ಹೈದರಾಬಾದ್: ₹5ಕ್ಕೆ ಉಪಾಹಾರ ನೀಡುವ ನೂತನ ಆಧುನೀಕೃತ ‘ಇಂದಿರಮ್ಮ ಕ್ಯಾಂಟೀನ್’ ಅನ್ನು ಸಾರಿಗೆ ಮತ್ತು ಹೈದರಾಬಾದ್ ಉಸ್ತುವಾರಿ ಸಚಿವ ಪೊನ್ನಂ ಪ್ರಭಾಕರ್ ಮತ್ತು ಮೇಯರ್ ಗದ್ವಾಲ್ ವಿಜಯಲಕ್ಷ್ಮಿ ಅವರು ಸೋಮವಾರ ಇಲ್ಲಿ ಉದ್ಘಾಟಿಸಿದರು.

ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರ ಮಾರ್ಗದರ್ಶನದಲ್ಲಿ ಎಲ್ಲರಿಗೂ ಕೈಗೆಟಕುವ ದರದಲ್ಲಿ ತಿಂಡಿ–ಊಟ ನೀಡುವ ಉದ್ದೇಶದಿಂದ ‘ಇಂದಿರಮ್ಮ ಕ್ಯಾಂಟೀನ್’ ಪ್ರಾರಂಭಿಸಲಾಗಿದೆ ಎಂದು ಸಚಿವ ಪ್ರಭಾಕರ್ ಹೇಳಿದರು.

ಈ ಕ್ಯಾಂಟೀನ್ಗಳು ಗ್ರಾಹಕರಿಗೆ ₹5ಕ್ಕೆ ಉಪಾಹಾರ ಮತ್ತು ಊಟವನ್ನು ನೀಡಲಿವೆ ಎಂದು ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (ಜಿಎಚ್ಎಂಸಿ) ಹೇಳಿದೆ. ಪ್ರತಿ ಉಪಾಹಾರಕ್ಕೆ ₹14 ಮತ್ತು ಊಟಕ್ಕೆ ₹24.83 ಸಬ್ಸಿಡಿಯನ್ನು ಜಿಎಚ್ಎಂಸಿ ನೀಡುತ್ತಿದ್ದು, ಇದರಿಂದಾಗಿ ಫಲಾನುಭವಿಗಳು ಪ್ರತಿ ತಿಂಗಳು ₹3,000 ಉಳಿಸಬಹುದು ಎಂದು ಅದು ಹೇಳಿದೆ.

₹5ಕ್ಕೆ ಊಟ ನೀಡುವ ಅನ್ನಪೂರ್ಣ ಕೇಂದ್ರಕ್ಕೆ ‘ಇಂದಿರಮ್ಮ ಕ್ಯಾಂಟೀನ್’ ಎಂದು ಇತ್ತೀಚೆಗೆ ಮರುನಾಮಕರಣ ಮಾಡಲಾಗಿತ್ತು. ಪ್ರಸ್ತುತ ನಗರದಾದ್ಯಂತ ಈ ರೀತಿಯ 150 ಕ್ಯಾಂಟೀನ್ಗಳಿದ್ದು, ಸುಮಾರು 30,000 ಫಲಾನುಭವಿಗಳಿಗೆ ಸೇವೆ ನೀಡುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.