ಪುಣೆ: ಮಹಾರಾಷ್ಟ್ರದ ಪುಣೆಗೆ ಗುರುವಾರ ಭೇಟಿ ನೀಡಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಸೋಲಾಪುರ ವಿಮಾನ ನಿಲ್ದಾಣ ಉದ್ಘಾಟನೆ ಸೇರಿದಂತೆ ಒಟ್ಟು ₹22,600 ಕೋಟಿ ವೆಚ್ಚದ ವಿವಿಧ ಯೋಜನೆಗಳಿಗೆ ಚಾಲನೆ ಹಾಗೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಪುಣೆಯ ಜಿಲ್ಲಾ ನ್ಯಾಯಾಲಯದಿಂದ ಸ್ವರ್ಗೇಟ್‌ವರೆಗೆ ಮೆಟ್ರೊ ರೈಲು ಯೋಜನೆಗೆ ಚಾಲನೆ ನೀಡಲಿರುವ ಪ್ರಧಾನಿ ಮೋದಿ, ಇದರೊಂದಿಗೆ ಸ್ವರ್ಗೇಟ್ – ಕತ್ರಾಜ್ ನಡುವಿನ ಮೆಟ್ರೊ ಮಾರ್ಗ ವಿಸ್ತರಣೆ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಅಲ್ಲದೇ ಭಿಡೆವಾಡದಲ್ಲಿ ಕ್ರಾಂತಿಜ್ಯೋತಿ ಸಾವಿತ್ರಿಬಾಯಿ ಫುಲೆ ಅವರ ಸ್ಮರಣಾರ್ಥ ನಿರ್ಮಾಣವಾಗಲಿರುವ ಬಾಲಕಿಯರ ಶಾಲೆಗೆ ಶಂಕುಸ್ಥಾಪನೆ, ಸೋಲಾಪುರ ವಿಮಾನ ನಿಲ್ದಾಣ, ಹವಾಮಾನ ಮತ್ತು ಅದರ ಸಂಶೋಧನೆಗೆ ಅನುಗುಣವಾಗಿ ಹೈ ಪರ್ಫಾಮೆನ್ಸ್ ಕಂಪ್ಯೂಟಿಂಗ್ (ಎಚ್‌ಪಿಸಿ) ವ್ಯವಸ್ಥೆಯನ್ನೂ ಅವರು ಉದ್ಘಾಟಿಸಲಿದ್ದಾರೆ.