ಮುಂಬೈ: ‘ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನಮ್ಮ ಪ್ರಧಾನಿಯನ್ನೂ ಅಪಹರಿಸುವರೇ?’ ಎಂದು ಕಾಂಗ್ರೆಸ್ ನಾಯಕ, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್ ಅವರು ಪ್ರಶ್ನಿಸಿದ್ದು, ಇದೀಗ ವಿವಾದಕ್ಕೀಡಾಗಿದೆ.

ವೆನೆಜುವೆಲಾ –ಅಮೆರಿಕ ಸಂಘರ್ಷದ ಕುರಿತು ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿರುವ ನಡುವೆಯೇ ಭಾರತ ಮತ್ತು ಅಮೆರಿಕದ ನಡುವೆ ಸುಂಕದ ವಿಚಾರವಾಗಿ ನಡೆಯುತ್ತಿರುವ ಸಮರದ ಬಗ್ಗೆ ಪೃಥ್ವಿರಾಜ್ ಮಾತನಾಡಿದ್ದಾರೆ.

‘ಶೇಕಡ 50ರ ಸುಂಕ ನೀತಿಯಿಂದಾಗಿ ಭಾರತ–ಅಮೆರಿಕ ನಡುವಿನ ವ್ಯಾಪಾರ ಸಂಬಂಧ ಸ್ಥಗಿತಗೊಳ್ಳಬಹುದು. ನೇರವಾಗಿ ವ್ಯಾಪಾರ–ವಹಿವಾಟು ನಿರ್ಬಂಧಿಸಲಾಗದ ಕಾರಣಕ್ಕೆ ಸುಂಕವನ್ನು ಅಸ್ತ್ರವನ್ನಾಗಿ ಬಳಸಲಾಗುತ್ತಿದೆ’ ಎಂದು ಪೃಥ್ವಿರಾಜ್ ಆರೋಪಿಸಿದ್ದಾರೆ.

ಇದೇ ವೇಳೆ, ‘ನಾವು ಬೇರೆ ಮಾರುಕಟ್ಟೆಗಳನ್ನು ನೋಡಿಕೊಳ್ಳಬೇಕಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಪ್ರಯತ್ನಗಳು ಈಗಾಗಲೇ ಪ್ರಗತಿಯಲ್ಲಿವೆ. ಈಗ ಉಳಿದಿರುವುದು ಮುಂದೇನು? ಎನ್ನುವ ಪ್ರಶ್ನೆ ಮಾತ್ರ. ಈಗ ವೆನೆಜುವೆಲಾದಲ್ಲಿ ಏನಾಗಿದೆಯೋ? ಅದು ಭಾರತದಲ್ಲೂ ಆಗಲಿದೆಯೇ ? ಟ್ರಂಪ್ ಸಾಹೇಬರು ನಮ್ಮ ಪ್ರಧಾನಿಯನ್ನೂ ಅಪಹರಿಸಲಿದ್ದಾರೆಯೇ?’ ಎಂದು ಪೃಥ್ವಿರಾಜ್ ಹೇಳಿದ್ದಾರೆ.

ಅವರ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ಬಿಜೆಪಿ ನಾಯಕರೂ ಪೃಥ್ವಿರಾಜ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.