ಪುಣೆ: ಜಿಲ್ಲಾ ಪಂಚಾಯಿತಿ (ZP) ಮಾಜಿ ಸದಸ್ಯನೊಬ್ಬನ ಜನ್ಮದಿನದ ಆಚರಣೆಗೆ ಡಿ.ಜೆ ಸಮೇತ ವಾಹನ ತೆಗೆದುಕೊಂಡು ಹೋಗುವ ವೇಳೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಒಬ್ಬ ಮೃತಪಟ್ಟು ಆರು ಜನ ಗಾಯಗೊಂಡಿರುವ ಘಟನೆ ಪುಣೆ ಜಿಲ್ಲೆಯ ಜನ್ನೂರಿನಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.

ಮೃತನನ್ನು ಆದಿತ್ಯಾ ಕಾಳೆ ಎಂದು ಗುರುತಿಸಲಾಗಿದ್ದು, ಉಳಿದ ಆರು ಜನ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಜನ್ನೂರು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ದೇವರಾಮ್ ಲಂಡೆ, ಆತನ ಮಗ ರವಿ ಹಾಗೂ ವಾಹನ ಚಾಲಕ ಸೇರಿದಂತೆ ಇನ್ನಿಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದೇವರಾಮ್ ಅವರ ಮಗನ ನೇತೃತ್ವದಲ್ಲಿ ಪುಣೆಯಿಂದ ಡಿ.ಜೆ ವಾಹನ ತೆಗೆದುಕೊಂಡು ಜನ್ನೂರಿಗೆ ಬರುವಾಗ ತನ್ನ ಬೆಂಬಲಿಗರೊಂದಿಗೆ ರಸ್ತೆಯಲ್ಲಿಯೇ ಸಂಗೀತ ಹಾಕಿ ಜನದಟ್ಟಣೆ ಮಾಡಿದ್ದಾನೆ. ಡಿ.ಜೆ ಹುಚ್ಚಿಗೆ ಕೆಲ ಯುವಕರು ಕುಣಿಯುತ್ತಿದ್ದ ವೇಳೆ ಡಿ.ಜೆ ಅಳವಡಿಸಿದ್ದ ವಾಹನವನ್ನು ನಿರ್ಲಕ್ಷ್ಯತನದಿಂದ ಚಲಾಯಿಸಿ ಅಪಘಾತವನ್ನುಂಟು ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಈ ಕುರಿತು ಜನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
.ಧಾರವಾಡ | ಗಣೇಶ ವಿಸರ್ಜನೆ ವೇಳೆ ಡಿ.ಜೆ ವಿಚಾರಕ್ಕೆ ಗಲಾಟೆ: ಲಾಠಿ ಬೀಸಿದ ಪೊಲೀಸರು.13 ವರ್ಷದಿಂದ ಒಂದೇ ಮೂರ್ತಿ ಪ್ರತಿಷ್ಠಾಪನೆ: ಪಟಾಕಿ ಸಿಡಿಸಲ್ಲ, ಡಿ.ಜೆ ಬಳಸಲ್ಲ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.