ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ‘ಭಾರತದ ಈಗಿನ ರಾಜಕೀಯದ ಮೀರ್ ಜಾಫರ್’ ಎಂದಿರುವ ಬಿಜೆಪಿ, ‘ದೇಶದ ನವಾಬ್ ಆಗಲು ಅವರು ವಿದೇಶಕ್ಕೆ ತೆರಳಿ, ಅಲ್ಲಿನ ಪಡೆಗಳ ಸಹಾಯ ಯಾಚಿಸಿದ್ದಾರೆ’ ಎಂದು ಮಂಗಳವಾರ ಆರೋಪಿಸಿದೆ.
ಭಾರತದ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಲಂಡನ್‌ನಲ್ಲಿ ಹೇಳಿರುವುದಕ್ಕೆ ರಾಹುಲ್ ಕ್ಷಮೆ ಯಾಚಿಸಬೇಕು ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಅವರು ಒತ್ತಾಯಿಸಿದ್ದಾರೆ.
‘ರಾಹುಲ್ ಅವರು ಲಂಡನ್‌ನಲ್ಲಿ ಏನು ಮಾಡಿದ್ದಾರೋ ಅದನ್ನೇ ನವಾಬ್ ಆಗಲು ಮೀರ್ ಜಾಫರ್ ಕೂಡ ಮಾಡಿದ್ದಾನೆ’ ಎಂದೂ ಹೇಳಿದ್ದಾರೆ.
‘ರಾಹುಲ್ ಅವರು ವಿದೇಶದಲ್ಲಿ ಭಾರತ ವಿರೋಧಿ ಹೇಳಿಕೆ ನೀಡುತ್ತಿರುವುದು ಇದು ಮೊದಲೇನಲ್ಲ. ಇದು ಕಾಂಗ್ರೆಸ್‌ನ ಪಿತೂರಿ’ ಎಂದೂ ಆರೋಪಿಸಿದ್ದಾರೆ. ಅವರು ಕ್ಷಮೆ ಕೋರುವಂತೆ ನಾವು ಮಾಡುತ್ತೇವೆ ಎಂದೂ ಸಂಬಿತ್ ಹೇಳಿದ್ದಾರೆ.