ನವದೆಹಲಿ: ಭಾರತದಲ್ಲಿ 2017 ಹಾಗೂ 2022ರ ನಡುವೆ ಪೋಕ್ಸೊ ಕಾಯ್ದೆಯಡಿ ದಾಖಲಾದ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಅಪರಾಧ ಪ್ರಕರಣಗಳ ಸಂಖ್ಯೆ ಶೇ 94ರಷ್ಟು ಏರಿಕೆಯಾಗಿದೆ ಎಂದು ‘ಇನ್ಟು ದಿ ಲೈಟ್ ಇಂಡೆಕ್ಸ್ 2025’ರ ಸಂಶೋಧನಾ ವರದಿ ಹೇಳಿದೆ.

ಎಡಿನ್ಬರ್ಗ್ ವಿಶ್ವವಿದ್ಯಾಲಯ ಮತ್ತು ನ್ಯೂ ಸೌತ್ ವೇಲ್ಸ್ ವಿಶ್ವವಿದ್ಯಾಲಯವು ಆಯೋಜಿಸಿರುವ, ಚೈಲ್ಡ್ಲೈಟ್ ಗ್ಲೋಬಲ್ ಚೈಲ್ಡ್ ಸೇಫ್ಟಿ ಇನ್ಸ್ಟಿಟ್ಯೂಟ್ ಈ ವಾರ ಬಿಡುಗಡೆ ಮಾಡಿದ ಸಂಶೋಧನಾ ವರದಿಯಲ್ಲಿ ಈ ವಿವರಗಳು ಬಹಿರಂಗಗೊಂಡಿವೆ.

ಈ ವರದಿ ಪ್ರಕಾರ, ಅಪರಾಧ ಪ್ರಕರಣಗಳ ಸಂಖ್ಯೆ 33,210ರಿಂದ 64,469ಕ್ಕೆ ಹೆಚ್ಚಾಗಿದೆ. ಇದರ ಹೊರತಾಗಿಯೂ ಕಾನೂನು ಕ್ರಮ ಜರುಗಿಸುವ ಪ್ರಮಾಣವು ಶೇ 90ಕ್ಕಿಂತ ಹೆಚ್ಚಿದೆ. ಇದು ಕಾಯ್ದೆಯ ಪರಿಣಾಮಕಾರಿ ಜಾರಿ ಮತ್ತು ಪ್ರಕರಣಗಳ ವರದಿ ಮಾಡುವ ಕಾರ್ಯವಿಧಾನಗಳನ್ನು ಸೂಚಿಸುತ್ತದೆ ಎಂದು ಹೇಳಿದೆ.

ಭಾರತದಲ್ಲಿ ಮಕ್ಕಳ ಲೈಂಗಿಕ ಶೋಷಣೆ ಮತ್ತು ನಿಂದನೆ ಕುರಿತು ಹೆಚ್ಚಿನ ದತ್ತಾಂಶ ಲಭ್ಯವಿದೆ. ಅಪರಾಧಗಳ ಅಂಕಿ– ಅಂಶಗಳಲ್ಲಿನ ಪಾರದರ್ಶಕತೆಯು ಹೆಚ್ಚು ಪರಿಣಾಮಕಾರಿ ಮೇಲ್ವಿಚಾರಣೆ ಮತ್ತು ತ್ವರಿತಗತಿಯ ಕ್ರಮಕ್ಕೆ ಅವಕಾಶ ಮಾಡಿಕೊಡುತ್ತದೆ.

ಎಂಟು ಮಕ್ಕಳ ಪೈಕಿ ಒಬ್ಬರು (ಶೇ 12.5) 18 ವರ್ಷ ತುಂಬುವ ಮೊದಲೇ ಲೈಂಗಿಕ ದೌರ್ಜನ್ಯ ಅಥವಾ ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ ಎಂಬುದನ್ನು ಭಾರತ, ನೇಪಾಳ ಮತ್ತು ಶ್ರೀಲಂಕಾದಲ್ಲಿ ನಡೆಸಿದ ಸಮೀಕ್ಷೆಯ ದತ್ತಾಂಶವು ತೋರಿಸುತ್ತದೆ. ಈ ಮೂರು ದೇಶಗಳಲ್ಲಿ ಸುಮಾರು 5.4 ಕೋಟಿ ಮಕ್ಕಳು ಇದ್ದಾರೆ.

‘2024ರಲ್ಲಿ ದಕ್ಷಿಣ ಏಷ್ಯಾ ರಾಷ್ಟ್ರಗಳ ಪೈಕಿ ಭಾರತ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ (ಸಿಎಸ್ಎಎಂ) ಬಹುಪಾಲು ಪ್ರಕರಣಗಳು ವರದಿಯಾಗಿವೆ. ಆದರೂ, ಭಾರತವು ಅತ್ಯಂತ ಕಡಿಮೆ ಸಿಎಸ್ಎಎಂ ಲಭ್ಯತೆಯ ಅನುಪಾತ ಹೊಂದಿದೆ (ಪ್ರತಿ 10 ಸಾವಿರ ಜನರಿಗೆ 15 ವರದಿಗಳು). ಇದು ಪರಿಣಾಮಕಾರಿಯಾದ ಪತ್ತೆ ಕಾರ್ಯ ಮತ್ತು ವರದಿ ಮಾಡುವ ವ್ಯವಸ್ಥೆಗಳನ್ನು ಸೂಚಿಸುತ್ತದೆ’ ಎಂದು ವರದಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.