ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಗ್ನೇಯ ಏಷ್ಯಾ ವಲಯದಲ್ಲಿ ತಗ್ಗಿದ ತಂಬಾಕು ಸೇವನೆ: ಡಬ್ಲ್ಯುಎಚ್‌ಒ

Last Updated 17 ನವೆಂಬರ್ 2021, 8:21 IST
ಅಕ್ಷರ ಗಾತ್ರ

ನವದೆಹಲಿ: ಆಗ್ನೇಯ ಏಷ್ಯಾ ವಲಯ ತಂಬಾಕು ಬಳಕೆಯಲ್ಲಿ ನಿಯಂತ್ರಣ ಸಾಧಿಸಿರುವುದಕ್ಕಾಗಿ ವಿಶ್ವ ಆರೋಗ್ಯ ಸಂಸ್ಥೆ, ಆ ವಲಯದ ರಾಷ್ಟ್ರಗಳ ಪ್ರಯತ್ನವನ್ನು ಬುಧವಾರ ಶ್ಲಾಘಿಸಿದೆ.

ಕೋವಿಡ್ ಪಿಡುಗಿನ ಹೊರತಾಗಿಯೂ ಸತತ ಮತ್ತು ಸಂಘಟಿತ ಪ್ರಯತ್ನ ವರ್ಷ ಪೂರ್ತಿ ಮುಂದುವರಿಯಬೇಕು.ತಂಬಾಕು ಸೇವನೆಯಂತಹ ಪಿಡುಗನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಆ ಪ್ರಯತ್ನಗಳು ಮತ್ತಷ್ಟು ಹೆಚ್ಚಾಗಬೇಕು ಎಂದು ಡಬ್ಲ್ಯುಎಚ್‌ಒ ಹೇಳಿದೆ.

ತಂಬಾಕು ಸೇವನೆ ಕಡಿತಗೊಳಿಸಲು ಆಗ್ನೇಯ ಏಷ್ಯಾ ರಾಷ್ಟ್ರಗಳು ಕಣ್ಗಾವಲನ್ನು ಬಲವರ್ಧಿಸಿದ್ದು, ತಂಬಾಕು ಸೇವನೆಗೆ ನೆರವಾಗುವಸೇವೆಗಳು ಸೇರಿದಂತೆ ತಂಬಾಕು ನಿಯಂತ್ರಣ ಕ್ರಮಗಳನ್ನು ವಿಸ್ತರಿಸುವುದು ಯಶಸ್ಸಿಗೆ ಕೆಲವು ಪ್ರಮುಖ ಕಾರಣಗಳಾಗಿವೆ ಎಂದು ಡಬ್ಲ್ಯುಎಚ್‌ಒ ಆಗ್ನೇಯ ಏಷ್ಯಾದ ವಲಯದ ವಲಯ ನಿರ್ದೇಶಕಿ ಡಾ. ಪೂನಮ್ ಖೇತ್ರಪಾಲ್‌ ಸಿಂಗ್‌ ಹೇಳಿದ್ದಾರೆ.

2000–2025ರ (4ನೇ ಆವೃತ್ತಿ 2021) ನಡುವೆ ತಂಬಾಕು ಬಳಕೆ ಪ್ರವೃತ್ತಿಗಳ ಕುರಿತು ವಿಶ್ವ ಆರೋಗ್ಯ ಸಂಸ್ಥೆಯ ಜಾಗತಿಕ ವರದಿ ಪ್ರಕಾರ, ಡಬ್ಲ್ಯುಎಚ್‌ಒ ಆಗ್ನೇಯ ಏಷ್ಯಾ ಪ್ರದೇಶವುತಂಬಾಕಿನ ಬಳಕೆಯನ್ನು ವೇಗವಾಗಿ ತಗ್ಗಿಸಿದೆ. ಹಾಗೆಯೇ, ಪುರುಷರಲ್ಲಿ 2000 ರಲ್ಲಿ ಶೇ 50ರಷ್ಟಿದ್ದ ಧೂಮಪಾನದ ಸರಾಸರಿ ಪ್ರಮಾಣ 2020 ರಲ್ಲಿ ಶೇಕಡಾ 25ಕ್ಕೆ ಇಳಿದಿದೆ. ಮಹಿಳೆಯರಲ್ಲಿ 2000ರಲ್ಲಿ ಶೇ 8.9 ರಷ್ಟಿದ್ದ ತಂಬಾಕು ಸೇವನೆ ಪ್ರಮಾಣ 2020 ರಲ್ಲಿ ಶೇ 1.6 ಕ್ಕೆ ಇಳಿಮುಖವಾಗಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT