ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯ ಜನಾಂಗೀಯ ಶುದ್ಧೀಕರಣ ಸಮರ್ಥಿಸಿದ ಭಾರತ ಮೂಲದ ದುಬೈ ವೈದ್ಯೆಗೆ ತಪರಾಕಿ  

Last Updated 15 ಏಪ್ರಿಲ್ 2019, 14:04 IST
ಅಕ್ಷರ ಗಾತ್ರ

ನವದೆಹಲಿ: ಭಾರತದಲ್ಲಿ ಮುಸ್ಲೀಂ ಮತ್ತು ಕ್ರೈಸ್ತ ಸಮುದಾಯದವನ್ನು ಗುರಿಯಾಗಿಸಿಕೊಂಡು ‘ಜನಾಂಗೀಯ ಶುದ್ಧೀಕರಣ’ದಂಥ ವಿದ್ಯಮಾನಗಳು ನಡೆಯುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದ್ದ ವ್ಯಕ್ತಿಯೊಬ್ಬರ ಟ್ವೀಟ್‌ಗೆ ಪ್ರತಿಕ್ರಿಯೆ ನೀಡುವಾಗ ಜನಾಂಗೀಯ ದ್ವೇಷ ಪ್ರತಿಪಾದಿಸಿದ ಭಾರತ ಮೂಲದ ವೈದ್ಯೆಗೆ ಸಾಮಾಜಿಕ ಜಾಲತಾಣಿಗರು ಭಾರಿ ತಪರಾಕಿ ಹಾಕಿದ್ದಾರೆ.

ದುಬೈನಲ್ಲಿ 25 ವರ್ಷಗಳಿಂದ ನೆಲೆಸಿರುವ ಭಾರತ ಮೂಲದ, ಬಿಜೆಪಿ ಬೆಂಬಲಿತ ಡಾ. ನಿಶಾ ಸಿಂಗ್‌ ಅವರು ಟ್ವೀಟ್‌ವೊಂದಕ್ಕೆ ತಿರುಗೇಟು ನೀಡಲು ಹೋಗಿ ಸದ್ಯ ತಾವೇ ಪೇಚಿಗೆ ಸಿಲುಕಿದ್ದಾರೆ. ನಿಶಾ ಮಾಡಿದ್ದ ಜನಾಂಗೀಯ ದ್ವೇಷದ ಟ್ವೀಟ್‌ ಅನ್ನು ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯವಾಗಿರುವವರು ದುಬೈನ ಸರ್ಕಾರ, ಪೊಲೀಸ್‌ ಇಲಾಖೆ, ಸಾರಿಗೆ ಇಲಾಖೆ, ಅಲ್ಲಿನ ಸ್ನೇಹಿತರ ಗಮನಕ್ಕೆ ತಂದಿದ್ದಾರೆ.

ಭಾರತದಲ್ಲಿ ಸದ್ಯ ಲೋಕಸಭೆ ಚುನಾವಣೆ ನಡೆಯುತ್ತಿದೆ. ಇತ್ತೀಚೆಗೆ ಬಿಜೆಪಿ ಸಮಾವೇಶವೊಂದರಲ್ಲಿ ಮಾತನಾಡಿದ್ದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ, ‘ಹಿಂದೂ, ಬೌದ್ಧ, ಸಿಖ್ಖನಲ್ಲದ ಪ್ರತಿಯೊಬ್ಬ ನುಸುಳುಕೋರರನ್ನು ಭಾರತದಿಂದ ಓಡಿಸುತ್ತೇವೆ. ಹಿಂದೂ ಮತ್ತು ಬೌದ್ಧ ನಿರಾಶ್ರಿತರನ್ನು ಹುಡುಕಿ ಅವರಿಗೆ ನಾಗರಿಕತ್ವ ಮತ್ತು ಆಶ್ರಯ ಕಲ್ಪಿಸುತ್ತೇವೆ,‘ ಎಂದು ಹೇಳಿದ್ದರು. ಅಮಿತ್‌ ಶಾ ಅವರ ಈ ಹೇಳಿಕೆಯನ್ನು ಬಿಜೆಪಿ ತನ್ನ ಅಧಿಕೃತ ಟ್ವಿಟರ್‌ ಖಾತೆಯಲ್ಲೂ ಪ್ರಕಟಿಸಿತ್ತು. ಇದಕ್ಕೆ ಟ್ವಿಟರಿಗರೊಬ್ಬರು ‘ ಮುಸ್ಲೀಂ ಮತ್ತು ಕ್ರೈಸ್ತರನ್ನು ಗುರಿಯಾಗಿಸಿಕೊಂಡು ಜನಾಂಗೀಯ ಶುದ್ಧೀಕರಣ ಮಾಡುವುದು ಭಾರತದಲ್ಲಿ ಚುನಾವಣಾ ಭರವಸೆಯಾಗಿದೆ,’ ಎಂದು ಬರೆದುಕೊಂಡಿದ್ದರು.

ಈ ಟ್ವೀಟ್‌ಗೆ ತಿರುಗೇಟು ನೀಡಲು ಹೋದ ವೈದ್ಯೆ ನಿಶಾ ಸಿಂಗ್‌ ಅವರು, ‘ಅಬ್ರಾಹಾಮಿಕರಣ ನಂಬಿಕೆಗಳ ಏಕೈಕ ಅಜೆಂಡಾಮತಾಂತರ. ಈ ಅಬ್ರಹಾಮೀಕರಣಕ್ಕೆ ಸುಮುದಾಯ ಸೇವೆಯ ಹೆಸರಲ್ಲಿ ಅನಾಮಿಕ ಮೂಲದಿಂದ ಅನಿಯಮಿತ ಮತ್ತು ಗೌಪ್ಯ ದೇಣಿಗೆ ಬರುತ್ತದೆ,’ ಎಂದು ಬರೆದುಕೊಂಡಿದ್ದರು. ವೈದ್ಯೆ ಈ ರೀತಿ ಹೇಳುತ್ತಲೇ ಟ್ವಿಟರ್‌, ಫೇಸ್‌ಬುಕ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವೈದ್ಯೆ ವಿರುದ್ಧ ಪೋಸ್ಟ್‌ಗಳು ಪ್ರಕಟವಾದವು. ಮಹಿಳೆ ವಿರುದ್ಧ ಸಾಮಾಜಿಕ ತಾಣದಿಂದಲೇ ದುಬೈ ಪೊಲೀಸರಿಗೆ, ಆಡಳಿತ ವರ್ಗಕ್ಕೆ ದೂರು ನೀಡಲಾಯಿತು.

ಅಷ್ಟೇ ಅಲ್ಲ, ನಿಶಾ ಸಿಂಗ್‌ ಅವರನ್ನು ‘ಚೌಕಿದಾರ್‌ ವೈದ್ಯೆ, ಚೌಕಿದಾರ್‌ ಆಂಟಿ’ ಎಂದೂ ಕೂಡ ಸಾಮಾಜಿಕ ತಾಣಗಳಲ್ಲಿ ಗೇಲಿ ಮಾಡಲಾಗುತ್ತಿದೆ. ಅವರ ಹೇಳಿಕೆ ಸ್ಕ್ರೀನ್‌ ಶಾಟ್‌ ಅನ್ನು ದುಬೈನ ಗೆಳೆಯರಿಗೆ ಟ್ಯಾಗ್‌ ಮಾಡಲಾಗುತ್ತಿದೆ. ಇದೆಲ್ಲದರಿಂದ ಬೆದರಿರುವ ನಿಶಾ ಸಿಂಗ್‌ ಅವರು ಸದ್ಯ ತಮ್ಮ ಟ್ವಿಟರ್‌ ಖಾತೆಯನ್ನೇ ಅಳಿಸಿಹಾಕಿದ್ದಾರೆ.

ಕಳೆದ 25 ವರ್ಷಗಳಿಂದಲೂ ದುಬೈನಲ್ಲಿ ಪ್ರಸೂತಿ ತಜ್ಞೆಯಾಗಿರುವ ನಿಶಾ ಅವರು, ಅಲ್ಲಿ ಆಸ್ಪತ್ರೆಯನ್ನೂ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT