ಪಟ್ನಾ: ಬಿಹಾರದಲ್ಲಿ ಮದ್ಯ ನಿಷೇಧ ಕಾನೂನನ್ನು ಸಮರ್ಪಕವಾಗಿ ಜಾರಿಗೊಳಿಸುವ ವಿಚಾರದಲ್ಲಿ ಪೊಲೀಸರು ಮತ್ತು ಮದ್ಯ ವಿರೋಧಿ ಕಾರ್ಯಪಡೆ (ಎಎಲ್‌ಟಿಎಫ್) ತೀವ್ರ ಟೀಕೆಗಳನ್ನು ಎದುರಿಸುತ್ತಿದೆ. ಆದರೂ, ಕಳೆದ 7 ತಿಂಗಳಲ್ಲಿ ಕಾಯ್ದೆ ಅಡಿಯಲ್ಲಿ 73,000ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಿರುವುದಾಗಿ ಎಎಲ್‌ಟಿಎಫ್ ಹೇಳಿದೆ.

‘ನಮ್ಮ ಇಲಾಖೆ 40,000 ಕ್ಕೂ ಹೆಚ್ಚು ಜನರನ್ನು ಬಂಧಿಸಿದೆ ಮತ್ತು ಉಳಿದವರನ್ನು ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ’ ಎಂದು ಎಎಲ್‌ಟಿಎಫ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ನಕಲಿ ಮದ್ಯ ಸೇವನೆ ಶಂಕೆ; ಬಿಹಾರದಲ್ಲಿ 10 ಮಂದಿ ಸಾವು

‘ಮದ್ಯ ನಿಷೇಧ ಕಾಯ್ದೆ ಅಡಿಯಲ್ಲಿ ಬಿಹಾರದಲ್ಲಿ ಒಟ್ಟು 73,413 ಮಂದಿಯನ್ನು ಬಂಧಿಸಲಾಗಿದೆ. ಅದರಲ್ಲಿ 40,074 ಜನರನ್ನು ಎಎಲ್‌ಟಿಎಫ್ ಬಂಧಿಸಿದೆ. ಏಳು ತಿಂಗಳ ಅವಧಿಯಲ್ಲಿ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ 52,770 ಎಫ್‌ಐಆರ್‌ಗಳು ದಾಖಲಾಗಿವೆ’ ಎಂದು ಮಾಹಿತಿ ಹಂಚಿಕೊಂಡರು.

‘ಏಪ್ರಿಲ್ 2016ರಿಂದ ಬಿಹಾರದಲ್ಲಿ ಮದ್ಯ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ. 2018ರಲ್ಲಿ 4,012, 2019ರಲ್ಲಿ 4,313, 2020ರಲ್ಲಿ 3,802 ಮತ್ತು 2021ರಲ್ಲಿ 5,522 ಆರೋಪಿಗಳನ್ನು ಕಾಯ್ದೆ ಅಡಿಯಲ್ಲಿ ಬಂಧಿಸಲಾಗಿದೆ. ಈ ವರ್ಷದ ಜನವರಿಯಲ್ಲಿ 4,357, ಫೆಬ್ರವರಿಯಲ್ಲಿ 4,118, ಮಾರ್ಚ್‌ನಲ್ಲಿ 5,422, ಏಪ್ರಿಲ್‌ನಲ್ಲಿ 4,490, ಮೇನಲ್ಲಿ 6,255, ಜೂನ್‌ನಲ್ಲಿ 6,992 ಮತ್ತು ಜುಲೈನಲ್ಲಿ 8,440 ಮಂದಿಯನ್ನು ಬಂಧಿಸಲಾಗಿದೆ’ ಎಂದು ಅವರು ತಿಳಿಸಿದರು.

‘ನಾವು ಬಿಹಾರದ ಎಲ್ಲಾ 38 ಜಿಲ್ಲೆಗಳಲ್ಲಿ 233 ತಂಡಗಳನ್ನು ಹೊಂದಿದ್ದೇವೆ. ಜಿಲ್ಲಾ ಪೊಲೀಸರ ಸಹಯೋಗದೊಂದಿಗೆ ಹಗಲಿರುಳು ಕೆಲಸ ಮಾಡುತ್ತಿದ್ದೇವೆ’ ಎಂದು ಅಧಿಕಾರಿ ಹೇಳಿದರು.

ಇವುಗಳನ್ನೂ ಓದಿ

ಮದ್ಯ ನಿಷೇಧಕ್ಕೆ ಒತ್ತಾಯಿಸಿ ಮದ್ಯದಂಗಡಿಗೆ ಕಲ್ಲೆಸೆದ ಉಮಾಭಾರತಿ

ಬಿಹಾರ ವಿಧಾನಸಭೆ ಆವರಣದಲ್ಲಿ ಮದ್ಯದ ಬಾಟಲಿ ಪತ್ತೆ: ಗಂಭೀರವಾಗಿ ಪರಿಗಣಿಸಿದ ಸಿಎಂ

ನಿತೀಶ್ ಕುಮಾರ್ ಗಾಂಜಾ ಸೇದುತ್ತಿದ್ದರು: ಆರ್ಜೆಡಿ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.