ನವದೆಹಲಿ: ‘ಭಾರತದಿಂದ ಪಲಾಯನ ಮಾಡಿರುವ ಉದ್ಯಮಿ ನೀರವ್ ಮೋದಿ ಅವರ ಸಹೋದರಿ ಪೂರ್ವಿ ಮೋದಿ ಅವರು ತಮ್ಮ ಬ್ರಿಟನ್‌ನ ಬ್ಯಾಂಕ್ ಖಾತೆಯಿಂದ ₹ 17.25 ಕೋಟಿಯನ್ನು ಭಾರತ ಸರ್ಕಾರಕ್ಕೆ ರವಾನಿಸಿದ್ದಾರೆ’ ಎಂದು ಜಾರಿ ನಿರ್ದೇಶನಾಲಯವು ಗುರುವಾರ (ಇ.ಡಿ) ತಿಳಿಸಿದೆ.

ಪಿಎನ್‌ಬಿ ಸಾಲ ವಂಚನೆ ಪ್ರಕರಣದಲ್ಲಿ ಪೂರ್ವಿ ಅವರಿಗೆ ಸಹಾಯವನ್ನು ನೀಡುವ ಬದಲು ಕ್ರಿಮಿನಲ್ ಮೊಕದ್ದಮೆಗಳಿಂದ ಕ್ಷಮಿಸಲು ಅನುಮತಿ ನೀಡಲು ಭರವಸೆ ನೀಡಿದ ಬಳಿಕ ಈ ಹಣವನ್ನು ಭಾರತ ಸರ್ಕಾರಕ್ಕೆ ರವಾನಿಸಲಾಗಿದೆ ಎನ್ನಲಾಗಿದೆ.

‘ಲಂಡನ್‌ನ ಬ್ಯಾಂಕೊಂದರಲ್ಲಿ ತಮ್ಮ ಹೆಸರಿನ ಖಾತೆ ಇರುವುದು ತಮ್ಮ ಅರಿವಿಗೆ ಬಂದಿದ್ದು. ಅದನ್ನು ಸಹೋದರ ನೀರವ್ ಮೋದಿ ಅವರ ಆದೇಶದ ಮೇರೆಗೆ ತೆರೆಯಲಾಗಿತ್ತು. ಆದರೆ, ಅದರಲ್ಲಿರುವ ಹಣವು ತಮಗೆ ಸೇರಿದ್ದಲ್ಲ ಎಂದು ತಿಳಿದು ಬಂದಿದೆ ಎಂದು ಪೂರ್ವಿ ಮೋದಿ ಜೂನ್ 24ರಂದು ಇ.ಡಿ ಗಮನಕ್ಕೆ ತಂದಿದ್ದರು’ ಎಂದು ಇ.ಡಿ ಮಾಹಿತಿ ನೀಡಿದೆ.

‘ಪೂರ್ವಿ ಅವರ ಸಹಕಾರದಿಂದ ಇ.ಡಿ ಒಟ್ಟು ₹17.25 ಕೋಟಿಯನ್ನು ವಸೂಲಿ ಮಾಡಲು ಸಾಧ್ಯವಾಗಿದೆ’ ಎಂದೂ ಜಾರಿ ನಿರ್ದೇಶನಾಲಯವು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.