ನವದೆಹಲಿ:ದೇಶದಾದ್ಯಂತ ಮಕ್ಕಳಿಗೂ ಲಸಿಕೆ ಅಭಿಯಾನ ಆರಂಭವಾಗಿರುವ ಬೆನ್ನಲ್ಲೇ, 12ರಿಂದ 17 ವರ್ಷದೊಳಗಿನ ಮಕ್ಕಳಿಗಾಗಿ ಸೀರಂಇನ್‌ಸ್ಟಿಟ್ಯೂಟ್‌ನ(ಎಸ್ಐಐ) ಕೋವೊವ್ಯಾಕ್ಸ್ ಅನ್ನು ರಾಷ್ಟ್ರೀಯ ಕೋವಿಡ್-19 ಲಸಿಕಾಕರಣ ಕಾರ್ಯಕ್ರಮದಲ್ಲಿ ಸೇರಿಸಬೇಕು ಎಂದುಪ್ರತಿರಕ್ಷಣೆ ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪಿನ(ಎನ್‌ಟಿಎಜಿಐ) ತಾಂತ್ರಿಕ ಸ್ಥಾಯಿ ಉಪ ಸಮಿತಿಯು ಶಿಫಾರಸು ಮಾಡಿದೆ.

ಎನ್‌ಟಿಎಜಿಐನ ಕೋವಿಡ್-19 ಗುಂಪೊಂದು ಕೊವೊವ್ಯಾಕ್ಸ್ ಲಸಿಕೆಯ ದತ್ತಾಂಶವನ್ನು ಪರಿಶೀಲನೆ ನಡೆಸಿ, ಒಪ್ಪಿಗೆ ಸೂಚಿಸಿತ್ತು. ಇದೀಗ ಶುಕ್ರವಾರ ಸಭೆ ನಡೆಸಿದ ಎನ್‌ಟಿಎಜಿಐನ ತಾಂತ್ರಿಕ ಸ್ಥಾಯಿ ಉಪಸಮಿತಿಯು, 12-17 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಬಳಸಲು ಶಿಫಾರಸು ಮಾಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಇತ್ತೀಚೆಗಷ್ಟೇಸೀರಂ ಇನ್ಸ್‌ಟಿಟ್ಯೂಟ್ ಆಫ್ ಇಂಡಿಯಾ(ಎಸ್‌ಐಐ)ದ ಸರ್ಕಾರ ಮತ್ತು ನಿಯಂತ್ರಕ ವ್ಯವಹಾರಗಳ ನಿರ್ದೇಶಕ ಪ್ರಕಾಶ್ ಕುಮಾರ್ ಸಿಂಗ್ ಅವರು, 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ನೀಡಲಾಗುವ ಕೊವೊವ್ಯಾಕ್ಸ್ ಲಸಿಕೆಗೆ ಅನುಮೋದನೆ ನೀಡಬೇಕು ಎಂದು ಕೋರಿ ಕೇಂದ್ರ ಆರೋಗ್ಯ ಇಲಾಖೆಗೆ ಪತ್ರ ಬರೆದಿದ್ದರು.

ಸೀರಂ ಸಂಸ್ಥೆಯು ಈ ಲಸಿಕೆಯನ್ನು ಖಾಸಗಿ ಆಸ್ಪತ್ರೆಗಳಿಗೆ ಪ್ರತಿ ಡೋಸ್ ಅನ್ನು ₹900 ಮಾರಲು ನಿರ್ಧರಿಸಿದ್ದು, ಸರ್ಕಾರದ ನಿರ್ದೇಶನಕ್ಕಾಗಿ ಕಾಯುತ್ತಿದೆ ಎಂದು ಉಲ್ಲೇಖಿಸಿದ್ದರು. ಆದರೆ ಸರ್ಕಾರಕ್ಕೆ ಎಷ್ಟು ರು.ಗೆ ನೀಡಲಾಗುತ್ತದೆ ಎಂಬ ಬಗ್ಗೆ ಉಲ್ಲೇಖ ಇಲ್ಲ.

ಕಳೆದ ವರ್ಷದ ಡಿಸೆಂಬರ್ 28 ರಂದು ತುರ್ತು ಪರಿಸ್ಥಿತಿಗಳಲ್ಲಿ ವಯಸ್ಕರಿಗೆ ಕೊವೊವ್ಯಾಕ್ಸ್ ಲಸಿಕೆಯ ನಿರ್ಬಂಧಿತ ಬಳಕೆಗೆ ಅನುಮೋದಿಸಲಾಗಿತ್ತು. ಅಲ್ಲದೆ, 12-17 ವಯಸ್ಸಿನವರಿಗೆ ಬಳಸಲು ಕೆಲವು ಷರತ್ತುಗಳಿಗೆ ಕೊವೊವ್ಯಾಕ್ಸ್ ಒಳಪಟ್ಟಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.