ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಸಾರ ಭಾರತಿ: ಸುದ್ದಿ ಹಂಚಿಕೆ ಸೇವೆಗೆ ಚಾಲನೆ

Published 13 ಮಾರ್ಚ್ 2024, 16:09 IST
Last Updated 13 ಮಾರ್ಚ್ 2024, 16:09 IST
ಅಕ್ಷರ ಗಾತ್ರ

ನವದೆಹಲಿ: ಸುದ್ದಿ ಸಂಸ್ಥೆಗಳಿಗೆ ಸುದ್ದಿ, ಸ್ಪಷ್ಟವಾದ ವಿಡಿಯೊ ಹಾಗೂ ಚಿತ್ರಗಳನ್ನು ಹಂಚಿಕೊಳ್ಳುವ ಪ್ರಸಾರ ಭಾರತಿಯ ಪಿಬಿ– ಶಬ್ದ್‌ ಯೋಜನೆಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್‌ ಠಾಕೂರ್‌ ಅವರು ಬುಧವಾರ ಚಾಲನೆ ನೀಡಿದರು.

ಪಿವಿ– ಶಬ್ದ್‌ (ಪ್ರಸಾರ ಭಾರತಿ– ಶೇರ್‌ಡ್‌ ಆಡಿಯೊ ವಿಜ್ಯವಲ್ಸ್‌ ಫಾರ್‌ ಬ್ರಾಡ್‌ಕಾಸ್ಟ್‌ ಅ್ಯಂಡ್‌ ಡಿಸ್‌ಎಮಿನೇಷನ್‌) ಯೋಜನೆಯಡಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯದೊಂದಿಗೆ ನೋಂದಣಿ ಮಾಡಿಕೊಂಡ ಸುದ್ದಿ ಸಂಸ್ಥೆಗಳಿಗೆ ಒಂದು ವರ್ಷದವರೆಗೆ ಉಚಿತ ಸೇವೆಯನ್ನು ಒದಗಿಸಲಾಗುವುದು.‌

‘ಸುಮಾರು 50 ವಿಭಾಗಗಳಲ್ಲಿ ಭಾರತದ ಎಲ್ಲ ಪ್ರಮುಖ ಭಾಷೆಗಳಲ್ಲಿ ಸುದ್ದಿಗಳನ್ನು ಸುದ್ದಿಸಂಸ್ಥೆಗಳಿಗೆ ಒದಗಿಸಲಾಗುವುದು. ‘ಪಿಬಿ– ಶಬ್ದ್‌’ ಮೂಲಕ ಒದಗಿಸುವ ಯಾವುದೇ ವಿಡಿಯೊಗಳಿಗೆ ದೂರದರ್ಶನದ ಲಾಂಛನ ಬಳಸುವ ಅಗತ್ಯವಿಲ್ಲ’ ಎಂದರು.‌

ಇದೇ ಸಂದರ್ಭ, ಅನುರಾಗ್‌ ಅವರು ಡಿಡಿ ನ್ಯೂಸ್‌ ಮತ್ತು ಆಕಾಶವಾಣಿ ನ್ಯೂಸ್‌ನ ನವೀಕೃತ ವೆಬ್‌ಸೈಟ್‌ಗಳಿಗೆ ಚಾಲನೆ ನೀಡಿ, ನ್ಯೂಸ್‌ಆನ್‌ಏರ್‌ಮೊಬೈಲ್‌ ಆ್ಯಪ್‌ನ ನೂತನ ವಿನ್ಯಾಸವನ್ನು ಅನಾವರಣಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT