ನವದೆಹಲಿ: ‘ಸಾವು ಮತ್ತು ಹಲವು ರೋಗಗಳಿಗೆ ವಾಯುಮಾಲಿನ್ಯವೇ ನೇರ ಕಾರಣವೆಂದು ನಿರ್ಧರಿಸಲು ನಿರ್ಣಾಯಕವಾದ ದತ್ತಾಂಶಗಳಿಲ್ಲ’ ಎಂದು ಆರೋಗ್ಯ ಖಾತೆಯ ರಾಜ್ಯ ಸಚಿವ ಅಶ್ವಿನಿ ಚೌಬೆ ಮಂಗಳವಾರ ರಾಜ್ಯಸಭೆಗೆ ತಿಳಿಸಿದರು.

2019ರ ಕೊನೆಯ ಮೂರು ತಿಂಗಳಲ್ಲಿ ಆಸ್ತಮಾ ರೋಗಿಗಳು, ಮಕ್ಕಳ ಶ್ವಾಸಕೋಶ ಮತ್ತು ಗರ್ಭಿಣಿ ಮಹಿಳೆಯರ ಮೇಲೆ ವಾಯು ಮಾಲಿನ್ಯದಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಸರ್ಕಾರ ಯಾವುದಾದರೂ ಅಧ್ಯಯನ ಕೈಗೊಂಡಿದೆಯೇ ಎಂಬ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದ್ದಾರೆ.

ಆಹಾರ ಪದ್ಧತಿ, ಉದ್ಯೋಗ, ಸಾಮಾಜಿಕ-ಆರ್ಥಿಕ ಸ್ಥಿತಿ, ವೈದ್ಯಕೀಯ ಇತಿಹಾಸ, ಪ್ರತಿರೋಧಕ ಶಕ್ತಿ, ಅನುವಂಶಿಕತೆ ಹಾಗೂ ಪರಿಸರ ಸೇರಿ ಹಲವು ಅಂಶಗಳು ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಉಸಿರಾಟ ಸಂಬಂಧಿ ಕಾಯಿಲೆಗಳ ಮೇಲೆ ಪರಿಣಾಮ ಬೀರುವ ಹಲವು ಅಂಶಗಳಲ್ಲಿ ವಾಯುಮಾಲಿನ್ಯವೂ ಒಂದು ಎಂದು ಚೌಬೆ ಅವರು ನೀಡಿರುವ ಲಿಖಿತ ಉತ್ತರದಲ್ಲಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.