ನವದೆಹಲಿ: ತಮ್ಮನ್ನು ಪದಚ್ಯುತಗೊಳಿಸುವ ಕುರಿತು ವಿರೋಧ ಪಕ್ಷಗಳು ಸಲ್ಲಿಸಿರುವ ನೋಟಿಸ್ ವಿಚಾರ ಇತ್ಯರ್ಥವಾಗುವವರೆಗೆ ಲೋಕಸಭಾ ಕಲಾಪ ಮುನ್ನಡೆಸದಿರಲು ಸ್ಪೀಕರ್ ಓಂ ಬಿರ್ಲಾ ನಿರ್ಧರಿಸಿದ್ದಾರೆ.

ನೈತಿಕತೆ ಕಾರಣ ನೀಡಿ ಅವರು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸ್ಪೀಕರ್ ಅಥವಾ ಡೆಪ್ಯುಟಿ ಸ್ಪೀಕರ್ ಪದಚ್ಯುತಿಗೆ ಸಂಬಂಧಿಸಿ ಸಲ್ಲಿಕೆಯಾದ ನೋಟಿಸ್ ಅನ್ನು ಪರಿಗಣನೆಗೆ ತೆಗೆದುಕೊಂಡಿದ್ದಲ್ಲಿ ಅವರು ಸದನದ ಅಧ್ಯಕ್ಷತೆ ವಹಿಸುವುದನ್ನು ಸಂವಿಧಾನದ 96ನೇ ವಿಧಿ ನಿರ್ಬಂಧಿಸುತ್ತದೆ.

ಒಂದು ವೇಳೆ ಪದಚ್ಯುತಿಗೆ ಸಂಬಂಧಿಸಿ ವಿಪಕ್ಷಗಳ ನಿರ್ಣಯ ಕುರಿತು ಲೋಕಸಭೆಯಲ್ಲಿ ಚರ್ಚೆ ನಡೆದಲ್ಲಿ ತಮ್ಮನ್ನು ಸಮರ್ಥನೆ ಮಾಡಿಕೊಳ್ಳುವುದಕ್ಕೆ ಬಿರ್ಲಾ ಅವರಿಗೆ ಸಾಂವಿಧಾನಿಕ ಹಕ್ಕು ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.