ಕೇರಳದಲ್ಲಿ ಎಸ್‌ಐಆರ್: 20ಕ್ಕೆ ಸಭೆ
ಕೇರಳದಲ್ಲಿ ಶೀಘ್ರವೇ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ನಡೆಸಲು ಚುನಾವಣಾ ಆಯೋಗ ನಿರ್ಧರಿಸಿದೆ. ಈ ಸಂಬಂಧ ಚರ್ಚಿಸಲು ಇದೇ 20ರಂದು ಎಲ್ಲ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಲು ತೀರ್ಮಾನಿಸಲಾಗಿದೆ ಎಂದು ರತನ್ ಕೇಳ್ಕರ್ ಹೇಳಿದ್ದಾರೆ. '2002ರಲ್ಲಿ ನಡೆಸಿದ್ದ ಎಸ್‌ಐಆರ್ ನಂತರ ಸಿದ್ಧಪಡಿಸಲಾದ ಮತದಾರರ ಪಟ್ಟಿಯನ್ನು ಆಯೋಗದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಎಸ್‌ಐಆರ್ ನಡೆಸುವ ಕುರಿತಂತೆ ಎಲ್ಲ ಅಧಿಕಾರಿಗಳಿಗೆ ತರಬೇತಿಯನ್ನೂ ನೀಡಲಾಗಿದೆ. ಆಯೋಗದಿಂದ ಸೂಚನೆ ಬಂದ ಕೂಡಲೇ ಎಸ್‌ಐಆರ್ ಕಾರ್ಯಕ್ಕೆ ಚಾಲನೆ ನೀಡಲಾಗುವುದು’ ಎಂದು ತಿಳಿಸಿದ್ದಾರೆ.