ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ ವಂಚಿಸಿದ ಪ್ರಕರಣದ (ಪಿಎನ್ಬಿ ವಂಚನೆ ಪ್ರಕರಣ) ಆರೋಪಿ ವಜ್ರ ವ್ಯಾಪಾರಿ ಮೆಹುಲ್ ಚೋಕ್ಸಿ ಆರೋಗ್ಯ ಸಮಸ್ಯೆಯಿಂದ ಭಾರತಕ್ಕೆ ಬರಲು ಅಸಾಧ್ಯವಾಗುತ್ತದೆ ಎಂದು ಮತ್ತೆ ಹೇಳಿದ್ದಾರೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ ₹11,344 ಕೋಟಿ ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನೀರವ್ ಮೋದಿ–ಮೆಹುಲ್ ಚೋಕ್ಸಿ ಇಬ್ಬರು ತನಿಖೆಗೆ ಹಾಜರಾಗಬೇಕು ಎಂದು ಸಿಬಿಐ ತಾಕೀತು ಮಾಡಿತ್ತು.

ವಿಶೇಷವೆಂದರೆ 2023 ರಲ್ಲಿ ಅವರು ತನಗೆ ಹೃದಯ ಖಾಯಿಲೆ ಇದೆ, ಮಾನಸಿಕ ಆರೋಗ್ಯ ಸಮಸ್ಯೆ ಇದೆ ಎಂದು ಹೇಳಿದ್ದರು. ಆದರೆ, ಇದೀಗ ತನಗೆ ರಕ್ತದ ಕ್ಯಾನ್ಸರ್ ಇದೆ ಎಂದು ಹೇಳಿದ್ದಾರೆ.

ತನಿಖೆಗೆ ಹಾಜರಾಗುವಂತೆ ಸಿಬಿಐ ತಾಕೀತು ಮಾಡಿದ್ದರ ಬಗೆಗಿನ ಆದೇಶವನ್ನು ಪ್ರಶ್ನಿಸಿ ಮುಂಬೈ ನ್ಯಾಯಾಲವೊಂದಕ್ಕೆ ತನ್ನ ವಕೀಲರ ಮೂಲಕ ಸಲ್ಲಿಸಿದ್ದ ಅರ್ಜಿಯಲ್ಲಿ ಚೋಕ್ಸಿ ಈ ರೀತಿ ಹೇಳಿದ್ದಾನೆ ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.

ಸದ್ಯ ಮೆಹುಲ್ ಚೋಕ್ಸಿ ಬೆಲ್ಜಿಯಂ ದೇಶದಲ್ಲಿದ್ದಾರೆ ಎಂದು ಹೇಳಲಾಗಿದೆ.

ಸರ್ಕಾರ ನನ್ನ ಪಾಸ್ಪೋರ್ಟ್ನ್ನು ರದ್ದುಗೊಳಿಸಿದೆ. ಇದಕ್ಕೆ ಮುಂಬೈ ಆರ್ಪಿಒ ಕಚೇರಿಯನ್ನು ಕೇಳಿದರೆ ಸಮರ್ಪಕವಾದ ವಿವರಣೆ ನೀಡುತ್ತಿಲ್ಲ. ನನ್ನ ಪಾಸ್ಪೋರ್ಟ್ನ್ನು ಯಾಕೆ ರದ್ದುಗೊಳಿಸಲಾಗಿದೆ. ಹೇಗೆ ನನಗೆ ಭಾರತದಲ್ಲಿ ಭದ್ರತೆ ದೊರೆಯುತ್ತದೆ’ ಎಂದು ಚೋಕ್ಸಿ ಈ ಹಿಂದೆ ಪ್ರಶ್ನಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.