ನವದೆಹಲಿ: ದೇಶದ ಮೂರೂ ಮಾದರಿಯ ಸೇನಾಪಡೆಗಳಲ್ಲಿ 1.5 ಲಕ್ಷಕ್ಕೂ ಅಧಿಕ ಹುದ್ದೆಗಳು ಖಾಲಿ ಇವೆ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಗೆ ತಿಳಿಸಿದೆ.

ಸಶಸ್ತ್ರ ಪಡೆಗಳ ಸಿಬ್ಬಂದಿ ಕೊರತೆ ತಗ್ಗಿಸುವ ಕ್ರಮಗಳನ್ನು ಸಶಸ್ತ್ರ ಪಡೆಗಳು ನಿಯಮಿತವಾಗಿ ಪರಿಶೀಲಿಸುತ್ತವೆ. ಖಾಲಿ ಇರುವ ಹುದ್ದೆಗಳ ಭರ್ತಿ ಮತ್ತು ಸೇನೆ ಸೇರಲು ಯುವಕರನ್ನು ಉತ್ತೇಜಿಸುವತ್ತ ಕ್ರಮ ಕೈಗೊಳ್ಳಲಾಗಿದೆ ಎಂದು ರಕ್ಷಣಾ ಇಲಾಖೆಯ ರಾಜ್ಯ ಸಚಿವ ಅಜಯ್ ಭಟ್ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಮೆಡಿಕಲ್ ಹಾಗೂ ಡೆಂಟಲ್ ವಿಭಾಗ ಸೇರಿ ಭೂಸೇನೆಯಲ್ಲಿ 8,129 ಆಫೀಸರ್ಸ್ ಹುದ್ದೆಗಳು ಖಾಲಿ ಇವೆ. ಮಿಲಿಟರಿ ನರ್ಸಿಂಗ್ ಸೇವೆಯಲ್ಲಿ 509, ಜೂನಿಯರ್ ಕಮಿಷನ್ಡ್ ಆಫೀಸರ್(ಜೆಸಿಒ) ಮತ್ತು ಇತರೆ ಶ್ರೇಣಿಯ 1,27,673 ಹುದ್ದೆಗಳು ಖಾಲಿ ಇವೆ ಎಂದು ತಿಳಿಸಿದರು.

ನೌಕಾಪಡೆಯಲ್ಲಿ 12,428 ಸಿಬ್ಬಂದಿ ಕೊರತೆ ಇದೆ. 1,653 ಅಧಿಕಾರಿಗಳು, 29 ವೈದ್ಯಕೀಯ ಮತ್ತು ದಂತವೈದ್ಯ ಹಾಗೂ 10,746 ನಾವಿಕರ ಕೊರತೆ ಇದೆ ಎಂದು ಸಚಿವರು ತಮ್ಮ ಉತ್ತರದಲ್ಲಿ ತಿಳಿಸಿದ್ದಾರೆ.

ಭಾರತೀಯ ವಾಯುಪಡೆಯಲ್ಲಿ 7,031 ಸಿಬ್ಬಂದಿ ಕೊರತೆ ಇದೆ. 721 ಅಧಿಕಾರಿಗಳು, 16 ವೈದ್ಯಕೀಯ ಅಧಿಕಾರಿಗಳು, 4,734 ಏರ್‌ಮೆನ್‌ಗಳು ಮತ್ತು 113 ವೈದ್ಯಕೀಯ ಸಹಾಯಕ ಏರ್‌ಮೆನ್‌ಗಳ ಕೊರತೆ ಇದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.