ಇಂದೋರ್: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಆರಂಭಿಸಿದ ‘ಏಕ್ ಪೇಡ್ ಮಾ ಕೆ ನಾಮ್' (ತಾಯಿಯ ಹೆಸರಿನಲ್ಲಿ ಒಂದು ಮರ) ಅಭಿಯಾನವು ಹವಾಮಾನ ಬದಲಾವಣೆಯ ಸವಾಲುಗಳಿಗೆ ಸೂಕ್ತ ಉತ್ತರವಾಗಿದೆ ಎಂದು ಭಾನುವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.

‘ಏಕ್ ಪೆಡ್ ಮಾ ಕೆ ನಾಮ್’ ಅಭಿಯಾನದ ಭಾಗವಾಗಿ, ಮಧ್ಯಪ್ರದೇಶದ ಇಂದೋರ್‌ನಲ್ಲಿ ಒಂದೇ ದಿನ 11 ಲಕ್ಷ ಸಸಿಗಳನ್ನು ನೆಡುವ ಮೂಲಕ ವಿಶ್ವದಾಖಲೆ ನಿರ್ಮಿಸುವ ಗುರಿಯ ಕಾರ್ಯಕ್ರಮದಲ್ಲಿ ಶಾ ಅವರು ಪಾಲ್ಗೊಂಡರು.

‘ಪರಿಸರ ಸಂರಕ್ಷಣೆ ಮೋದಿ ಸರ್ಕಾರದ ದೊಡ್ಡ ಆದ್ಯತೆಗಳಲ್ಲಿ ಒಂದಾಗಿದೆ, ಇದು ಸಸಿಗಳನ್ನು ನೆಡುವುದು ಸಾರ್ವಜನಿಕ ಜಾಗೃತಿಯ ವಿಷಯವನ್ನಾಗಿ ಮಾಡಿದೆ. ಪರಿಸರ ಕಾಳಜಿ ದೇಶಕ್ಕೆ ಮಾತ್ರವಲ್ಲ, ಕಾರ್ಬನ್ ಡೈಆಕ್ಸೈಡ್ ಮತ್ತು ಮಾನಾಕ್ಸೈಡ್‌ಗಳಿಂದ ಓಝೋನ್ ಪದರದ ರಕ್ಷಣೆಗೂ ಮುಖ್ಯವಾಗಿದೆ’ ಎಂದು ಶಾ ಹೇಳಿದರು.

ಜೂನ್ 5ರಂದು ವಿಶ್ವ ಪರಿಸರ ದಿನದಂದು ಮೋದಿ ಅವರು ‘ಏಕ್ ಪೇಡ್ ಮಾ ಕೆ ನಾಮ್’ ಅಭಿಯಾನ ಪ್ರಾರಂಭಿಸಿದರು. ಇದರ ಅಡಿಯಲ್ಲಿ ಮಧ್ಯಪ್ರದೇಶದಲ್ಲಿ 5.5 ಕೋಟಿ ಸೇರಿದಂತೆ ದೇಶದಾದ್ಯಂತ ಸುಮಾರು 140 ಕೋಟಿ ಮರಗಳನ್ನು ನೆಡಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.