ಭಾರತಕ್ಕೆ ಬಂದಿದ್ದ ಪಾಕಿಸ್ತಾನ ದಂಪತಿ ವಾಘಾ ಗಡಿಯ ಮೂಲಕ ಪಾಕಿಸ್ತಾನಕ್ಕೆ ವಾಪಸಾದರು –ಪಿಟಿಐ ಚಿತ್ರ
‘ನಾನೇನು ಹೇಳಲಿ’
‘ನನ್ನ ಸಹೋದರಿ ಕರಾಚಿಯಲ್ಲಿದ್ದಾರೆ. ಅವಳಿಗೆ ಗಂಭೀರ ಆರೋಗ್ಯ ಸಮಸ್ಯೆ ಇದೆ. ನನಗೆ ಒಂದು ತಿಂಗಳ ವೀಸಾ ಸಿಕ್ಕಿದೆ. ಕರಾಚಿಗೆ ನಾನು ಹೋಗಬೇಕು‘ ಎಂದು ಉತ್ತರ ಪ್ರದೇಶದ ಕಾನ್ಪುರ ನಿವಾಸಿ ಸೀಮಾ ಅವರು ಹೇಳಿದರು . ‘ವಾಘಾ ಗಡಿಯನ್ನು ಮುಚ್ಚುತ್ತಿದ್ದಾರಲ್ಲ ಏನು ಮಾಡುವಿರಿ’ ಎಂದು ಪತ್ರಕರ್ತರು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸೀಮಾ ‘ನಾನೇನು ಹೇಳಲಿ?’ ಎಂದರು.