ನವದೆಹಲಿ: ಇಸ್ರೇಲ್‌ನ ಕಣ್ಗಾವಲು ತಂತ್ರಾಂಶ ‘ಪೆಗಾಸಸ್’ ಗೂಢಚರ್ಯೆ ಪ್ರಕರಣದ ಸಂಬಂಧ ನಾವು ಮುಚ್ಚಿಡುವಂಥದ್ದು ಏನೂ ಇಲ್ಲದಿದ್ದರೆ ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೇಲ್ ಪ್ರಧಾನಿಗೆ ಪತ್ರ ಬರೆದು ಸತ್ಯ ತಿಳಿಸುವಂತೆ ಹೇಳಲಿ ಎಂದು ಬಿಜೆಪಿ ಹಿರಿಯ ಮುಖಂಡ ಹಾಗೂ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಆಗ್ರಹಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸುಬ್ರಮಣಿಯನ್ ಸ್ವಾಮಿ, 'ನಾವು ಮುಚ್ಚಿಡುವಂಥದ್ದು ಏನೂ ಇಲ್ಲದಿದ್ದರೆ, ಪ್ರಧಾನಿ ಮೋದಿ ಅವರು ಇಸ್ರೇಲ್ ಪ್ರಧಾನಿಗೆ ಪತ್ರ ಬರೆದು ಎನ್‌ಎಸ್‌ಒನ ಪೆಗಾಸಸ್ ಪ್ರಾಜೆಕ್ಟ್ ಬಗ್ಗೆ ಸತ್ಯವನ್ನು ತಿಳಿಸುವಂತೆ ಹೇಳಲಿ. ಹಾಗೇ ಅದಕ್ಕೆ ಯಾರು ಪಾವತಿಸಿದ್ದಾರೆ ಎಂಬುದನ್ನೂ ಬಹಿರಂಗ ಪಡಿಸಲಿ' ಎಂದು ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ:ಪೆಗಾಸಸ್: ಕೇಂದ್ರ ಸರ್ಕಾರಕ್ಕೆ ಪ್ರತಿಪಕ್ಷಗಳ ತರಾಟೆ

ವಿರೋಧ ಪಕ್ಷದ ಮುಖಂಡರಾದ ರಾಹುಲ್ ಗಾಂಧಿ ಹಾಗೂ ಅಭಿಷೇಕ್ ಬ್ಯಾನರ್ಜಿ ಅವರ ಮೇಲೆ ಗೂಢಚರ್ಯೆ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಇದು ಸಂಸತ್ತಿನಲ್ಲಿ ಭಾರಿ ಕೋಲಾಹಲಕ್ಕೆ ಕಾರಣವಾಯಿತು.

ಈ ಮೊದಲು ಪೆಗಾಸಸ್ ಪ್ರಕರಣದಲ್ಲಿ ಸರ್ಕಾರದ ಪಾತ್ರವಿದೆಯೇ ಎಂಬುದನ್ನು ಗೃಹಸಚಿವ ಅಮಿತ್ ಶಾ ಸಂಸತ್ತಿಗೆ ತಿಳಿಸುವುದು ಒಳ್ಳೆಯದು. ಇಲ್ಲದಿದ್ದರೆ 'ವಾಟರ್‌ಗೇಟ್' ಪ್ರಕರಣದಲ್ಲಾದಂತೆ ತೀವ್ರ ತೊಂದರೆ ಎದುರಾಗಲಿದೆ ಎಂದು ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.