ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

TOP 10 | ಈ ದಿನದ ಪ್ರಮುಖ 10 ಸುದ್ದಿಗಳು: 3 ಜೂನ್‌ 2023

Published 3 ಜೂನ್ 2023, 12:27 IST
Last Updated 3 ಜೂನ್ 2023, 12:27 IST
ಅಕ್ಷರ ಗಾತ್ರ
Introduction

ಒಡಿಶಾ ರೈಲು ಅಪಘಾತ, ರಾ‌ಜ್ಯದಲ್ಲಿ ಸಾವರ್ಕರ್‌ ಜಯಂತಿ ವಿವಾದ, ಗೋಹತ್ಯೆ ನಿಷೇಧ ಕಾಯ್ದೆ ತಿದ್ದುಪಡಿ ಸೇರಿದಂತೆ ರಾಜ್ಯ, ರಾಷ್ಟ್ರೀಯ, ವಿದೇಶ, ಬೆಂಗಳೂರು, ಟ್ರೆಂಡಿಂಗ್ ಸೇರಿದಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..

1

ಒಡಿಶಾ ಭೀಕರ ರೈಲು ಅಪಘಾತದಲ್ಲಿ 261 ಮಂದಿ ಸಾವು, ರಕ್ಷಣಾ ಕಾರ್ಯಾಚರಣೆ ಬಹುತೇಕ ಪೂರ್ಣ

ಒಡಿಶಾದ ಬಾಲಸೋರ್‌ನಲ್ಲಿ ನಡೆದ ರೈಲು ಅಪಘಾತದ ದೃಶ್ಯ.
ಒಡಿಶಾದ ಬಾಲಸೋರ್‌ನಲ್ಲಿ ನಡೆದ ರೈಲು ಅಪಘಾತದ ದೃಶ್ಯ.

ಒಡಿಶಾದ ಬಾಲಸೋರ್‌ನಲ್ಲಿ ನಡೆದ ರೈಲು ಅಪಘಾತದಲ್ಲಿ 261 ಮಂದಿ ಮೃತಪಟ್ಟಿದ್ದು, ರಕ್ಷಣಾ ಕಾರ್ಯಾಚರಣೆ ಬಹುತೇಕ ಪೂರ್ಣಗೊಂಡಿದೆ ಎಂದು ಆಗ್ನೇಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಅವಶೇಷಗಳ ಅಡಿಯಿಂದ ರೈಲು ಬೋಗಿ ಮೇಲೆತ್ತುವ ಕಾರ್ಯ ಜಾರಿಯಲಿದ್ದು, ಸಾವಿನ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆಯಿದೆ. ಪೊಲೀಸರು, ಒಡಿಶಾ ವಿಪತ್ತು ತುರ್ತು ಪ್ರತಿಕ್ರಿಯೆ ತಂಡ, ಎನ್‌ಡಿಆರ್‌ಎಫ್ ಮತ್ತು ಸ್ಥಳೀಯರ ಸಹಾಯದಿಂದ ರಕ್ಷಣಾ ಕಾರ್ಯಾಚರಣೆ ನಡೆದಿದೆ.

ಪೂರ್ತಿ ಲೇಖನ ಓದಲು: ಒಡಿಶಾ ಭೀಕರ ರೈಲು ಅಪಘಾತದಲ್ಲಿ 261 ಮಂದಿ ಸಾವು, ರಕ್ಷಣಾ ಕಾರ್ಯಾಚರಣೆ ಬಹುತೇಕ ಪೂರ್ಣ

2

ಸಾವರ್ಕರ್ ಜಯಂತಿ ಕಾರ್ಯಕ್ರಮಕ್ಕೆ ಸರ್ಕಾರದಿಂದಲೇ ಅಡ್ಡಿ ಯತ್ನ: ಪ್ರತಾಪ‌ ಸಿಂಹ ಆರೋಪ

ಪ್ರತಾಪ ಸಿಂಹ
ಪ್ರತಾಪ ಸಿಂಹಪ್ರಜಾವಾಣಿ ಚಿತ್ರ

ಸಾವರ್ಕರ್ ಜಯಂತಿ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರವೇ ಪೊಲೀಸರು ಹಾಗೂ ಅಧಿಕಾರಿಗಳ‌ ಮೇಲೆ ಒತ್ತಡ ಹೇರಿ ಅಡ್ಡಿಪಡಿಸಿದೆ ಎಂದು ಸಂಸದ ಪ್ರತಾಪ‌ ಸಿಂಹ ದೂರಿದರು. ಮುಕ್ತ ವಿ.ವಿ. ಆವರಣದಲ್ಲಿ ಶನಿವಾರ ಮಧ್ಯಾಹ್ನ ಪತ್ರಕರ್ತರಿಗೆ ಅವರು ಪ್ರತಿಕ್ರಿಯೆ‌ ನೀಡಿದರು. ಆಯೋಜಕರು ಶುಲ್ಕ ಕಟ್ಟಿ, ಸಭಾಂಗಣ ಕಾಯ್ದಿರಿಸಿದ್ದರು. ಆದರೆ ಇಲ್ಲದ ತಕರಾರು‌ ಮಾಡಲಾಗಿದೆ. ಸರ್ಕಾರದ ಕಡೆಯಿಂದ ಒತ್ತಡ ಬಂದ ಕಾರಣ ಕಾರ್ಯಕ್ರಮವನ್ನೇ ರದ್ದು ಮಾಡುವ ಪ್ರಯತ್ನ ನಡೆಯಿತು. ನಾವೆಲ್ಲ ಪ್ರತಿಭಟನೆ ಎಚ್ಚರಿಕೆ ನೀಡಿದ ಕಾರಣ ಮತ್ತೆ ಅನುಮತಿ ನೀಡಿದ್ದಾರೆ ಎಂದರು.

ಪೂರ್ತಿ ಲೇಖನ ಓದಲು: ಸಾವರ್ಕರ್ ಜಯಂತಿ ಕಾರ್ಯಕ್ರಮಕ್ಕೆ ಸರ್ಕಾರದಿಂದಲೇ ಅಡ್ಡಿ ಯತ್ನ: ಪ್ರತಾಪ‌ ಸಿಂಹ ಆರೋಪ

3

ಇದು ನಿಜಕ್ಕೂ ನಮಗೆ 2ನೇ ಜೀವನ: ರೈಲು ಅಪಘಾತದ ಭೀಕರತೆ ಬಿಚ್ಚಿಟ್ಟ ಬದುಕುಳಿದ ಕುಟುಂಬ

ಒಡಿಶಾದಲ್ಲಿ ಸಂಭವಿಸಿದ ರೈಲು ಅಪಘಾತದ ದೃಶ್ಯ
ಒಡಿಶಾದಲ್ಲಿ ಸಂಭವಿಸಿದ ರೈಲು ಅಪಘಾತದ ದೃಶ್ಯಪಿಟಿಐ

ಒಡಿಶಾದ ಬಾಲಸೋರ್‌ನಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ ಜೀವ ಉಳಿಸಿಕೊಂಡ ಪಶ್ಚಿಮಬಂಗಾಳದ ಒಂದೇ ಕುಟುಂಬದ ಮೂವರು ನಿಟ್ಟುಸಿರುಬಿಟ್ಟಿದ್ದಾರೆ. ಆ ದೇವರೆ ನಮಗೆ ಎರಡನೇ ಬಾರಿಗೆ ಜೀವದಾನ ಮಾಡಿದ್ದಾನೆ ಎಂದು ಅವರು ಹೇಳಿದ್ದಾರೆ. ಪೂರ್ವ ಮೇದಿನಿಪುರ ಜಿಲ್ಲೆಯ ಮಲುಬಾಸನ್ ಹಳ್ಳಿಯ ಸುಬ್ರೊತೊ ಪಾಲ್, ದೇಬೊಶ್ರೀ ಪಾಲ್ ಮತ್ತು ಅವರ ಮಗು ಅಪಘಾತದಲ್ಲಿ ಬದುಕುಳಿದಿದೆ.

ಪೂರ್ತಿ ಲೇಖನ ಓದಲು: ಇದು ನಿಜಕ್ಕೂ ನಮಗೆ 2ನೇ ಜೀವನ: ರೈಲು ಅಪಘಾತದ ಭೀಕರತೆ ಬಿಚ್ಚಿಟ್ಟ ಬದುಕುಳಿದ ಕುಟುಂಬ

4

ಗೋಹತ್ಯೆ ನಿಷೇಧ ಕಾಯ್ದೆ ತಿದ್ದುಪಡಿಗೆ ಚರ್ಚೆ: ಸಚಿವ ವೆಂಕಟೇಶ್‌

Venugopala K.
Venugopala K.

ಬಿಜೆಪಿ ಸರ್ಕಾರ ಜಾರಿಗೊಳಿಸಿರುವ ಗೋಹತ್ಯೆ ನಿಷೇಧ ಕಾಯ್ದೆಗೆ ತಿದ್ದುಪಡಿ ತರುವ ಬಗ್ಗೆ ಚರ್ಚೆ ನಡೆಸಲಾಗುವುದು‘ ಎಂದು ಪಶುಸಂಗೋಪನೆ ಹಾಗೂ ರೇಷ್ಮೆ ಸಚಿವ ಕೆ. ವೆಂಕಟೇಶ್ ಹೇಳಿದರು. ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈಗ ಜಾರಿಯಲ್ಲಿರುವ ಗೋಹತ್ಯೆ ನಿಷೇಧ ಕಾಯ್ದೆಯಲ್ಲಿ ಕೋಣ ಮತ್ತು ಎಮ್ಮೆಗಳ ವಧೆಗೆ ಅವಕಾಶವಿದೆ. ಆದರೆ ಹಸುವನ್ನು ಕಡಿಯಲು ಅವಕಾಶ ಇಲ್ಲ, ಹಸುವನ್ನು ಯಾಕೆ ಕಡಿಯಬಾರದು? ಈ ಕಾಯ್ದೆಯಿಂದಾಗಿ ರೈತರಿಗೆ ಬಹಳ ತೊಂದರೆ ಆಗುತ್ತಿದೆ. ಸ್ವತಃ ನಾನು ಹಸುವನ್ನು ಸಾಕಿದ್ದೇನೆ. ಒಂದು ಹಸು ಸತ್ತುಹೋದಾಗ ಅದನ್ನು ಮಣ್ಣು ಮಾಡಲು ಕಷ್ಟಪಡಬೇಕಾಯಿತು’ ಎಂದರು.

ಪೂರ್ತಿ ಲೇಖನ ಓದಲು: ಗೋಹತ್ಯೆ ನಿಷೇಧ ಕಾಯ್ದೆ ತಿದ್ದುಪಡಿಗೆ ಚರ್ಚೆ: ಸಚಿವ ವೆಂಕಟೇಶ್‌

5

ತ್ರಿವಳಿ ರೈಲು ಅಪಘಾತ: ಅಶ್ವಿನ್ ವೈಷ್ಣವ ರಾಜೀನಾಮೆಗೆ ಕಾಂಗ್ರೆಸ್ ಆಗ್ರಹ

ಅಶ್ವಿನಿ ವೈಷ್ಣವ್‌
ಅಶ್ವಿನಿ ವೈಷ್ಣವ್‌

ಒಡಿಶಾದ ಬಾಲೇಸೋರ್‌ನಲ್ಲಿ ಶುಕ್ರವಾರ ಸಂಭವಿಸಿದ ಭೀಕರ ತ್ರಿವಳಿ ರೈಲು ಅಪಘಾತದ ನೈತಿಕ ಹೊಣೆಹೊತ್ತು ರೈಲ್ವೆ ಸಚಿವ ಅಶ್ವಿನ್ ವೈಷ್ಣವ ಅವರು ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ನಾಯಕರು ಆಗ್ರಹಿಸಿದ್ದಾರೆ. ಒಡಿಶಾದ ಸಂಸದ ಕಾಂಗ್ರೆಸ್‌ನ ಸಪ್ತಗಿರಿ ಉಲಾಖ ಅವರು ಟ್ವೀಟ್ ಮಾಡಿ, ’ರೈಲ್ವೆ ಸಚಿವ ಮೊದಲು ರಾಜೀನಾಮೆ ನೀಡಬೇಕು. ಈ ಭೀಕರ ದುರಂತ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಹಾಗೂ ಎಲ್ಲಾ ರೀತಿಯ ನೆರವು ನೀಡಬೇಕು‘ ಎಂದು ಆಗ್ರಹಿಸಿದ್ದಾರೆ.

ಪೂರ್ತಿ ಲೇಖನ ಓದಲು: ತ್ರಿವಳಿ ರೈಲು ಅಪಘಾತ: ಅಶ್ವಿನ್ ವೈಷ್ಣವ ರಾಜೀನಾಮೆಗೆ ಕಾಂಗ್ರೆಸ್ ಆಗ್ರಹ

6

ಮೈಸೂರು: ಸಾವರ್ಕರ್ ಪ್ರತಿಷ್ಠಾನದ ಕಾರ್ಯಕ್ರಮಕ್ಕೆ ಅಡ್ಡಿ- ಮಾತಿನ ಚಕಮಕಿ

ಸಾವರ್ಕರ್ ಪ್ರತಿಷ್ಠಾನವು ಸಾವರ್ಕರ್ ಜಯಂತಿ ಅಂಗವಾಗಿ ಹಮ್ಮಿಕೊಂಡಿರುವ ಪ್ರಶಸ್ತಿ‌ ಪ್ರದಾನ ಕಾರ್ಯಕ್ರಮಕ್ಕೆ ಪೊಲೀಸರು ಶನಿವಾರ ಮಧ್ಯಾಹ್ನ ತಡೆ ಒಡ್ಡಿದ್ದು, ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣ ಆಗಿತ್ತು. ಕಾರ್ಯಕ್ರಮಕ್ಕೂ ಮುನ್ನ 3ರಿಂದ 5ರವರೆಗೆ ವಿದ್ಯಾರ್ಥಿಗಳಿಗೆ ಚಿತ್ರಕಲೆ ಹಾಗೂ ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿತ್ತು. ಅದರಂತೆ ಸಂಘಟಕರು ಮುಕ್ತ ವಿ.ವಿ. ಆವರಣಕ್ಕೆ ಬಂದಾಗ ಅವರು ಒಳಹೋಗದಂತೆ ಪೊಲೀಸರು ತಡೆದರು. ಕಾರ್ಯಕ್ರಮಕ್ಕೆ ಅನುಮತಿ ಪಡೆಯದ ಕಾರಣ ಒಳಗೆ ಬಿಡುವುದಿಲ್ಲ ಎಂದರು. ಸಂಘಟಕರು ತಾವು ಅನುಮತಿ ಪಡೆದಿರುವುದಾಗಿ ವಾದಿಸಿದರು. ಈ ಗೊಂದಲ ಮುಂದುವರಿದ ಕಾರಣ ಮಕ್ಕಳು ಮುಕ್ತ ವಿ.ವಿ. ಗೇಟಿನ ಮುಂಭಾಗ ರಸ್ತೆಯಲ್ಲೇ ಚಿತ್ರ ಬರೆದರು.

ಪೂರ್ತಿ ಲೇಖನ ಓದಲು: ಮೈಸೂರು: ಸಾವರ್ಕರ್ ಪ್ರತಿಷ್ಠಾನದ ಕಾರ್ಯಕ್ರಮಕ್ಕೆ ಅಡ್ಡಿ- ಮಾತಿನ ಚಕಮಕಿ

7

ಒಡಿಶಾ ರೈಲು ದುರಂತ: ಕಳಸದ 110 ಜನ ಸುರಕ್ಷಿತ

ಒಡಿಶಾದಲ್ಲಿ ಅಪಘಾತಕ್ಜೀಡಾಗಿರುವ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಕಳಸ ತಾಲ್ಲೂಕಿನ 110 ಜನ ಸುರಕ್ಷಿತವಾಗಿದ್ದಾರೆ. ಕಳಸ ತಾಲ್ಲೂಕಿನ ವಿವಿಧ ಗ್ರಾಮಗಳ 110 ಜನ ಉತ್ತರ ಭಾರತ ತೀರ್ಥ ಕ್ಷೇತ್ರಗಳ ದರ್ಶನಕ್ಕೆ ಹೋಗಿದ್ದರು. ಬೆಂಗಳೂರಿನಿಂದ ಗುರುವಾರ ಪ್ರಯಾಣ ಆರಂಭಿಸಿದ್ದರು. '110 ಜನರೂ ಒಟ್ಟಿಗೆ ಪ್ರಯಾಣಿಸಿದ್ದು, ಅವರೊಂದಿಗೆ ಸಂಪರ್ಕ ಸಾಧಿಸಲಾಗಿದೆ‌. ಸುರಕ್ಷಿತವಾಗಿ ಇದ್ದೇವೆ ಎಂದು ತಿಳಿಸಿದ್ದಾರೆ' ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ರೂಪಾ ಬಿ.ಆರ್. 'ಪ್ರಜಾವಾಣಿ'ಗೆ ವಿವರಿಸಿದರು.

ಪೂರ್ತಿ ಲೇಖನ ಓದಲು: ಒಡಿಶಾ ರೈಲು ದುರಂತ: ಕಳಸದ 110 ಜನ ಸುರಕ್ಷಿತ

8

ಗ್ಯಾರಂಟಿ ಯೋಜನೆ ಜಾರಿಯಿಂದ ಟಿ.ವಿ ಬಾಯಿ ಬಂದ್: ದರ್ಶನಾಪುರ

ಬಿಜೆಪಿ ಪಕ್ಷಕಿಂತ ಟಿವಿ ಮಾಧ್ಯಮದವರಿಗೆ ಕಾಂಗ್ರೆಸ್ ಗ್ಯಾರಂಟಿ ಯೋಜನೆ ಜಾರಿ ಚಿಂತೆ ಜಾಸ್ತಿಯಾಗಿದೆ ಎಂದು ಸಣ್ಣ ಕೈಗಾರಿಕಾ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಶರಣಬಸಪ್ಪ ದರ್ಶನಾಪುರ ಮಾಧ್ಯಮಗಳ ವಿರುದ್ಧ ಹರಿಹಾಯ್ದರು. ನಗರದಲ್ಲಿ ಶನಿವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಗ್ಯಾರಂಟಿಗಳನ್ನು ವಾರದಲ್ಲಿ ಜಾರಿ ಮಾಡಲು ಅವಕಾಶ ಮಾಡಿಕೊಡದೆ ಜನರಲ್ಲಿ ಅನಾವಶ್ಯಕ ಗೊಂದಲ ಉಂಟು ಮಾಡಿದರು. ಆದರೆ, ಒಂದು ದಿನವೂ ಬಿಜೆಪಿ ಕಪ್ಪು ಹಣ ತರುವ ಬಗ್ಗೆ, ಬೆಲೆ ಏರಿಕೆ ವಿರುದ್ಧ ಟಿವಿ ಮಾಧ್ಯಮದವರು ಚಕಾರ ಎತ್ತಲಿಲ್ಲ ಎಂದು ಆರೋಪಿಸಿದರು.

ಪೂರ್ತಿ ಲೇಖನ ಓದಲು: ಗ್ಯಾರಂಟಿ ಯೋಜನೆ ಜಾರಿಯಿಂದ ಟಿ.ವಿ ಬಾಯಿ ಬಂದ್: ದರ್ಶನಾಪುರ

9

ಒಡಿಶಾದ ಬಾಲಸೋರ್ ರೈಲ್ವೆ ಮಾರ್ಗದಲ್ಲಿ 'ಕವಚ' ಸುರಕ್ಷಾ ವ್ಯವಸ್ಥೆ ಇರಲಿಲ್ಲವೇ?

ರೈಲುಗಳು ಡಿಕ್ಕಿಯಾಗುವುದನ್ನು ತಡೆಯಲು, ದೇಶೀಯವಾಗಿಯೇ ಅಭಿವೃದ್ಧಿಪಡಿಸಲಾಗಿರುವ ವ್ಯವಸ್ಥೆ 'ಕವಚ' ಆಗಿದೆ. ಆದರೆ ಭೀಕರ ರೈಲು ಅಪಘಾತ ಸಂಭವಿಸಿದ ಒಡಿಶಾದ ಬಾಲಸೋರ್‌ ರೈಲ್ವೆ ಮಾರ್ಗದಲ್ಲಿ ಕವಚ ಸುರಕ್ಷಾ ವ್ಯವಸ್ಥೆ ಇರಲಿಲ್ಲ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಒಂದು ವೇಳೆ ಕವಚ ವ್ಯವಸ್ಥೆ ಇದ್ದಿದ್ದರೆ ರೈಲುಗಳ ಮಧ್ಯೆ ಡಿಕ್ಕಿ ತಪ್ಪಿಸಬಹುದಿತ್ತು ಎಂಬ ಮಾತುಗಳು ಕೇಳಿ ಬರುತ್ತಿವೆ. ಒಡಿಶಾದ ಬಾಲಸೋರ್‌ನಲ್ಲಿ ನಡೆದ ರೈಲು ಅವಘಡದಲ್ಲಿ 261 ಮಂದಿ ಮೃತಪಟ್ಟಿದ್ದು, 900 ಮಂದಿ ಗಾಯಗೊಂಡಿದ್ದಾರೆ.

ಪೂರ್ತಿ ಲೇಖನ ಓದಲು: ಒಡಿಶಾದ ಬಾಲಸೋರ್ ರೈಲ್ವೆ ಮಾರ್ಗದಲ್ಲಿ 'ಕವಚ' ಸುರಕ್ಷಾ ವ್ಯವಸ್ಥೆ ಇರಲಿಲ್ಲವೇ?

10

ಮುಂದೆ ಒಳ್ಳೆಯ ದಿನಗಳು ಬರಲಿವೆ: ಸಿ.ಎಂ ಕನಸು ಹಂಚಿಕೊಂಡ ಡಿ.ಕೆ. ಶಿವಕುಮಾರ್

ಡಿ.ಕೆ. ಶಿವಕುಮಾರ್
ಡಿ.ಕೆ. ಶಿವಕುಮಾರ್

ನನ್ನನ್ನು ಮುಖ್ಯಮಂತ್ರಿ ಮಾಡಬೇಕು ಅಂತ ನೀವು ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸಿದ್ರಿ. ಹೈಕಮಾಂಡ್ ಡಿಸಿಎಂ ಜವಾಬ್ದಾರಿ ನೀಡಿತು. ಆದರ, ನಿರಾಶೆಯಾಗಬೇಕಿಲ್ಲ. ‌ಮುಂದೆ ಒಳ್ಳೆಯ ದಿನಗಳು ಬರಲಿವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು. ಕನಕಪುರ ತಾಲ್ಲೂಕಿನ ಕಲ್ಲಹಳ್ಳಿ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮತದಾರರಿಗೆ ಕೃತಜ್ಞತೆ ಹಾಗೂ ಸನ್ಮಾನ ಸಮಾರಂಭದಲ್ಲಿ, ತಾವಿನ್ನೂ ಸಿ.ಎಂ ಹುದ್ದೆ ಆಕಾಂಕ್ಷಿ ಎಂಬ ಅಭಿಲಾಷೆಯನ್ನು ವ್ಯಕ್ತಪಡಿಸಿದರು.

ಪೂರ್ತಿ ಲೇಖನ ಓದಲು: ಮುಂದೆ ಒಳ್ಳೆಯ ದಿನಗಳು ಬರಲಿವೆ: ಸಿ.ಎಂ ಕನಸು ಹಂಚಿಕೊಂಡ ಡಿ.ಕೆ. ಶಿವಕುಮಾರ್