ಭುವನೇಶ್ವರ: ಕಳೆದ 10 ವರ್ಷಗಳಲ್ಲಿ ಒಡಿಶಾದ 400ಕ್ಕೂ ಹೆಚ್ಚು ವಲಸೆ ಕಾರ್ಮಿಕರು ಹೊರ ರಾಜ್ಯಗಳಲ್ಲಿ ಮೃತಪಟ್ಟಿದ್ದಾರೆ ಎಂದು ಕಾರ್ಮಿಕ ಸಚಿವ ಗಣೇಶ್ ರಾಮ್ ಸಿಂಗ್ಖುಂಟಿಯಾ ಅವರು ವಿಧಾನಸಭೆಗೆ ಮಂಗಳವಾರ ತಿಳಿಸಿದ್ದಾರೆ.

ಬಿಜೆಪಿ ಶಾಸಕ ಟಂಕಧರ್ ತ್ರಿಪಾಠಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ಗಣೇಶ್ ರಾಮ್ ಸಿಂಗ್ಖುಂಟಿಯಾ, 2015ರ ನವೆಂಬರ್ 27ರಿಂದ 2024ರ ನಡುವೆ ಒಡಿಶಾದ 403 ವಲಸೆ ಕಾರ್ಮಿಕರು ಇತರ ರಾಜ್ಯಗಳಲ್ಲಿ ಸಾವಿಗೀಡಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಹೊರರಾಜ್ಯಗಳಲ್ಲಿ ಮೃತಪಟ್ಟವರಲ್ಲಿ ಗಂಜಾಂ ಜಿಲ್ಲೆಗೆ ಸೇರಿದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಜಿಲ್ಲೆಯ ಸುಮಾರು 59 ಕಾರ್ಮಿಕರು ಮೃತಪಟ್ಟಿದ್ದಾರೆ. ಕಲಹಂಡಿಯಲ್ಲಿ–39, ಬೋಲಂಗೀರ್–35, ಕಂಧಮಾಲ್–32 ಮತ್ತು ರಾಯಗಡದಲ್ಲಿ –28 ಸಾವುಗಳು ವರದಿಯಾಗಿವೆ.

2014ರಲ್ಲಿ 26,397 ಕಾರ್ಮಿಕರ ವಲಸೆಗಾಗಿ ಒಡಿಶಾ ಸರ್ಕಾರವು ಅಂತರ-ರಾಜ್ಯ ವಲಸೆ ಕಾರ್ಮಿಕರ (ಉದ್ಯೋಗದ ನಿಯಂತ್ರಣ ಮತ್ತು ಸೇವಾ ಷರತ್ತುಗಳು) ಕಾಯ್ದೆ 1979ರ ನಿಬಂಧನೆಗಳ ಅಡಿಯಲ್ಲಿ 388 ಗುತ್ತಿಗೆದಾರರಿಗೆ ಪರವಾನಗಿಗಳನ್ನು ನೀಡಿದೆ.

ಅಲ್ಲದೇ 2024ರಲ್ಲಿ, 60,683 ಕಾರ್ಮಿಕರ ವಲಸೆಗಾಗಿ 883 ಮಂದಿ ಗುತ್ತಿಗೆದಾರರಿಗೆ ಪರವಾನಗಿಗಳನ್ನು ನೀಡಲಾಗಿದೆ ಎಂದು ಸಚಿವರು ಹೇಳಿದ್ದಾರೆ.

ವಲಸೆ ಸಮಸ್ಯೆಯನ್ನು ಪರಿಹರಿಸಲು ಸರ್ಕಾರ ಉಪ ಮುಖ್ಯಮಂತ್ರಿ ಕೆ.ವಿ. ಸಿಂಗ್ ಡಿಯೋ ನೇತೃತ್ವದಲ್ಲಿ ಉನ್ನತ ಮಟ್ಟದ ಕಾರ್ಯಪಡೆಯನ್ನು ಸ್ಥಾಪಿಸಿದೆ ಎಂದೂ ಅವರು ಹೇಳಿದ್ದಾರೆ.
.ವಯನಾಡ್ ಭೂಕುಸಿತ: ಸಂಕಷ್ಟದಲ್ಲಿ ಬಂಗಾಳದ 242 ವಲಸೆ ಕಾರ್ಮಿಕರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.