ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರೈಲು ನಿಲ್ದಾಣಗಳ ಮರುನಾಮಕರಣ ಮಾಡಿದಂತೆಯೇ ಅಪಘಾತಗಳನ್ನು ತಡೆಯಿರಿ: ಅಖಿಲೇಶ್ ಯಾದವ್

Published 28 ಆಗಸ್ಟ್ 2024, 4:33 IST
Last Updated 28 ಆಗಸ್ಟ್ 2024, 4:33 IST
ಅಕ್ಷರ ಗಾತ್ರ

ಲಖನೌ: ರೈಲು ನಿಲ್ದಾಣಗಳನ್ನು ಮರುನಾಮಕರಣ ಮಾಡಿದಂತೆಯೇ ಅಪಘಾತಗಳನ್ನು ತಡೆಯಲು ಮುಂದಾಗಬೇಕು ಎಂದು ಬಿಜೆಪಿ ವಿರುದ್ಧ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವಾಗ್ದಾಳಿ ನಡೆಸಿದ್ದಾರೆ.

ಉತ್ತರ ರೈಲ್ವೆಯ ಲಖನೌ ವಿಭಾಗದ ಎಂಟು ರೈಲು ನಿಲ್ದಾಣಗಳಿಗೆ ಮಂಗಳವಾರ ಸಂತರು ಮತ್ತು ಸ್ವಾತಂತ್ರ್ಯ ಹೋರಾಟಗಾರರ ಹೆಸರನ್ನು ಅಧಿಕೃತವಾಗಿ ಮರುನಾಮಕರಣ ಮಾಡಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಅಖಿಲೇಶ್ ಯಾದವ್, ‘ರೈಲು ನಿಲ್ದಾಣಗಳ ಹೆಸರುಗಳನ್ನು ಬದಲಾಯಿಸಿ ಮರುನಾಮಕರಣ ಮಾಡುವುದರ ಜತೆಗೆ ರೈಲ್ವೆ ನಿಲ್ದಾಣಗಳ ಸ್ಥಿತಿಯನ್ನು ಸುಧಾರಿಸಲು ಮತ್ತು ರೈಲು ಅಪಘಾತಗಳನ್ನು ತಡೆಯುವತ್ತ ಗಮನ ಹರಿಸಬೇಕು’ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

‘ಕಾಸಿಂಪುರ ಹಾಲ್ಟ್ ರೈಲು ನಿಲ್ದಾಣವನ್ನು ಈಗ ‘ಜೈಸ್ ಸಿಟಿ’ ರೈಲು ನಿಲ್ದಾಣ ಎಂದು ಕರೆಯಲಾಗುತ್ತದೆ. ನಿಹಾಲ್‌ಘರ್ ನಿಲ್ದಾಣವನ್ನು ‘ಮಹಾರಾಜ ಬಿಜ್ಲಿ ಪಾಸಿ’ ರೈಲು ನಿಲ್ದಾಣ, ಅಕ್ಬರ್‌ಗಂಜ್ ನಿಲ್ದಾಣವನ್ನು ‘ಮಾ ಅಹೋರ್ವಾ ಭವಾನಿ ಧಾಮ್’, ವಾರಿಸ್‌ಗಂಜ್ ನಿಲ್ದಾಣವನ್ನು ‘ಅಮರ್ ಶಾಹಿದ್ ಭಲೇ ಸುಲ್ತಾನ್’ ಮತ್ತು ಫರ್ಸತ್‌ಗಂಜ್ ನಿಲ್ದಾಣವನ್ನು ‘ತಪೇಶ್ವರನಾಥ ಧಾಮ್’ ಎಂದು ಮರುನಾಮಕರಣ ಮಾಡಿರುವುದಾಗಿ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಸ್ಥಳೀಯ ಸಾಂಸ್ಕೃತಿಕ ಅಸ್ಮಿತೆ ಮತ್ತು ಪರಂಪರೆಯನ್ನು ಕಾಪಾಡುವಂತೆ ನಿಟ್ಟಿನಲ್ಲಿ ರೈಲು ನಿಲ್ದಾಣಗಳಿಗೆ ಮರುನಾಮಕರಣ ಮಾಡುವಂತೆ ಅಮೇಠಿಯ ಮಾಜಿ ಬಿಜೆಪಿ ಸಂಸದೆ ಸ್ಮೃತಿ ಇರಾನಿ ಅವರು ಮಾರ್ಚ್‌ನಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಮನವಿ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT