ನವದೆಹಲಿ: ಲೋಕಸಭೆ ಮತ್ತು ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಕುರಿತ ಎರಡು ಮಸೂದೆಗಳನ್ನು ಪರಿಶೀಲಿಸುತ್ತಿರುವ ಸಂಸದೀಯ ಸಮಿತಿಯ ಅವಧಿಯನ್ನು ಚಳಿಗಾಲದ ಅಧಿವೇಶನದ ಕೊನೆ ವಾರದವರೆಗೆ ವಿಸ್ತರಿಸಲಾಗಿದೆ.

ಜಂಟಿ ಸಂಸದೀಯ ಸಮಿತಿಯ (ಜೆಸಿಪಿ) ಅಧ್ಯಕ್ಷ ಪಿ.ಪಿ.ಚೌಧರಿ ಅವರು ಮಂಡಿಸಿದ ಈ ಕುರಿತ ಗೊತ್ತುವಳಿಯನ್ನು ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು.

ವರದಿ ಮಂಡಿಸಲು ಸಮಿತಿಗೆ ಚಳಿಗಾಲ ಅಧಿವೇಶನದ ಕೊನೆಯ ವಾರದ ಮೊದಲ ದಿನದವರೆಗೆ ಸಮಯ ನೀಡಲಾಗಿದೆ.

ದೇಶದಾದ್ಯಂತ ಲೋಕಸಭೆ ಹಾಗೂ ಕೇಂದ್ರಾಡಳಿತ ಪ್ರದೇಶಗಳ ವಿಧಾನಸಭೆಗಳಿಗೆ ಏಕಕಾಲದಲ್ಲಿ ಸಾಮಾನ್ಯ ಚುನಾವಣೆ ನಡೆಸುವ ಉದ್ದೇಶವನ್ನು ಈ ಮಸೂದೆಗಳು ಒಳಗೊಂಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.