ಹೈದರಾಬಾದ್: ಮಾಜಿ ಪ್ರಧಾನಮಂತ್ರಿ ಪಿ.ವಿ ನರಸಿಂಹ ರಾವ್ ಅವರ ಪುತ್ರಿ, ಟಿಆರ್‌ಎಸ್ ಅಭ್ಯರ್ಥಿ ಎಸ್ ವಾಣಿ ದೇವಿ ಅವರು ಮೆಹಬೂಬನಗರ-ರಂಗಾರೆಡ್ಡಿ-ಹೈದರಾಬಾದ್ ಪದವೀದರರ ಕ್ಷೇತ್ರದಿಂದ ಶನಿವಾರ ಚುನಾಯಿತರಾಗಿದ್ದಾರೆ.
ತಮ್ಮ ಸಮೀಪ ಸ್ಪರ್ಧಿ ವಿಧಾನಪರಿಷತ್‌ನ ಹಾಲಿ ಸದಸ್ಯ, ಬಿಜೆಪಿಯ ಎನ್ ರಾಮಚಂದ್ರ ರಾವ್ ಅವರನ್ನು ಪಿವಿಎನ್ ಪುತ್ರಿ ವಾಣಿ ಅವರು ಮಣಿಸಿದ್ದಾರೆ. ಚುನಾವಣೆಯಲ್ಲಿ ಗೆದ್ದ ವಾಣಿ ಅವರು ಶನಿವಾರ ರಾತ್ರಿ ಚುನಾವಣಾ ಅಧಿಕಾರಿಯಿಂದ ಮಾನ್ಯತೆ ಪತ್ರ ಸ್ವೀಕರಿಸಿದರು.
ಮೆಹಬೂಬನಗರ-ರಂಗಾರೆಡ್ಡಿ-ಹೈದರಾಬಾದ್ ಮತ್ತು ವಾರಂಗಲ್-ಕಮ್ಮಮ್-ನಲ್ಗೊಂಡಾ ಪದವೀದರ ಕ್ಷೇತ್ರಗಳಿಗೆ ಮಾರ್ಚ್ 14ರಂದು ಮತದಾನ ನಡೆದಿತ್ತು. ಶನಿವಾರ ಫಲಿತಾಂಶ ಪ್ರಕಟವಾಗಿದೆ. ವಾರಂಗಲ್-ಕಮ್ಮಮ್-ನಲ್ಗೊಂಡಾ ಕ್ಷೇತ್ರದಲ್ಲೂ ಟಿಆರ್‌ಎಸ್ ಅಭ್ಯರ್ಥಿ ರಾಜೇಶ್ವರ್ ರೆಡ್ಡಿ ಮುನ್ನಡೆ ಸಾಧಿಸಿದ್ದಾರೆ.