ನವದೆಹಲಿ: ಹೊಸದಾಗಿ ಪರಿಚಯಿಸಿದ್ದ₹200, ₹2,000 ಮುಖಬೆಲೆಯ ನೋಟು ಹರಿದಿದ್ದರೆ, ಬಣ್ಣಗೆಟ್ಟಿದ್ದರೆ, ಕೊಳಕಾಗಿದ್ದರೆ, ಶಾಯಿಯ ಕಲೆ ಇರುವನೋಟುಗಳನ್ನು ಇನ್ನು ಮುಂದೆ ಸುಲಭವಾಗಿ ಬದಲಾಯಿಸಬಹುದು.

ಭಾರತೀಯ ರಿಸರ್ವ್ ಬ್ಯಾಂಕ್ (ನೋಟು ವಿನಿಮಯ) ಕಾಯ್ದೆ 2009ಕ್ಕೆ ತಿದ್ದುಪಡಿ ತಂದಿದ್ದು, ಇನ್ನು ಮುಂದೆ ಎಲ್ಲಾ ಬ್ಯಾಂಕ್‌ಗಳಲ್ಲಿ, ಆರ್‌ಬಿಐ ಕಚೇರಿಗಳಲ್ಲಿನೋಟು ಬದಲಾವಣೆ ಸಾಧ್ಯವಾಗಲಿದೆ. ತಿದ್ದುಪಡಿನಿಯಮಗಳುತಕ್ಷಣದಿಂದಲೇ ಜಾರಿಗೆ ಬಂದಿವೆ ಎಂದು ಆರ್‌ಬಿಐ ತಿಳಿಸಿದೆ.

₹5, ₹10, ₹20, ₹50, ₹100, ₹500 ಮತ್ತು ₹1,000ರ ಮುಖಬೆಲೆಯ ನೋಟುಗಳು ಹಾಳಾಗಿದ್ದರೆ ಬದಲಾಯಿಸಿಕೊಡುವುದಕ್ಕೆ ಕಾನೂನು ಇತ್ತು. ಆದರೆ, ನೋಟು ರದ್ದತಿಯ ಬಳಿಕ ಚಲಾವಣೆಗೆ ತರಲಾದ ಹೊಸ ಮುಖಬೆಲೆಯ ನೋಟುಗಳ ಪ್ರಸ್ತಾವ ಕಾನೂನಿನಲ್ಲಿ ಇರಲಿಲ್ಲ ಆರಂಭಿಸಿವೆ.

ಹೊಸ ಮುಖಬೆಲೆಯ ನೋಟುಗಳು ಬಣ್ಣ ಕಳೆದುಕೊಳ್ಳುತ್ತಿವೆ ಎಂಬ ದೂರುಗಳು ಕೇಳಿ ಬಂದಿದ್ದವು. ಇಂತಹ ನೋಟು ಬದಲಾಯಿಸಿಕೊಡುವಂತೆ ಬ್ಯಾಂಕುಗಳಿಗೆ ಆರ್‌ಬಿಐ ಸೂಚನೆ ಕೊಟ್ಟಿತ್ತು. ಆದರೆ, ಹೀಗೆ ಬದಲಾಯಿಸಿ ಕೊಡುವುದಕ್ಕೆ ಕಾಯ್ದೆಯ ಬೆಂಬಲ ಇಲ್ಲದಿದ್ದುದರಿಂದ ವಿನಿಮಯಕ್ಕೆ ಬ್ಯಾಂಕುಗಳು ಮನಸ್ಸು ಮಾಡುತ್ತಿಲ್ಲ.

ಹಾಳಾದ ನೋಟಿನ ವ್ಯಾಖ್ಯಾನ:ಸಾಮಾನ್ಯ ಬಳಕೆಯಿಂದಾಗಿ ಜೀರ್ಣಗೊಂಡ ನೋಟುಗಳನ್ನು ಹಾಳಾದ ನೋಟುಗಳು ಎಂದು ಪರಿಗಣಿಸಲಾಗುತ್ತದೆ. ಎರಡು ತುಂಡಾಗಿ ಅಂಟಿಸಲಾದ ನೋಟುಗಳೂ ಈ ವ್ಯಾಪ್ತಿಗೆ ಬರುತ್ತವೆ. ಆದರೆ ಎರಡೂ ತುಂಡುಗಳು ಒಂದೇ ನೋಟಿನದ್ದಾಗಿರಬೇಕು. ಯಾವುದೇ ಅಗತ್ಯ ಅಂಶಗಳು ನಾಶವಾಗಿ ಹೋಗಿರಬಾರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.