ನವದೆಹಲಿ: ಸಾಲು ಸಾಲು ಚುನಾವಣೆಗಳ ಸೋಲಿನ ಪರಿಣಾಮ ರಾಹುಲ್ ಗಾಂಧಿ, ದುಃಖ ಮತ್ತು ಹತಾಶೆಯಿಂದ ಸುಳ್ಳು ಹೇಳುತ್ತಾರೆ ಎಂದು ಕೇಂದ್ರ ಸಚಿವ ಹಾಗೂ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿದ್ದಾರೆ.

‘ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಮ್ಯಾಚ್ಫಿಕ್ಸಿಂಗ್ ಮಾಡಿಕೊಂಡಂತೆ ಬಿಹಾರದಲ್ಲಿಯೂ ನಡೆಯಲಿದೆ. ಬಿಜೆಪಿ ತಾನು ಸೋಲುವ ಎಲ್ಲ ಕಡೆಗಳಲ್ಲಿಯೂ ಇದೇ ರೀತಿ ಮ್ಯಾಚ್ಫಿಕ್ಸಿಂಗ್ ಮಾಡಿಕೊಳ್ಳುತ್ತದೆ’ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದರು.

ರಾಹುಲ್ ಅವರ ಹೇಳಿಕೆಗೆ ಬಿಜೆಪಿಯ ಜೆ.ಪಿ. ನಡ್ಡಾ ಸೇರಿದಂತೆ ಹಲವು ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ರಾಹುಲ್ ಗಾಂಧಿ ಅವಿವೇಕದಿಂದಲೇ ಕಾಂಗ್ರೆಸ್ ಚುನಾವಣೆಗಳಲ್ಲಿ ಸಾಲು ಸಾಲು ಸೋಲು ಕಾಣುತ್ತಿದೆ, ಆತ್ಮಾವಲೋಕನ ಮಾಡಿಕೊಳ್ಳುವ ಬದಲು ಅವರು ಚುನಾವಣೆಯಲ್ಲಿ ಮೋಸ ಆಗಿದೆ ಎಂದು ಹೇಳುತ್ತಾರೆ. ನಂತರ ಸುಳ್ಳುಗಳನ್ನು ಹೇಳುತ್ತಾರೆ ಎಂದು ನಡ್ಡಾ ಆರೋಪ ಮಾಡಿದ್ದಾರೆ.

ಬಿಹಾರದಲ್ಲಿ ಅವರು ಸೋಲುವುದು ಖಚಿತ. ಅದಕ್ಕಾಗಿಯೇ ಹೀಗೆ ಹೇಳುತ್ತಿದ್ದಾರೆ ಎಂದು ನಡ್ಡಾ ಹೇಳಿದ್ದಾರೆ.
.ಭಾರತದ ಅಪರಾಧದ ರಾಜಧಾನಿಯಾಗಿ ಬಿಹಾರ: ರಾಹುಲ್ ಗಾಂಧಿ ಟೀಕೆ.ರಾಹುಲ್ ಗಾಂಧಿ ಜತೆ ಒಬ್ಬನೇ ವ್ಯಕ್ತಿ ವಿದ್ಯಾರ್ಥಿ, ಕೂಲಿಯಾಗಿ ಸಂವಾದ ನಡೆಸಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.