ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ಮೋದಿ ಟೆಂಪೊ ಬಿಲಿಯನೆರ್‌ಗಳ ಕೈಗೊಂಬೆ: ರಾಹುಲ್ ಗಾಂಧಿ

Published 11 ಮೇ 2024, 12:26 IST
Last Updated 11 ಮೇ 2024, 12:26 IST
ಅಕ್ಷರ ಗಾತ್ರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಟೆಂಪೊ ಬಿಲಿಯನೆರ್‌ಗಳ ಕೈಗೊಂಬೆ ಚಕ್ರವರ್ತಿ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಶನಿವಾರ ವಾಗ್ದಾಳಿ ನಡೆಸಿದ್ದಾರೆ.

ಅದಾನಿ ಹಾಗೂ ಅಂಬಾನಿಗಳಿಂದ ನಗದು ತುಂಬಿದ ಟೆಂಪೊಗಳು ಕಾಂಗ್ರೆಸ್‌ಗೆ ಸಂದಿವೆ ಎನ್ನುವ ಮೋದಿ ಹೇಳಿಕೆಗೆ ವಿರುದ್ಧವಾಗಿ ತಾವು ಉತ್ತರ ಪ್ರದೇಶದ ಲಖನೌನಲ್ಲಿ ಚುನಾವಣಾ ಸಭೆಯಲ್ಲಿ ಮಾಡಿದ ಭಾಷಣದ ತುಣುಕನ್ನು ಪೋಸ್ಟ್ ಮಾಡಿರುವ ಅವರು, ಹೀಗೆ ಬರೆದುಕೊಂಡಿದ್ದಾರೆ.

‘ನರೇಂದ್ರ ಮೋದಿಯವರು ಪ್ರಧಾನಿಯಲ್ಲ. ಅವರು ಚಕ್ರವರ್ತಿ. ಸಚಿವ ಸಂಪುಟ, ಸಂಸತ್‌ ಹಾಗೂ ಸಂವಿಧಾನಕ್ಕೂ ಅವರಿಗೂ ಯಾವುದೇ ಸಂಬಂಧವಿಲ್ಲ. ಅವರು 21ನೇ ಶತಮಾನದ ಚಕ್ರವರ್ತಿ. ಎರಡ್ಮೂರು ಶ್ರೀಮಂತರಿಗಷ್ಟೇ ನಿಜವಾದ ಶಕ್ತಿ ಇದೆ’ ಎಂದು ವಿಡಿಯೊದಲ್ಲಿ ಅವರು ಹೇಳಿದ್ದಾರೆ.

ಅದಾನಿ ಹಾಗೂ ಅಂಬಾನಿ ಜೊತೆ ಕಾಂಗ್ರೆಸ್ ಒಪ್ಪಂದ ಮಾಡಿಕೊಂಡಿದೆ. ಟೆಂಪೊ ತುಂಬ ಕಪ್ಪು ಹಣ ಸಂದಾಯವಾಗಿದೆ. ಹೀಗಾಗಿ ಅವರ ವಿರುದ್ಧ ಮಾತಾನಾಡುವುನ್ನು ನಿಲ್ಲಿಸಿದ್ದಾರೆ ಎಂದು ಪ್ರಧಾನಿ ರಾಹುಲ್ ವಿರುದ್ಧ ಆರೋಪಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT