ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Pune Car Crash| ಕೆಟ್ಟ ಸಹವಾಸದಿಂದ ದೂರ: ತಾತನ ವಾಗ್ದಾನ ಬಳಿಕ ಬಾಲಕನಿಗೆ ಜಾಮೀನು

Published 22 ಮೇ 2024, 6:16 IST
Last Updated 22 ಮೇ 2024, 6:16 IST
ಅಕ್ಷರ ಗಾತ್ರ

ಪುಣೆ: ಮದ್ಯದ ನಶೆಯಲ್ಲಿ ವಿಲಾಸಿ 'ಪೋಶೆ' ಕಾರು ಚಾಲನೆ ಮಾಡಿ ಇಬ್ಬರು ಟೆಕಿಗಳ ಸಾವಿಗೆ ಕಾರಣವಾದ ಪ್ರಕರಣದಲ್ಲಿ 17ರ ಬಾಲಕನಿಗೆ ಬಾಲ ನ್ಯಾಯ ಮಂಡಳಿ (ಜೆಜೆಬಿ) ಜಾಮೀನು ಮಂಜೂರು ಮಾಡಿದೆ.

ರಿಯಲ್ ಎಸ್ಟೇಟ್ ಡೆವಲಪರ್ ಮಗನಾದ ಬಾಲಕನನ್ನು, ಬಾಲ ನ್ಯಾಯ ಮಂಡಳಿ (ಜೆಜೆಬಿ) ಮುಂದೆ ಹಾಜರುಪಡಿಸಲಾಯಿತು. ಕೆಟ್ಟ ಸಹವಾಸದಿಂದ ಬಾಲಕನನ್ನು ದೂರವಿಡುವುದಾಗಿ ತಾತನ ವಾಗ್ದಾನ ಹಾಗೂ ₹7,500 ಶ್ಯೂರಿಟಿ ಆಧಾರದ ಮೇಲೆ ಜಾಮೀನು ನೀಡಲಾಗಿದೆ.

ಕಾನೂನು ಸಂಘರ್ಷದಲ್ಲಿ ಸಿಲುಕಿದ ಬಾಲಕನನ್ನು (ಸಿಸಿಎಲ್) ಕೆಟ್ಟ ಸಹವಾಸದಿಂದ ದೂರವಿಡುವುದಾಗಿ ಬಾಲಕನ ತಾತ ವಾಗ್ದಾನ ನೀಡಿದ್ದಾರೆ. ಅಧ್ಯಯನ ಅಥವಾ ವೃತ್ತಿಜೀವನಕ್ಕೆ ಉಪಯುಕ್ತವಾದ ಯಾವುದೇ ವೃತ್ತಿಪರ ಕೋರ್ಸ್‌ನತ್ತ ಬಾಲಕ ಗಮನ ಹರಿಸುತ್ತಾನೆ. ತನಗೆ ವಿಧಿಸಿರುವ ಷರತ್ತನ್ನು ಪಾಲಿಸಲು ಬಾಲಕ ಸಿದ್ಧನಾಗಿದ್ದಾನೆ. ಹಾಗಾಗಿ ಕಾನೂನು ಸಂಘರ್ಷದಲ್ಲಿ ಸಿಲುಕಿದ ಮಗುವಿಗೆ ಜಾಮೀನು ಮಂಜೂರು ಮಾಡುವುದು ನ್ಯಾಯಸಮ್ಮತವಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಮಹಾರಾಷ್ಟ್ರದ ಪುಣೆ ನಗರದ ಕಲ್ಯಾಣಿನಗರ ಪ್ರದೇಶದಲ್ಲಿ ಭಾನುವಾರ ನಸುಕಿನಲ್ಲಿ ಪಾನಮತ್ತ 17ರ ಹರೆಯದ ಬಾಲಕ ಪೋಶೆ ಕಾರು ಚಲಾಯಿಸುತ್ತಿದ್ದಾಗ ಅದು ಬೈಕಿಗೆ ಡಿಕ್ಕಿ ಹೊಡೆದಿತ್ತು. ಬೈಕಿನಲ್ಲಿ ಪ್ರಯಾಣಿಸುತ್ತಿದ್ದ ಮಧ್ಯಪ್ರದೇಶದ ಸಾಫ್ಟ್‌ವೇರ್‌ ತಂತ್ರಜ್ಞರಾದ 24 ವರ್ಷ ವಯಸ್ಸಿನ ಅನಿಸ್ ಅವಾಧಿಯ, ಅಶ್ವಿನಿ ಕಾಸ್ಟಾ ಮೃತಪಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT