ನವದೆಹಲಿ: ಹಣದುಬ್ಬರದ ಪರಿಣಾಮದಿಂದ ಜನರು ದಿನೇ ದಿನೇ ಬೆಲೆ ಏರಿಕೆಯಿಂದ ತತ್ತರಿಸುತ್ತಿದ್ದರೆ, ಮೋದಿ ಸರ್ಕಾರ ತೆರಿಗೆ ಸಂಗ್ರಹದಲ್ಲಿ ನಿರತವಾಗಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಟೀಕಿಸಿದ್ದಾರೆ.

ಪೆಟ್ರೋಲ್ ಮತ್ತು ಡೀಸೆಲ್ ದರ ತೀವ್ರ ಏರಿಕೆ ಕುರಿತಂತೆ ಅವರು ಕೇಂದ್ರದ ಧೋರಣೆಯನ್ನು ತರಾಟೆಗೆ ತೆಗೆದುಕೊಂಡರು.

ಪೆಟ್ರೋಲ್ ಮತ್ತು ಡೀಸೆಲ್ ದರ ಗರಿಷ್ಠ ಹಂತ ತಲುಪಿದ ಹಿಂದೆಯೇ ವಾಗ್ದಾಳಿ ನಡೆಸಿರುವ ಅವರು, ಮೋದಿ ಸರ್ಕಾರ ‘ಜಿಡಿಪಿ’ಯಲ್ಲಿ ಅಂದರೆ ಗ್ಯಾಸ್, ಡೀಸೆಲ್, ಪೆಟ್ರೋಲ್ ದರ ಏರಿಕೆಯಲ್ಲಿ ಗಣನೀಯ ಸಾಧನೆ ಮಾಡಿದೆ ಎಂದು ಟ್ವೀಟ್ ಮಾಡಿದ್ದಾರೆ.

ಪೆಟ್ರೋಲ್ ಮತ್ತು ಡೀಸೆಲ್ ದರ ಶನಿವಾರ ಗರಿಷ್ಠ ಹಂತ ತಲುಪಿತ್ತು. ಪೆಟ್ರೋಲ್ ದೆಹಲಿಯಲ್ಲಿ ₹ 85.70 ಇದ್ದರೆ, ಮುಂಬೈನಲ್ಲಿ ₹ 92.28 ಆಗಿತ್ತು. ಡೀಸೆಲ್ ದರ ದೆಹಲಿಯಲ್ಲಿ ₹ 75.88 ಹಾಗೂ ಮುಂಬೈನಲ್ಲಿ ₹ 82.66ಕ್ಕೆ ತಲುಪಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.