರತದ ಜೊತೆಗಿನ ಸಂಬಂಧವನ್ನು ಸರಿಪಡಿಸುವ ಸವಾಲು ಎದುರಾಗಲಿದೆ. ಮೂರು ಕಡೆಗಳಿಂದ ಭಾರತದ ರಾಜ್ಯಗಳ ಜೊತೆ ಗಡಿ ಹಂಚಿಕೊಂಡಿರುವ ಬಾಂಗ್ಲಾದೇಶವು ಭಾರತದ ಭದ್ರತೆಗೆ ಮತ್ತು ಅದರ ಈ ಹಿಂದಿನ ರಾಜತಾಂತ್ರಿಕ ನೀತಿಗಳನ್ನು ಅಳವಡಿಸಿಕೊಳ್ಳುವ ಸವಾಲು ಇದೆ. ಬಾಂಗ್ಲಾವು ಭಾರತದ ಜೊತೆಗೆ ಉತ್ತಮ ಸಂಬಂಧ ಹೊಂದುವುದರೊಂದಿಗೆ ಆಗ್ನೇಯ ಏಷ್ಯಾದೊಂದಿಗೆ ವ್ಯಾಪಾರ ಮತ್ತು ಸಂಪರ್ಕಕ್ಕೆ ಒತ್ತು ನೀಡಬಹುದು.

2001-2006ರ ನಡುವಿನ ಖಲೀದಾ ಜಿಯಾ ಸರ್ಕಾರ ಭಾರತದ ಜೊತೆ ಉತ್ತಮ ಸಂಬಂಧ ಹೊಂದಿಲ್ಲವಾದರೂ, ತಾರಿಕ್ ರೆಹಮಾನ್ ಭಾರತ ವಿರೋಧಿ ನಿಲುವುಗಳಿಂದ ದೂರವಿದ್ದಾರೆ. ಉದಾಹರಣೆಗೆ, ಟಿ20 ವಿಶ್ವಕಪ್ನಿಂದ ಉಂಟಾದ ವಿವಾದದ ಕುರಿತು ಕೂಡ ಅವರು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೂ, ಭಾರತದ ಜೊತೆ ಹಸೀನಾ ಹೊಂದಿದ್ದಷ್ಟು ಉತ್ತಮ ಸಂಬಂಧ ಹೊಂದುವುದು ಅನುಮಾನ.

ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ, ರೆಹಮಾನ್ ತಮ್ಮ ವಿದೇಶಾಂಗ ನೀತಿಯು ಬಾಂಗ್ಲಾದೇಶದ ಹಿತಾಸಕ್ತಿಗಳನ್ನು ಆಧರಿಸಿರುತ್ತದೆ ಎಂದು ಹೇಳಿದರು. ಈ ಅಭಿಪ್ರಾಯವನ್ನು ರೆಹಮಾನ್ ಅವರ ವಿದೇಶಾಂಗ ನೀತಿ ಸಲಹೆಗಾರ ಹಮೈಯುನ್ ಕೋಬಿರ್ ಅವರು ಸ್ಪಷ್ಟಪಡಿಸಿದ್ದಾರೆ. ಅವರು ಈ ಹಿಂದಿನ ಸಂದರ್ಶನವೊಂದರಲ್ಲಿ 1996ರ ಗಂಗಾ ಜಲ ಒಪ್ಪಂದದ ನವೀಕರಣವು ರಾಷ್ಟ್ರೀಯ ಹಿತಾಸಕ್ತಿಯನ್ನು ಆಧರಿಸಿದೆ ಎಂದು ಹೇಳಿದ್ದರು.

ಶೀಖ್ ಹಸೀನಾ ಅಧಿಕಾರಾವಧಿಯಲ್ಲಿ ಸಹಿ ಹಾಕಿರುವ ಈ ಒಪ್ಪಂದವು ಡಿಸೆಂಬರ್ನಲ್ಲಿ ನವೀಕರಣಗೊಳ್ಳಲಿದೆ. ನಂತರದ ಖಲೀದಾ ಜಿಯಾ ಸರ್ಕಾರವು ಒಪ್ಪಂದದಿಂದ ಹಿಂದೆ ಸರಿದಿತ್ತು. ಈ ಒಪ್ಪಂದವನ್ನು ಬಿಎನ್ಪಿ ಮತ್ತು ಹಸೀನಾ ಅವರ ಇತರೆ ವಿರೋಧ ಪಕ್ಷಗಳು ಟೀಕಿಸಿದ್ದವು.

ಚೀನಾ ಮತ್ತು ಪಾಕಿಸ್ತಾನದ ಜೊತೆ ಬಿಎನ್ಪಿಯು ಯಾವ ನಿಲುವು ಹೊಂದಿರುತ್ತದೆ ಎಂಬುದರ ಮೇಲೆ ಭಾರತದ ಜೊತೆಗಿನ ಸಂಬಂಧ ನಿರ್ಧಾರವಾಗಲಿದೆ. ಇನ್ನೂ ಬಾಂಗ್ಲಾ ಪ್ರಧಾನಿಯ ಪ್ರಮಾಣವಚನ ಸಮಾರಂಭಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿವಿಧ ದೇಶಗಳ 12 ನಾಯಕರನ್ನು ಆಹ್ವಾನಿಸಲಾಗಿತ್ತು. ಇದು ಉಭಯ ದೇಶಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ಪ್ರಮುಖ ಹೆಜ್ಜೆಯಾಗಿದೆ.

ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂದೂ ವಿರೋಧಿ ಕೃತ್ಯಗಳ ಬಗ್ಗೆ ಭಾರತ ಸರ್ಕಾರ ಹೊಂದಿರುವ ಆಕ್ರಮಣಕಾರಿ ನಿಲುವು ದೇಶೀಯ ರಾಜಕೀಯ ಕಾರ್ಯಸೂಚಿಯಾಗಿಯೂ ಕಾರ್ಯನಿರ್ವಹಿಸಲಿದೆ. ಬಾಂಗ್ಲಾ ಹಿಂದೂಗಳ ಮೇಲಿ ದೌರ್ಜನ್ಯದ ವಿರುದ್ಧ ಭಾರತ ತೆಗೆದುಕೊಳ್ಳುವ ನಿಲುವು ದೇಶೀಯ ರಾಜಕಾರಣದ ಮೇಲೂ ಪರಿಣಾಮ ಬೀರಲಿದೆ.

ಇದರ ಜೊತೆಗೆ ಬಾಂಗ್ಲಾದ ಮಾಜಿ ಪ್ರಧಾನಿ ಶೇಖ್ ಹಸೀನಾಗೆ ಭಾರತ ನೆಲೆ ನೀಡಿರುವುದು ಬಾಂಗ್ಲಾದ ಬೇಸರಕ್ಕೆ ಕಾರಣವಾಗಿದೆ. ಮೋದಿ ಅವರು ರೆಹಮಾನ್ ಅವರ ಗೆಲುವಿಗೆ ಶುಭ ಕೋರಿದ್ದರಾದರೂ, ಹಸೀನಾ ಅವರನ್ನು ಮರಣದಂಡನೆಗೆ ಒಳಪಡಿಸಲು ಎಂದಿಗೂ ಒಪ್ಪುವುದಿಲ್ಲ. ಇದು, ರೆಹಮಾನ್ ಅವರ ಭಾರತ ವಿರೋಧಿ ನಿಲುವಿಗೆ ಕಾರಣವಾಗಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.