ಶ್ರೀನಗರ: ಶ್ರೀನಗರದ ಹಜರತ್ಬಲ್ ಮಸೀದಿಯ ನೂತನ ಕಟ್ಟಡದ ಅಡಿಗಲ್ಲಿನ ಮೇಲೆ ಅಶೋಕ ಲಾಂಛನವನ್ನು ಕೆತ್ತಿರುವುದು ವಿವಾದಕ್ಕೆ ಕಾರಣವಾಗಿದೆ.

ಇಲ್ಲಿನ ಮುಸ್ಲಿಮರು ಶುಕ್ರವಾರ–ಕಾಶ್ಮೀರ ವಕ್ಫ್ ಬೋರ್ಡ್ ವಿರುದ್ಧ ಪ್ರತಿಭಟನೆ ನಡೆಸಿದರು. ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಅಶೋಕ ಲಾಂಛನವನ್ನು ಹೊಂದಿದ್ದ ಅಡಿಪಾಯದ ಹಲಗೆಯನ್ನು ಪ್ರತಿಭಟನಕಾರರು ಕಿತ್ತುಹಾಕಿದರು.

ವಕ್ಫ್ ಬೋರ್ಡ್ ಅಧ್ಯಕ್ಷ , ಬಿಜೆಪಿಯ ಮಾಜಿ ನಾಯಕ ದಾರಾಕ್ಷನ್ ಅಂದ್ರಾಬಿ ಮತ್ತು ಇತರರು ಮುಸ್ಲಿಂ ಧಾರ್ಮಿಕ ಭಾವನೆಗೆ ಗಾಸಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಇದು ಮುಸ್ಲಿಂ ಆಚರಣೆಗಳ ಸ್ಪಷ್ಟ ಉಲ್ಲಂಘನೆಯಾಗಿದೆ, ಅಧಿಕಾರಿಗಳು ಹೊಣೆ ಹೊರಬೇಕು ಎಂದು ಆಗ್ರಹಿಸಿದ್ದಾರೆ.

ಪ್ರತಿಭಟನೆಯನ್ನು ಖಂಡಿಸಿದ ಅಂದ್ರಾಬಿ ಅವರು, ಇದು ಭಯೋತ್ಪಾದಕ ಕೃತ್ಯವಾಗಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.