ಪರ್ಯಾಯ ನಾಯಕತ್ವದ ಬಗ್ಗೆ ಬುಧವಾರ ನಡೆದ ಟಿಎಂಸಿ ರಹಸ್ಯ ಸಭೆಯಲ್ಲಿ ಹಿರಿಯ ಮುಖಂಡರು ಚರ್ಚಿಸಿದ್ದಾರೆ ಎಂದು ಲೇಖನದಲ್ಲಿ ತಿಳಿಸಲಾದೆ. ಸಂಸದ ಸುದೀಪ್ ಬಂಡೋಪಾಧ್ಯಾಯ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಸಾಕಷ್ಟು ಅವಕಾಶಗಳು ಇದ್ದರೂ ಪ್ರಬಲ ವಿರೋಧ ಪಕ್ಷದ ನಾಯಕನಾಗಿ, ಮೋದಿಗೆ ಪರ್ಯಾಯವಾಗಿ ಬೆಳೆಯಲು ಸಾಧ್ಯವಾಗಿಲ್ಲ. ತೃಣಮೂಲ ಕಾಂಗ್ರೆಸ್ ಮಮತಾರನ್ನು ಮೋದಿಯ ಪರ್ಯಾಯ ನಾಯಕಿಯನ್ನಾಗಿ ಪ್ರಸ್ತುತ ಪಡಿಸಲು ಆರಂಭಿಸಲಿದೆ' ಎಂದಿರುವುದಾಗಿ ಲೇಖನದಲ್ಲಿ ಉಲ್ಲೇಖಿಸಿದೆ.