ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ವಾಹನಗಳ ಹಾರ್ನ್‌ಗಳಲ್ಲಿ ಹೊರಡಲಿದೆ ಸರಿಗಮ: ಗಡ್ಕರಿ ಮುಂದಿನ ಯೋಜನೆ!

Last Updated 5 ಅಕ್ಟೋಬರ್ 2021, 4:17 IST
ಅಕ್ಷರ ಗಾತ್ರ

ನಾಸಿಕ್‌ (ಮಹಾರಾಷ್ಟ್ರ): ಭಾರತೀಯ ಸಂಗೀತ ವಾದ್ಯಗಳ ನಾದವನ್ನು ವಾಹನಗಳ ಹಾರ್ನ್ ಆಗಿ ಅಳವಡಿಸುವಂತೆ ಮಾಡಲು ಕಾನೂನು ರೂಪಿಸುವ ಬಗ್ಗೆ ಚಿಂತನೆ ನಡೆಸುತ್ತಿರುವುದಾಗಿ ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ತಿಳಿಸಿದ್ದಾರೆ.

ನಗರದಲ್ಲಿ ನಡೆದ ಹೆದ್ದಾರಿ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಗಡ್ಕರಿ, ಆಂಬುಲೆನ್ಸ್‌ ಮತ್ತು ಪೊಲೀಸ್‌ ವಾಹನಗಳಲ್ಲಿ ಬಳಸುವ ಸೈರನ್‌ ಹಾಗೂ ಅವುಗಳನ್ನು ಬದಲಿಸುವ ಕುರಿತು ಅಧ್ಯಯನ ನಡೆಸುತ್ತಿದ್ದೇನೆ ಎಂದು ಹೇಳಿದ್ದಾರೆ. ಅದೇರೀತಿ ವಾಹನಗಳ ಮೇಲಿನ ʼಕೆಂಪು ದೀಪʼವನ್ನೂ ತೆಗೆಯುವ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ʼಕಲಾವಿದರೊಬ್ಬರು ಸಂಯೋಜಿಸಿರುವ ಆಕಾಶವಾಣಿ (ಆಲ್‌ ಇಂಡಿಯಾ ರೆಡಿಯೊ)‌ ಟ್ಯೂನ್‌ಅನ್ನು ಆಂಬುಲೆನ್ಸ್‌ಗಳಿಗೆ ಅಳವಡಿಸುವ ಬಗ್ಗೆ ಚಿಂತಿಸುತ್ತಿದ್ದೇನೆ. ಇದರಿಂದ ಜನರಿಗೂ ಹಿತಾನುಭವವಾಗುತ್ತದೆʼ ಎಂದು ಹೇಳಿದ್ದಾರೆ.

ಮುಂದುವರಿದು, ʼಮಂತ್ರಿಗಳು ಸಾಗುವ ಸಂದರ್ಭದಲ್ಲಿ ರಕ್ಷಣಾ ವಾಹನಗಳು ಭಾರಿ ಶಬ್ದದೊಂದಿಗೆ ಸೈರನ್‌ ಮಾಡುತ್ತವೆ. ಇದರಿಂದ ಅತ್ಯಂತ ಕಿರಿಕಿರಿಯಾಗುತ್ತದೆ. ಇದು ಕಿವಿಗಳಿಗೂ ಹಾನಿಕರʼ ಎಂದಿದ್ದಾರೆ.

ʼಈ ಬಗ್ಗೆ ಅಧ್ಯಯನ ನಡೆಸುತ್ತಿದ್ದೇನೆ ಮತ್ತು ಎಲ್ಲ ವಾಹನಗಳ ಹಾರ್ನ್‌ಗಳು ಭಾರತೀಯ ಸಂಗೀತ ವಾದ್ಯಗಳ ನಾದದಂತಿರುವಂತೆ ಮಾಡಲು ಶೀಘ್ರದಲ್ಲೇ ಕಾನೂನು ರೂಪಿಸುವ ಯೋಜನೆಯಲ್ಲಿದ್ದೇವೆ. ಕೊಳಲು, ತಬಲ, ಪಿಟೀಲು, ಹಾರ್ಮೋನಿಯಂ ಶಬ್ದ ಕೇಳಲು ಹಿತವಾಗಿರುತ್ತದೆʼ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT