ರಾಯ್ಬರೇಲಿ: ಆಡಳಿತರೂಢ ಬಿಜೆಪಿ ವಿರುದ್ಧದ ಮತಗಳ್ಳತನ ಆರೋಪವನ್ನು ಗುರುವಾರ ಪುನರುಚ್ಛರಿಸಿರುವ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಈಗಾಗಲೇ ಈ ಬಗ್ಗೆ ಸಾಕ್ಷ್ಯ ಒದಗಿಸಿದ್ದು, ಭವಿಷ್ಯದಲ್ಲಿ ಸ್ಫೋಟಕ ಪುರಾವೆ ಒದಗಿಸುವುದಾಗಿ ಹೇಳಿದ್ದಾರೆ.
.ಆಳಂದದಲ್ಲೂ ಮತಗಳ್ಳತನ ಯತ್ನ ನಡೆದಿತ್ತು: ಕಾಂಗ್ರೆಸ್ ಶಾಸಕ ಬಿ.ಆರ್ ಪಾಟೀಲ.
ಮತದಾರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಮಹಾರಾಷ್ಟ್ರ, ಹರಿಯಾಣ ಹಾಗೂ ಕರ್ನಾಟಕದಲ್ಲಿ ಮತಗಳ್ಳತನ ನಡೆದಿದೆ. ಈ ಬಗ್ಗೆ ನಾವು ನಿಖರ ಸಾಕ್ಷ್ಯ ಒದಗಿಸಿದ್ದೇವೆ. ಭವಿಷ್ಯದಲ್ಲಿ ನಿಖರ ಹಾಗೂ ಸ್ಫೋಟಕ ಮಾಹಿತಿ ನೀಡುತ್ತೇವೆ’ ಎಂದು ಹೇಳಿದ್ದಾರೆ.

‘ಮತಗಳ್ಳರೇ ಗದ್ದುಗೆ ಬಿಡಿ’ ಎನ್ನುವ ಘೋಷವಾಕ್ಯ ದೇಶದಾದ್ಯಂತ ಮಾರ್ದನಿಸುತ್ತಿದೆ ಎಂದು ಅವರು ಇದೇ ವೇಳೆ ಹೇಳಿದ್ದಾರೆ.
.ಎಸ್ಐಆರ್ ‘ಮತಗಳ್ಳತನ’ದ ಹೊಸ ಅಸ್ತ್ರ: ರಾಹುಲ್ ಗಾಂಧಿ ಆರೋಪ.
ಮತಗಳ್ಳತನ ಮಾಡಿ ಸರ್ಕಾರ ರಚನೆ ಮಾಡಲಾಗಿದೆ. ಇದಕ್ಕೆ ನಾವು ಸಾಕ್ಷ್ಯ ಒದಗಿಸುತ್ತೇವೆ. ಬಿಜೆಪಿ ನಾಯಕರು ಈಗ ಕ್ರೋಧಗೊಳ್ಳಬಾರದು. ಹೈಡ್ರೋಜನ್ ಬಾಂಬ್ ಬಂದಾಗ ಎಲ್ಲವೂ ಕೊಚ್ಚಿ ಹೋಗಲಿದೆ ಎಂದರು.

ತಮ್ಮ ಲೋಕಸಭಾ ಕ್ಷೇತ್ರಕ್ಕೆ ಎರಡು ದಿನಗಳ ಪ್ರವಾಸದಲ್ಲಿರುವ ರಾಹುಲ್ ಗಾಂಧಿ, ಗುರುವಾರ ದಿಶಾ ಸಭೆಯ ಅಧ್ಯಕ್ಷತೆ ವಹಿಸಿದ್ದರು.
.SIR ಕುರಿತ ಅಪಪ್ರಚಾರ, ಮತಗಳ್ಳತನ ಆರೋಪಗಳಿಗೆ ಹೆದರಲ್ಲ: CEC ಜ್ಞಾನೇಶ್ ಕುಮಾರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.