ನವದೆಹಲಿ: ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಯ (ಸಿಬಿಎಸ್ಇ) 10 ಮತ್ತು 12ನೇ ತರಗತಿಯ ಪರೀಕ್ಷೆಗಳ ಫಲಿತಾಂಶ ಇಂದು (ಮಂಗಳವಾರ) ಪ್ರಕಟವಾಗಿದೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ್ದು, ಒಂದು ಪರೀಕ್ಷೆಯಿಂದ ಯಾರೊಬ್ಬರನ್ನು ವ್ಯಾಖ್ಯಾನಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಸಿಬಿಎಸ್ಇ ಪರೀಕ್ಷೆಯಲ್ಲಿ ಉತ್ತೀರ್ಣರಾದ 10 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳಿಗೆ ಅಭಿನಂದನೆಗಳು. 'ಇದು ನಿಮ್ಮ ದೃಢನಿಶ್ಚಯ, ಶಿಸ್ತು ಮತ್ತು ಕಠಿಣ ಪರಿಶ್ರಮದ ಫಲಿತಾಂಶವಾಗಿದೆ. ಈ ಸಾಧನೆಗೆ ಕಾರಣರಾದ ಪೋಷಕರ ಪಾತ್ರವನ್ನು ಗುರುತಿಸುವ ದಿನ ಇಂದು' ಎಂದೂ ಹೇಳಿದ್ದಾರೆ.
.ಭಾರತ-ಪಾಕ್ ಕದನ ವಿರಾಮ | ಉನ್ನತ ಸೇನಾಧಿಕಾರಿಗಳೊಂದಿಗೆ ರಾಜನಾಥ ಸಿಂಗ್ ಸಭೆ.CBSE 10ನೇ ತರಗತಿ ಫಲಿತಾಂಶ ಪ್ರಕಟ: ಬೆಂಗಳೂರಿಗೆ ಮೂರನೇ ಸ್ಥಾನ.
'ಕೇವಲ ಒಂದು ಪರೀಕ್ಷೆಯಿಂದ ನಿಮ್ಮನ್ನು ವ್ಯಾಖ್ಯಾನಿಸಲು ಸಾಧ್ಯವಿಲ್ಲ. ನಿಮ್ಮ ಪ್ರಯಾಣವು ಬಹಳಷ್ಟಿದೆ ಮತ್ತು ಸಾಮರ್ಥ್ಯಗಳು ಅಂಕಪಟ್ಟಿಯನ್ನು ಮೀರಿವೆ. ಆತ್ಮವಿಶ್ವಾಸದಿಂದಿರಿ. ಏಕೆಂದರೆ ಮುಂದೆ ಅದ್ಭುತ ವಿಷಯಗಳು ನಿಮಗಾಗಿ ಕಾಯುತ್ತಿರಬಹುದು' ಎಂದು ಪರೀಕ್ಷೆಯಲ್ಲಿ ನಿರಾಶೆಗೊಂಡವರಿಗೆ ಮೋದಿ ಕಿವಿಮಾತು ಹೇಳಿದ್ದಾರೆ.

ಈ ಬಾರಿಯ ಸಿಬಿಎಸ್ಇ 12ನೇ ತರಗತಿ ವಿದ್ಯಾರ್ಥಿಗಳ ಉತ್ತೀರ್ಣ ಪ್ರಮಾಣ ಶೇ 88.39ರಷ್ಟಿದೆ. ಕಳೆದ ಸಾಲಿಗಿಂತ ಫಲಿತಾಂಶದಲ್ಲಿ ಈ ಬಾರಿ ಅಲ್ಪ ಹೆಚ್ಚಳವಾಗಿದೆ. ಬಾಲಕಿಯರ ಉತ್ತೀರ್ಣ ಪ್ರಮಾಣ ಶೇ 91.64ರಷ್ಟು, ಬಾಲಕರ ಉತ್ತೀರ್ಣ ಪ್ರಮಾಣ ಶೇ 85.70ರಷ್ಟಿದೆ.

ಸಿಬಿಎಸ್ಇ 10ನೇ ತರಗತಿ ಪರೀಕ್ಷೆಯಲ್ಲಿ ಶೇ 93.60ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.ಶೇ 98.90 ರಷ್ಟು ಫಲಿತಾಂಶ ಪಡೆದು ಬೆಂಗಳೂರು ಮೂರನೇ ಸ್ಥಾನ ಗಳಿಸಿದೆ.
.ಶೋಪಿಯಾನ್ | ಭದ್ರತಾ ಪಡೆಗಳೊಂದಿಗೆ ಗುಂಡಿನ ಚಕಮಕಿ: ಮೂವರು ಉಗ್ರರ ಹತ್ಯೆ.ಮೃತ ಉಗ್ರರ ಅಂತ್ಯಕ್ರಿಯೆ ನಡೆಸಿದವ ಸಾಮಾನ್ಯ ವ್ಯಕ್ತಿ? ಪಾಕ್ ಬಣ್ಣ ಬಯಲಿಗೆಳೆದ PIB.ಪಾಕ್ ಅಣ್ವಸ್ತ್ರ ನೆಲೆಯಿರುವ ಕಿರಾನಾ ಬೆಟ್ಟಗಳ ಮೇಲೆ ದಾಳಿ ಮಾಡಿಲ್ಲ: ವಾಯುಪಡೆ.ಪಂಜಾಬ್ನ ಆದಮ್ಪುರ ವಾಯುನೆಲೆಗೆ ಭೇಟಿ ನೀಡಿದ ಪ್ರಧಾನಿ ಮೋದಿ: ಯೋಧರ ಜತೆ ಸಂವಾದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.